
ಕಲಬುರಗಿ,ಆ.19:ಲಿಂಗಾಂಗ ಸಾಮರಸ್ಯದ ಆಧ್ಯಾತ್ಮ ಮಾರ್ಗವನ್ನು ತೋರುವಾತನೇ ಗುರು.ಗುರು ಶಿಷ್ಯನಿಗೆ ಧರ್ಮತತ್ವ ಬೋಧನೆಯ ಜೊತೆಗೆ ಮೋಕ್ಷ ಪಡೆಯುವ ಮಾರ್ಗ ಅನುಸರಿಸುವ ವಿಧಿವಿಧಾನ ತಿಳಿಸಿಕೊಡುವ ನು ಕತ್ತಲಿನಿಂದ ಬೆಳಕಿನೆಡೆಗೆ,ಅಜ್ಞಾನದಿಂದ ಜ್ಞಾನದೆಡೆ ಗೆ,ಅಸತ್ಯದಿಂದ ಸತ್ಯದೆಡೆಗೆ,ಭವದಿಂದ ಅನುಭಾವದೆ ಡೆಗೆ ಕೊಂಡೊಯ್ಯುವವನೇ ಗುರು ಎಂದು ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು
ಮಕ್ತಂಪೂರದ ಗದ್ದುಗೆಮಠದಲ್ಲಿ ನಡೆದ ಸದ್ಭಾವ ಗೋಷ್ಠಿಯಲ್ಲಿ ಅಷ್ಟಾವರಣಗಳಲ್ಲಿ ಗುರು ಕುರಿತು ಉಪನ್ಯಾಸ ನೀಡುತ್ತ ವೀರಶೈವ ಲಿಂಗಾಯತದ ಪ್ರಧಾ ನ ತತ್ವಗಳಾದ ಅಷ್ಟಾವರಣ ಅಂಗ,ಪಂಚಾಚಾರ ಪ್ರಾಣ,ಷಟಸ್ಥಲ ಆತ್ಮವಾಗಿದೆ.ಅಷ್ಟಾವರಣದಲ್ಲಿ ಗುರು,ಲಿಂಗ,ಜಂಗಮ,ವಿಭೂತಿ,ರುದ್ರಾಕ್ಷಿ,ಮಂತ್ರ, ಪಾದೋಕ, ಪ್ರಸಾದ ಇವು ಎಂಟು ಜೀವನ ಸರ್ವಾಂಗೀ ಣ ಅಭಿವೃದ್ಧಿ ಸಾಧಿಸುವವು ಎಂದು ತಿಳಿಸಿದರು.
ಉಪನ್ಯಾಸಕ ಡಾ.ನಾನಾಗೌಡ ಪಾಟೀಲ ಸದ್ಭಾವ ಗೋಷ್ಠಿಯಲ್ಲಿ ಅನುಭಾವದ ನೆಲೆ ಕಂಡುಕೇಳಿ ತಾವುವ ವಿಚಾರ ಶಕ್ತಿಗೆ ಬೇಕಾಗುವ ಅಂಶಗಳು ದೊರೆಯುತ್ತವೆ ಎಂದರು.
ಸಾನಿಧ್ಯವಹಿಸಿದ ಪೂಜ್ಯಶ್ರೀ ಚರಲಿಂಗೇಶ್ವರ ಮಹಾ ಸ್ವಾಮಿಗಳು ಸಮಾಜದ ಧರ್ಮತತ್ವಗಳನ್ನು ಅರಿತುಕೊಳ್ಳಬೇಕು.ನಮ್ಮ ಸಾಧನೆಯ ಹೆಜ್ಜೆಗುರುತು ಗುರುವಾಗಿದ್ದಾನೆ.ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ.ಗುರು ದೊಡ್ಡ ಸ್ಥಾನವಿದೆ ಎಂದು ಆಶೀರ್ವಚನ ನೀಡಿದರು.ಶ್ರಾವಣ ಮಾಸ ಪ್ರತಿ ದಿವಸ ಪಾದ ಪೂಜೆ ನಡೆಯುತ್ತದೆ ಭಕ್ತಾದಿಗಳು ಭಾಗವಹಿಸಲು ಕೋರಿದರು.
ಸುಭದ್ರಾತಾಯಿ ಮಲ್ಕಿಕಾರ್ಜುನ ದಸ್ತಾಪೂರ ದಾಸೋಹಿಗಳನ್ನು ಪೂಜ್ಯರು ಸತ್ಕರಿಸಿದರು.ರೇವಣ
ಸಿದ್ಧೇಶ್ವರ ಅಕ್ಕನ ಬಳಗದಿಂದ ಭಜನೆ ನಡೆಯಿತು.ಸೌಮ್ಯ ಮತ್ತು ಪ್ರತಿಭಾ ಪ್ರಾರ್ಥಿಸಿದರು. ಉಪನ್ಯಾಸಕಿ ಶೈಲಜಾ ಶಿವಾನಂದ ನನ್ನಾ ನಿರೂಪಸಿದರು.ವಿರೇಶ ಸಜ್ಜನ ಮದಿಸಿದರು ಕರಿಬಸವಯ್ಯ ಮಂಗಳಾರತಿ ಹಾಡಿದರು