ಆಧ್ಯಾತ್ಮಿಕ ಸಂಪತ್ತು ಶಾಂತಿ ನೆಮ್ಮದಿಗೆ ಮೂಲ

ಕಲಬುರಗಿ:ಮಾ. 13:ಭೌತಿಕ ಸಂಪತ್ತು ಬೆಟ್ಟದಷ್ಟುಯಿದ್ದರು ಶಾಶ್ವತವಲ್ಲ. ಸತ್ಯ ಧರ್ಮವೆ ನಿಜವಾದ ಸಂಪತ್ತು. ಆಧ್ಯಾತ್ಮಿಕ ಚಿಂತನಗಳು ಶಾಂತಿ ನೆಮ್ಮದಿಗೆ ಮೂಲವೆಂದು ನಿಲೂರಿನ ಶ್ರೀ ಗುರು ಶಶಿಕುಮಾರ ದೇವರು ನುಡಿದರು.

ಅವರು ನಗರದ ಜೆ. ಆರ್. ನಗರ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ 23ನೇ ಜಾತ್ರಾಮಹೋತ್ಸವ ಅಂಗವಾಗಿ ಸಾಗಿಬಂದ ಸಾಂಬಶಿವಯೋಗೇಶ್ವರ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನ್ನಾಡುತ ಅಂತರಂದ ಬೆಳಕಿಗಿಂತ ಬಹಿರಂಗ ಬೆಳಕೆ ಹೆಚ್ಚೆಂದು ಮನ್ಯುಷ ತಿಳಿಯುತ್ತಾನೆ. ಆದರೆ ಆಧ್ಯಾತ್ಮಿಕ ಸಂಪತ್ತೆ ಶಾಂತಿ ನೆಮ್ಮದಿಗೆ ಮೂಲವೆಂದು ನುಡಿದರು

ವೆ. ರೇವಣಸಿದ್ದಯ್ಯ ಸ್ವಾಮಿ ಸುಂಟನೂರ ಪುರಾಣಿಕರಾದ ನಾಗಲಿಂಗಯ್ಯ ಸ್ವಾಮಿ ವಡಗೇರಾ ದೇವಸ್ಥಾನದ ಅಧ್ಯಕ್ಷರಾದ ಬಸವರಾಜ ನಿಲೂರ, ಪರಮೇಶ್ವರ ಹಳಿಜೋಳ, ಕಾರ್ಯದರ್ಶಿಗಳಾದ ಶರಣಗೌಡ ಪಾಟೀಲ, ಬಂಡಪ್ಪ ಪಂಚಾಳ, ಸಿದ್ದಲಿಂಗ ದುರ್ಗೆ, ವೀರಸಂಗಪ್ಪ ಬೋಳ್ಳಾ, ವೀರಭದ್ರಪ್ಪ ವರದಾನಿ, ಶಿವಪುತ್ರ ಜೋಗುರು, ಬಸವರಾಜ ಪಸಾರ, ಮಲ್ಲಿಕಾರ್ಜುನ ಕುಲಾಲಿ ಇದ್ದರು.

ಶರಣಕುಮಾರ ಯಾಳಗಿ ಹಾಗೂ ಸಿದ್ದಣ್ಣ ದೇಸಾಯಿ ಕಲ್ಲೂರ ಇವರಿಂದ ಸಂಗೀತ ಜರಗಿತು ಶಾಂತವೀರ ಪಾಟೀಲ ನಿರುಪಿಸಿದರು