ತಾಳಿಕೋಟೆ:ಜೂ.24: ಆದ್ಯಾತ್ಮೀಕ ಕ್ಷೇತ್ರದಲ್ಲಿ ಛಾಪುಮೂಡಿಸುತ್ತಾ ಸಾಗಿಬಂದ ತಾಳಿಕೋಟೆಯ 98 ವರ್ಷದ ವಯೋಮಿತಿಹೊಂದಿದ್ದ ವೃದ್ದೆ ಮಾತೋಶ್ರೀ ಕಾಶಿಬಾಯಿ ಮಡಿವಾಳಯ್ಯ ದುರ್ಗದ ಈಕೆ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಕುರಿತು ಪ್ರಾರಂಭಗೊಂಡ ಸಪ್ತ ಭಜನಾ ಕಾರ್ಯದಂತೆ ಶ್ರೀ ಮಠದ ಮುಂಭಾಗದ ಅಂಗಡಿಯಲ್ಲಿ ಕುಳಿತು ಭಜನೆ ಪ್ರಾರಂಬಿಸಿದ್ದಾಳೆ.
ಮಾತೋಶ್ರೀ ಕಾಶಿಬಾಯಿ ಅವರು ಶಿರಡಿ ಶ್ರೀ ಸತ್ಯಸಾಯಿಬಾಬಾ, ಶ್ರೀ ಗುರುರಾಘವೇಂದ್ರ ಅಲ್ಲದೇ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ಶರಣಮುತ್ಯಾ ಅಲ್ಲದೇ ವಿವಿಧ ದೇವತೆಗಳ ಬಗ್ಗೆ ಹೆಚ್ಚಿಗೆ ಭಕ್ತಿಭಾವಹೊಂದಿದ್ದು ಶ್ರೀ ಖಾಸ್ಗತೇಶ ಬಾಬಾ ಎಂದು ಜಪಿಸದೇ ಇರಲಾಳಳು ಇವರ ಪತಿ 20 ವರ್ಷಗಳ ಹಿಂದೆ ನಿಧನ ಹೊಂದಿದ್ದು ಪತಿ ಮಡಿವಾಳಯ್ಯ ದುರ್ಗದಮಠ ಅವಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದವರಾಗಿದ್ದು ಇವರಿಗೆ ಇಬ್ಬರು ಪುತ್ರರು, 5 ಜನ ಪುತ್ರಿಯರು ಇದ್ದು ಮಾತೋಶ್ರೀ ಕಾಶಿಬಾಯಿ ಅವರಿಗೆ ದಿನದ ಪ್ರಸಾದಕ್ಕೂ ಉಡಲು ತೊಡಲು ಅಲ್ಲದೇ ಆಕೆಯ ಅಪೇಕ್ಷೆತನಕ್ಕೆ ಯಾವ ತೊಂದರೆ ಇಲ್ಲಾ ಆದರೆ ಸದಾ ಆದ್ಯಾತ್ಮೀಕ ಚಿಂತನೆಯಲ್ಲಿ ತೊಡಗಿದ ಈಕೆ ಶಾಸ್ತ್ರ ಪುರಾಣ, ಪುಣ್ಯ ಕಥೆಗಳನ್ನು ಕೇಳುವ ಹಾಗೂ ಹೇಳುವ ಅವ್ಯಾಸ ಇವರಿಗಿದ್ದು ಇನ್ನೂ ಇವರ ಆಯುಷ್ಯ ಆರೋಗ್ಯ ಹೆಚ್ಚಿಗೆ ಬೆಳೆದು ಭಕ್ತ ಸಮೂಹ ಇವರ ಮಾರ್ಗದರ್ಶನ ಅನುಸರಿಸಲಿ ಎಂಬುದೇ ನಮ್ಮ ಆಸೆ.