ಆಧ್ಯಾತ್ಮಿಕ ಸೇವೆ ಅವಶ್ಯಕ: ಬಿ.ಸತ್ಯನಾರಾಯಣ

ಕಲಬುರಗಿ,ಆ.14-ನಾವು ವಿಶ್ವವಿದ್ಯಾಲಗಳಲ್ಲಿ ಒಂದು ಪಿಎಚ್‍ಡಿ ಪದವಿ ಕೊಡಬೇಕಾದರೆ 4-5 ವರ್ಷ ಬೇಕಾಗುತ್ತದೆ. ಇಲ್ಲಿ ಇಂದು ರಾಜಯೋಗಿ ಬಿ.ಕೆ.ಪ್ರೇಮಭಾಯಿಯವರಿಗೆ ಈ ಗೌರವ ಡಾಕ್ಟರೇಟ್ ಅವರ 55 ವರ್ಷಗಳ ಸುದೀರ್ಘ ಅಧ್ಯಾತ್ಮಿಕ ಸೇವೆಯ ಫಲ. ಇಂದಿನ ವಿಶ್ವದ ಆಗು ಹೋಗುಗಳನ್ನು ನೋಡಿದರೆ, ಕೋಮುಲಭೆಗಳನ್ನು ಗಮನಿಸಿದರೆ, ಜಾತೀಯ, ಮತೀಯ ಜಗಳಗಳನ್ನು ಅವಲೋಕಿಸಿದರೆ ಆಧ್ಧಧ್ಯಾತ್ಮಿಕ ಸೇವೆ ಬಹಳ ಅವಶ್ಯಕವಾಗಿದೆ ಎಂದು ನನಗೆ ಅನಿಸುತ್ತದೆ ಎಂದು ಕಲಬುರ್ಗಿ ಕೇಂದ್ರಿಯ ವಿಶ್ವ ವಿದ್ಯಲಯದ ಉಪಕುಲಪತಿಗಳಾದ ಪೆÇ್ರ.ಬಿ.ಸತ್ಯನಾರಾಯಣರವರು ನುಡಿದರು.
ಅವರು ಬ್ರಹ್ಮಾಕುಮಾರಿ ರಾಜಯೋಗ ಕೇಂದ್ರದ ನಿರ್ದೇಶಕರಾದ ರಾಜಯೋಗಿ ಬಿ ಕೆ ಪ್ರೇಮಭಾಯಿಯವರಿಗೆ ಸೌಥ್À ವೆಸ್ಟರ್ನ ಅಮೇರಿಕದ ವಿಶ್ವವಿದ್ಯಾಲಯವು ಅವರು ಕಳೆದ 55 ವರ್ಷಗಳ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ವದವಿಯನ್ನು ಕೊಡುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರದಲ್ಲಿ ದೆಹಲಿಯ ಮಾನವ ಸೇವ ಸಂಘದ ಅಧ್ಯಕ್ಷರಾದ ಡಾ.ಮಿಲಿಂದ ರವರು ಮಾತನಾಡುತ್ತ ಈ ಪದವಿ ಇಂತಹ ತ್ಯಾಗಿ ತಪಸ್ವಿ ಸೋದರರಿಗೆ ಕೊಟ್ಟ ನಾವು ಧನ್ಯರಾದೆವು ಎಂದನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನಗರದ ಉದ್ಯಮಿಗಳಾದ ಸಂಪತ ಗಿಲ್ಡಾ, ತಪಾಡಿಯಾ, ಅನಿಲ ಕಳಸ್ಕರ ಹಾಗು ಮಾಜಿ ಶಾಸಕ ಅಪ್ಪುಗೌಡ ಪಾಟಿಲರು ಕೂಡ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ತೆಲಂಗಾಣಾ, ಮಹಾರಾಷ್ಟ್ರ ರಾಜ್ಯದ, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ನೂರಾರು ರಾಜಯೋಗಿ ಸೋದರ, ಸೋದರಿಯರು ಪಾಲೊಂಡಿದ್ದರು.
ಸಂಸ್ಥೆಯ ಮುಖ್ಯಸ್ಥರಾದ ರಾಜಯೋಗಿನಿ ಬಿ ಕೆ ವಿಜಯಾದೀದಿಯವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.