ಆಧ್ಯಾತ್ಮಿಕ ಅರಿವಿನ ಮೂಲಕ ಪ್ರಪಂಚ ಮತ್ತು ಪಾರಮಾರ್ಥಿಕ ಅರಿತು ಬಾಳಬೇಕಾಗಿದೆ:ಕಾಶೀ ಜಗದ್ಗುರುಗಳು

ಕಲಬುರಗಿ,ನ.24:ಪಂಚಾಚಾರ್ಯರು ಮೌಲ್ಯಾಧಾರಿತ ಜೀವನವನ್ನೇ ಅಮೂಲ್ಯ ಸಂಪತ್ತೆಂದು ಬೋಧಿಸಿದ್ದಾರೆ, ಆಧ್ಯಾತ್ಮಿಕ ಅರಿವಿನ ಮೂಲಕ ಪ್ರಪಂಚ ಮತ್ತು ಪಾರಮಾರ್ಥಿಕ ಅರಿತು ಬಾಳಬೇಕಾಗಿದೆ ಎಂದು ಕಾಶೀ e್ಞÁನ ಸಿಂಹಾಸನಾಧೀಶ್ವರ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಕೇಸರಿಬೆಟ್ಟದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮದ ಧರ್ಮಸಭೆಯನ್ನು ಉದ್ಘಾಟಿಸಿ ತಮ್ಮ ಆಶೀರ್ವಚನದಲ್ಲಿ ಮನುಷ್ಯನ ಜೀವನದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಗಳನ್ನು ಸಂಪಾದಿಸಬೇಕು. ದ್ವಿತಿಯ ಸಾಂಭಶಿವಾಚಾರ್ಯರು ಲೋಕ ಕಲ್ಯಾಣಕ್ಕಾಗಿ ಚಾತುÀರ್ಮಾಸದಲ್ಲಿ ತಪೋನುಷ್ಠಾನಗಳನ್ನು ಮಾಡಿ ಜನಕಲ್ಯಾಣಕ್ಕಾಗಿ ಲಕ್ಷದೀಪೋತ್ಸವ ಮಾಡುತ್ತಿರುವುದು ಸಂತಸದ ಸಂಗತಿ ಎಂದು ನುಡಿದರು.
ವಿ.ಕೆ.ಸಲಗರದ ದ್ವಿತಿಯ ಸಾಂಭ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡುತ್ತ ಕಾಶೀ ವಿಶ್ವನಾಥ ಹಾಗೂ ಗಂಗಾಮಾತೆ ಸಂಗಮವೇ ಕಾಶೀ ಕ್ಷೇತ್ರವಾಗಿದ್ದು, ಅದಕ್ಕಾಗಿ ಕಾಶೀಯಿಂದ ಜಗದ್ಗುರುಗಳನ್ನು ನಾವು ಈ ಕಾರ್ಯಕ್ರಮದಲ್ಲಿ ಬರಮಾಡಿಕೊಂಡು ನಮ್ಮ ನಿಮ್ಮೆಲ್ಲರನ್ನು ಆಶೀರ್ವದಿಸಿ ಕೃತಾರ್ಥರನ್ನಾಗಿ ಮಾಡಿದ್ದಾರೆ ಎಂದು ನುಡಿದರು.
ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು, ಚಂದನಕೇರಾದ ರಾಚೋಟೇಶ್ವರ ಶಿವಾಚಾರ್ಯರು, ನಾಲ್ವತ್ವಾಡದ ಗುರುಸ್ವಾಮಿಗಳು ಇದ್ದರು. ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡರವರು ಮಾತನಾಡುತ್ತ ಶ್ರೀ ಕಾಶೀ ಜಗದ್ಗುರುಗಳು ಹಾಗೂ ದ್ವಿತಿಯ ಸಾಂಭ ಶಿವಾಚಾರ್ಯರ ಆಶೀರ್ವಾದದಿಂದ ಅಭಿವೃದ್ದಿ ಕೆಲಸಗಳನ್ನು ನಾವು ಮಾಡುತ್ತೇವೆ, ಅಫಜಲಪೂರ ಶಾಸಕರಾದ ಎಂ.ವಾಯ್. ಪಾಟೀಲರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಕೇಸರಿ ಬೆಟ್ಟದಿಂದ ಮುಖ್ಯ ರಸ್ತೆಯವರೆಗೆ ರಸ್ತೆ ಮಾಡಿಸಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಸೇಡಮ್ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಮಾಜಿ ಶಾಸಕರಾದ ರೇವೂನಾಯಕ ಬೆಳಮಗಿ ಹಾಗೂ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೈಶ್ರೀ ಮತ್ತಿಮೂಡ, ಸುಭಾಷ ಬಿರಾದಾರ ಕಮಲಾಪೂರ, ಸತೀಷ ಸೊರಡೆ, ಸಂಗಮೇಶ ವಾಲಿ, ಭೀಮಾಶಂಕರ ಜಮಾದಾರ, ಅಮರನಾಥ ಪಾಟೀಲ, ಬಸವರಾಜ ದೇಶಮುಖ, ಶಿªಶರಣಪ್ಪ ಶೀರಿ, ನಾಗರಾಜ ಮೂಲಗೆ ಇದ್ದರು. ವೀರಯ್ಯಸ್ವಾಮಿ ನರೋಣಾ ಸರ್ವರನ್ನು ಸ್ವಾಗತಿಸಿದರು, ನವಲಿಂಗ ಪಾಟೀಲ ನಿರೂಪಿಸಿದರು.