ಆಧ್ಯಾತ್ಮ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡರೆ ನಮ್ಮ ಜೀವನ ಸಾರ್ಥ

ದಾವಣಗೆರೆ-ಏ.28;ಧಾರ್ಮಿಕ, ಆಧ್ಯಾತ್ಮಗಳ ಪರಂಪರೆಗಳನ್ನು ಮುಂದಿನ ಪೀಳಿಗೆಗಳಿಗೆ ಅರಿವು ಮೂಡಿಸುತ್ತಿರುವ ಅದನ್ನು ಉಳಿಸುವ ಬೆಳೆಸುವ ನಮ್ಮೆಲ್ಲರ ಆದ್ಯ ಕರ್ತವ್ಯ ಸಮಾಜ ಮುಖಿ ಕಾರ್ಯ ಇಂತಹ ಸಂಸ್ಕಾರ ಸಂಸ್ಕೃತಿಗಳ ಕಾರ್ಯಕ್ರಮಗಳು ಸಮಾಜದ ಶ್ರೇಯೋಭಿವೃದ್ಧಿಗೆ ನಾಂದಿಯಾಗುತ್ತದೆ. ನಮ್ಮ ಹೊಟ್ಟೆ ಪಾಡಿನ ಕಾಯಕದೊಂದಿಗೆ ಸಮಾಜದ ಅಭಿವೃದ್ಧಿಗೆ ನಮ್ಮನ್ನು ನಾವು ತೊಡಗಿಸಿಕೊಂಡು ಸಕಾರಾತ್ಮಕ ಚಿಂತನೆ ಮಾಡಿದಾಗ ನಗುಮೊಗದ ಮಾತನಾಡುವ, ಮಾತನಾಡಿಸುವ ಪರಸ್ಪರ ಅನುಬಂಧ ನಮ್ಮ ಜೀವನಕ್ಕೆ ನವಶಕ್ತಿ ತುಂಬುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಕರ್ಕಿಯ ಶ್ರೀ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಜೀಯವರು ತಮ್ಮ ಆಶೀರ್ವವಚನದಲ್ಲಿ ಅಭಿಮತ ವ್ಯಕ್ತಪಡಿಸಿದರು.ದಾವಣಗೆರೆಯ ಶ್ರೀ ರೇಣುಕಾಮಂದಿರದ ಭವ್ಯದಿವ್ಯ ಸಭಾಂಗಣದಲ್ಲಿ ನಿನ್ನೆ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಶಾಸ್ತೊçÃಕ್ತವಾಗಿ ಪುರುಷರ, ಮಹಿಳೆಯರ ವಿವಿಧ ವಿಧ-ವಿಧಾನಗಳ ಧಾರ್ಮಿಕ ಕಾರ್ಯದ ಜತೆಯಲ್ಲಿ ಸ್ವಾಮೀಜಿಯವರ ಪಟ್ಟಾಭಿಷೇಕ ರಜತ ಮಹೋತ್ಸವ ಪ್ರಯುಕ್ತ “ಕಿರೀಟೋತ್ಸವ” ಸಮಾರಂಭದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.ದೈವಜ್ಞ ಬ್ರಾಹ್ಮಣ ಸಮಾಜದ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತೀ ವಿಜೃಂಭಣೆಯಿAದ ನಡೆಯಿತು. ಜ್ಞಾನೇಶ್ವರಿ ಮಹಿಳಾ ಮಂಡಳಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ದೈವಜ್ಞ ಮಹಿಳಾ ಮಂಡಳಿಯಿAದ ಸ್ವಾಗತಗೀತೆ ಹಾಡಿದರು. ದೈವಜ್ಞ ಬ್ರಾಹ್ಮಣ ಸಮಾಜದ ಪ್ರಧಾನ ಕಾರ್ಯದರ್ಶಿ ಸತೀಶ್ ಶ್ರೀಕಾಂತ್ ಸಾನು ಸ್ವಾಗತಿಸಿದರು. ಪ್ರಾಸ್ತಾವನೆಯಾಗಿ ಮಾತನಾಡಿದ ಸಮಾಜದ ನೂತನ ಅಧ್ಯಕ್ಷರಾದ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ ಇಂತಹ ಅಭೂತ ಪೂರ್ವ ವಿಜೃಂಭಣೆಗೆ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಜೈಜೋಡಿಸಿದ ಎಲ್ಲಾ ಸಮಾಜ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ದಾವಣಗೆರೆಯ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯರು ಶ್ರೀಕ್ಷೇತ್ರ ಕರ್ಕಿಮಠದ ಟ್ರಸ್ಟಿಗಳಾದ ಭೈರೇಶ್ವರ ಕುಡೇಕರ್, ಗೋವಾದ ಅನಿಲ್ ಜೋಡಾಂಕರ್ ಬೆಂಗಳೂರಿನ ಗಜಾನನ ದೈವಜ್ಞ ಅರುಣ್‌ಕುಮಾರ್, ಗಣಪತಿ ಆರ್.ಶೇಟ್ ಮುಂತಾದವರು ವೇದಿಕೆಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ರಾಘವೇಂದ್ರ ರೇವಣಕರ್ ವಂದಿಸಿದರು.