ಆಧ್ಯಾತ್ಮಿಕ ಪರಂಪರೆಗಳಲ್ಲಿ ಬ್ರಹ್ಮಾಕುಮಾರಿ ಈಶ್ವರಿಯೂ ಒಂದು

ಚಾಮರಾಜನಗರ:ಮಾ:28: ಪ್ರಪಂಚದ ಪ್ರಮುಖ ಆಧ್ಯಾತ್ಮಿಕ ಪರಂಪರೆಗಳಲ್ಲಿ ಒಂದಾದ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಯದ ಮುಖ್ಯ ಆಡಳಿತಾಧಿಕಾರಿಗಳಾಗಿ, ಅದರ ಮಾರ್ಗದರ್ಶಿ ಚೇತನವಾಗಿ, ಮಹಿಳೆಯರ ಮುಂದಾಳತ್ವದಲ್ಲಿ ವಿಶ್ವದ ಅತ್ಯಂತ ವಿಸ್ತಾರವುಳ್ಳ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳನ್ನು ಹೊಂದಿರುವ ಈ ಸಂಸ್ಥೆಯಲ್ಲಿ ದಶಕಕ್ಕೂ ಹೆಚ್ಚಿನ ಅವಧಿಗೆ ಯಶಸ್ವಿ ನೇತೃತ್ವ ವಹಿಸಿದವರು ಡಾ.ರಾಜಯೋಗಿನಿ ದಾದಿ ಜಾನಕೀಜಿ.
ಅವರು ಹುಟ್ಟಿದ್ದು ಸಿಂಧ್ ಹೈದರಾಬಾದಿನಲ್ಲಿ (1916). ತಮ್ಮ ಎಳೆಯ ವಯಸ್ಸಿನಲ್ಲಿಯೇ ದಾದಾ ಲೇಖರಾಜರನ್ನು ಬಲ್ಲವರಾಗಿದ್ದರು. ದಾದಾ ಲೇಖರಾಜರು ಈಶ್ವರೀಯ ವಿಶ್ವ ವಿದ್ಯಾಯದ ಸ್ಥಾಪಕರಾಗಿ ನಂತರ ಪ್ರಜಾಪಿತ ಬ್ರಹ್ಮಾ ಬಾಬಾ ಎಂದು ಕರೆಯ್ಪಟ್ಟರು. 1936ರಲ್ಲಿ ದಾದೀಜಿಯವರು ಬ್ರಹ್ಮಾ ಬಾಬಾ ರವರನ್ನು ಭೇಟಿ ಮಾಡಿದಾಗ ಅವರಲ್ಲಿ ಆಗಿದ್ದ ಅತ್ಯಂತ ಆಳವಾದ ಆಧ್ಯಾತ್ಮಿಕ ಪರಿವರ್ತನೆಯನ್ನು ಕಂಡು ಆ ಪ್ರೇರಣೆಯಿಂದ ತಮ್ಮ ಜೀವನ ನೌಕೆಯ ದಿಕ್ಕು ಬದಲಿಸಿ 1939ರಲ್ಲಿ ಆಧ್ಯಾತ್ಮಿಕ ಸಂಘಟನೆಯಾದ ‘ಓಂ ಮಂಡಲಿ’ಗೆ ಸೇರ್ಪಡೆಯಾದರು. ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಯ ನಂತರ ರಾಜಸ್ಥಾನದಲ್ಲಿರುವ ಅಬು ಪರ್ವತಕ್ಕೆ ಸ್ಥಳಾಂತರವಾದರು. ಅಲ್ಲಿ ಈ ಸಂಘಟನೆಯು ಭಾರತದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಯ ಎಂದೂ ಪಾಶ್ಚಿಮಾತ್ಯ ದೇಶಗಳಲ್ಲಿ ವಿಶ್ವ ಆಧ್ಯಾತ್ಮಿಕ ವಿಶ್ವ ವಿದ್ಯಾಯ ಎಂದೂ ಗುರುತಿಸಲ್ಪಟ್ಟಿತು. 1974ರಲ್ಲಿ ದಾದಿ ಜಾನಕೀಜಿಯವರು ಸಂಸ್ಥೆಯು ಕೈಗೊಂಡ ವಿದೇಶಗಳ ಸೇವೆಯ ನಾಯಕತ್ವವನ್ನು ವಹಿಸಿಕೊಂಡರು.
ದಾದೀಜಿ 1992ರಲ್ಲಿ ಬ್ರಝಿಲ್ ದೇಶದ ರಯೋ ಡಿ ಜನೈರೋದಲ್ಲಿ ಏರ್ಪಾಡಾಗಿದ್ದ ‘ಅರ್ಥ್ ಸಮಿಟ್’ ನಲ್ಲಿ ಸಮಾಲೋಚಕರಾಗಿದ್ದರು ಮತ್ತು 2000ದ ಇಸವಿಯಲ್ಲಿ ನ್ಯೂಯಾರ್ಕ್‍ನಲ್ಲಿ ವಿಶ್ವ ಸಂಸ್ಥೆಯವರು ಆಯೋಜಿಸಿದ್ದ ‘ಮಿಲೇನಿಯಮ್ ಪೀಸ್ ಸಮಿಟ್’ ನಲ್ಲಿ ಪ್ರಧಾನ ಭಾಷಣಕಾರರಲ್ಲಿ ಒಬ್ಬರಾಗಿದ್ದರು. ತೊಂಭತ್ತರ ದಶಕದಿಂದ ಈಶ್ವರೀಯ ವಿಶ್ವ ವಿದ್ಯಾಯವು ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ ಸಾಮಾನ್ಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದೆ.
2007ರಲ್ಲಿ ದಾದಿ ಪ್ರಕಾಶಮಣೀಜಿ ನಂತರ ದಾದಿ ಜಾನಕಿಯವರು ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದರು. ಆಗಲೇ ಅವರಿಗೆ ವಯಸ್ಸು 91 ದಾಟಿತ್ತು. ಅವರು ಸಂಸ್ಥೆಯನ್ನು ಮುಂದಿನ 13 ವರ್ಷಗಳವರೆಗೆ ಅದ್ಭುತವಾಗಿ ಮುನ್ನಡೆ ಸಿದರು. ದಾದೀಜಿಯವರು ಎಂತಹ ಉತ್ಸಾಹದ ಚಿಲುಮೆಯಾಗಿದ್ದರು ಎಂದರೆ 103ನೆಯ ವಯಸ್ಸಿನಲ್ಲಿ ದುಬೈ, ನೈರೋ, ಲಂಡನ್ ಮತ್ತು ನ್ಯೂಯಾರ್ಕ್‍ಗೆ 2019ರಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಸೇವಾ ಪ್ರವಾಸ ಮಾಡಿದರು.
ಅಂತಹ ಸದಾ ವಿನೀತರೂ, ಸರ್ವಪ್ರಿಯರೂ, ಪವಿತ್ರರೂ, ಸತ್ಯಾತ್ಮರೂ, ಸಂಪೂರ್ಣ ಬದ್ಧತೆಯು ಳ್ಳವರೂ, ಸರಳ ಜೀವಿಗಳೂ ಹಾಗೂ ದಿವ್ಯ ವ್ಯಕ್ತಿತ್ವವಿದ್ದ ದಾದೀಜಿ ಈ ಸೃಷ್ಠಿ ನಾಟಕದ ಚಿರಂತನ ಆಟದಲ್ಲಿ ತಮ್ಮ ಪಾತ್ರವನ್ನು 27 ಮಾರ್ಚ್ 2020 ರಂದು ಕೊನೆಗೊಳಿಸಿದರೂ ಅವರ ಸತ್ಯತೆಯ, ಪರಿಶುದ್ಧತೆಯ ಮತ್ತು ಸರಳತೆಯ ಜೀವನ ತತ್ವಗಳು ನಭೋಮಂಡದಲ್ಲಿ ಇಂದಿಗೂ ಮಾರ್ದನಿಸುತ್ತಿವೆ.