ಆಧ್ಯಾತ್ಮಿಕ ಸಮಗ್ರ ಸಾಹಿತ್ಯ ಸಂಪುಟಗಳು ಬಿಡುಗಡೆ

ವಿಜಯಪುರ: ಮಾ.31: ಜ್ಞಾನಯೋಗಾಶ್ರಮ ಆವರಣದಲ್ಲಿ ಈಶಾವಾಶ್ಯೋಪನಿಷತ್, ಕೇನೋಪನಿಷತ್, ಕಠೋಪನಿಷತ್, ಮುಂಡಕೋಪನಿಷತ್, ಮಾಂಡೂಕ್ಯೋಪನಿಷತ್, ಶ್ವೇತಾಶ್ವತರೋಪನಿಷತ್, ಪಾತಂಜಲಿ ಯೋಗಸೂತ್ರ, ಶ್ರೀಮದ್ ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಅಲ್ಲಮಪ್ರಭುದೇವರ ವಚನ ನಿರ್ವಚನ, ಗ್ರಂಥಗಳು ವಿತರಣಾ ಕಾರ್ಯಕ್ರಮ ನೆರವೇರಿತು.
ಸಹೋದರಿ ವೀಣಾ ಬನ್ನಂಜಿ ಗ್ರಂಥ ಪರಿಚಯ ಮಾಡುತ್ತಾ, ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳು ದಿನನಿತ್ಯ ನೆನೆಯುತ್ತಾ, ಇನ್ನು ನಮ್ಮ ಮನದಲ್ಲಿ ಇದ್ದಾರೆ ನನಗೆ ಹಲವಾರು ಅವರ ಕಾರ್ಯಕ್ರಮಕ್ಕೆ ಆಗಮಿಸಿದಾಗ ವೇದಿಕೆಯಲ್ಲಿ ಮಾತನಾಡಲು ಹಲವಾರು ಬಾರಿ ಕರೆದರೂ, ನಾನು ಅವರ ಮುಂದೆ ಮಾತನಾಡಲಿಲ್ಲ ಎಂದು ಭಾವನಾತ್ಮಕವಾಗಿ ಹೇಳುತ್ತಾ, ಜ್ಞಾನ ಪರಂಪರೆ ವಿಷಯದ ಬಗ್ಗೆ ಹೇಳಿದ ಹಾಗೆ ನಾನೂ ಇಂದು ನನಗೆ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿಯವರ ಹಾಗೂ ಪರಮಪೂಜ್ಯ ಸಿದ್ಧೇಶ್ವರ ಸ್ವಾಮಿಜಿಯವರ ಬಗ್ಗೆ ಮಾತನಾಡುವುದು ನನ್ನ ಸೌಭಾಗ್ಯವಾಗಿದೆ, ಜನಸಾಮಾನ್ಯರಿಗೆ ಸುದೀರ್ಘವಾದ ವಿವರಣೆ ನೀಡಿ ತಿಳಿಯುವ ಹಾಗೆ ತಮ್ಮ ಪ್ರವಚನದಲ್ಲಿ ಕತೆಯ ಮೂಲಕ ಹಲವಾರು ವಿಷಯಗಳನ್ನು ನಾಡಿನಲ್ಲಿ ಹೇಳಿ ಭಕ್ತ ಸಮೂಹದ ಜನರನ್ನು ಪುನಿತರಾಗಿ ಮಾಡಿದ್ದಾರೆ, ಹೀಗೆ ಸಹೋದರಿ ವೀಣಾ ಬನ್ನಂಜಿ ಗ್ರಂಥ ಪರಿಚಯ ಮಾಡಿಕೊಟ್ಟರು.
ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರು ಶ್ರೀ ಪರಮಪೂಜ್ಯ ಸಿದ್ಧೇಶ್ವರ ಸ್ವಾಮಿಜಿಯವರನ್ನು ನೆನೆಯುತ್ತಾ, ಇಂತ ನಡೆದಾಡುವ ದೇವರನ್ನು ನಾವು ಪಡೆದಿರುವುದು ನಮ್ಮ ಭಾಗ್ಯ ಎಂದು ಹೇಳುತ್ತಾ, ನಾನು ಅವರನ್ನು ದರ್ಶನ ಪಡೆಯಲು ಬಂದಾಗ ಶಿಕ್ಷಣದ ಬಗ್ಗೆ ಮಾತನಾಡು ಎಂದು ಹೇಳುತ್ತಿದ್ದರು, ಯಾವುದೇ ಊರಿನಲ್ಲಿ ಪ್ರವಚನ ಪ್ರಾರಂಭಿಸಿದರೆ ಆ ಭಾಗದ ಕೃಷಿ, ವ್ಯವಹಾರ, ಶಿಕ್ಷಣ ಅನೇಕ ವಿಚಾರಗಳನ್ನು ಭಕ್ತ ಸಮೂಹದ ಜೊತೆ ಸಮಾಲೋಚನೆಯನ್ನು ಮಾಡುತ್ತಿದ್ದರು ಎಂದು ಮಾತನಾಡಿದರು.
ಪರಮಪೂಜ್ಯ ಅಮೃತಾನಂದ ಸ್ವಾಮಿಜಿಗಳು ಪ್ರಾಸ್ಥಾವಿಕವಾಗಿ ಮಾತನಾಡಿದರು. ಸ್ವಾಗತ ಜಂಬುನಾಥ ಕಂಚಾಣಿ ಹಾಗೂ ಹರ್ಷಾನಂದ ಸ್ವಾಮಿಜಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದನಾ ಸಾವಳಗಿ ಸಂಘಡಿಗರು ಪ್ರಾರ್ಥನೆ ಗೀತೆ ನಡೆಯಿತು.
ದಿವ್ಯ ಸಾನಿಧ್ಯವನ್ನು ವಹಿಸಿದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು ಅಧ್ಯಕ್ಷರು ಜ್ಞಾನಯೋಗಾಶ್ರಮ ವಿಜಯಪುರ. ಜಗದ್ಗರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯಮಠ ಗದಗ, ಜಗದ್ಗುರು ಪೂಜ್ಯ ಶ್ರೀ ಅಭಿನವ ಸದಾಶಿವಾನಂದ ಮಹಾಸ್ವಾಮಿಗಳು, ಶಿವಾನಂದಮಠ ಗದಗ, ಪೂಜ್ಯ ಶ್ರೀ ನಿರ್ಭಯಾನಂದ ಸ್ವಾಮಿಗಳು, ರಾಮಕೃಷ್ಣ ಆಶ್ರಮ ಗದಗ. ಪೂಜ್ಯ ಶ್ರೀ ಶ್ರದ್ಧಾನಂದ ಸ್ವಾಮಿಗಳು ಶಿವಾನಂದಮಠ ಸದಲಗಾ. ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದರು ಹಾಗೂ ಅನೇಕ ಪೂಜ್ಯ ಮಹಾತ್ಮರು, ಸಹಸ್ರಾರು ಸದ್ಭಕ್ತರು, ಗಣ್ಯಮಾನ್ಯರು ಭಾಗವಹಿಸಿ ದಿವ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ಉಪಸ್ಥಿತಿಯಲ್ಲಿದರು.