ಆಧ್ಯಾತ್ಮದ ಉನ್ನತಿಗೆ ಆಂತರಿಕ ಮೌಲ್ಯ ಅಗತ್ಯ: ಡಾ. ಸಿದ್ಧಲಿಂಗ ಸ್ವಾಮೀಜಿ

ಕುರಿಕೋಟಾ (ಕಮಲಾಪುರ ತಾಲೂಕು):ಮಾ.24: ಪ್ರಯತ್ನ ಮತ್ತು ಪರಿಶ್ರಮವಿಲ್ಲದೇ ಮನುಷ್ಯ ಆಧ್ಯಾತ್ಮದ ಉನ್ನತಿ ಸಾಧಿಸಲು ಸಾಧ್ಯವಿಲ್ಲ. ಆಧ್ಯಾತ್ಮದ ಉನ್ನತಿಗೆ ಆಂತರಿಕ ಮೌಲ್ಯ ಅಗತ್ಯ. ಇಂತಹ ಮೌಲ್ಯ ಜೀವನದ ಉತ್ಕರ್ಷತೆಗೆ ಸೋಪಾನವಾಗುತ್ತದೆ ಎಂದು ಕಮಲಾಪುರ ತಾಲೂಕು ಕುರಿಕೋಟಾ ಶಿವಲಿಂಗೇಶ್ವರ ವಿರಕ್ತಮಠದ ಪೀಠಾಧ್ಯಕ್ಷರಾದ ಡಾ|| ಸಿದ್ಧಲಿಂಗ ಶ್ರೀಗಳು ಹೇಳಿದರು.
ಕಮಲಾಪುರ ತಾಲೂಕಿನ ಕುರಿಕೋಟಾದ ಶಿವಲಿಂಗೇಶ್ವರ ವಿರಕ್ತಮಠದ ಆವರಣದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 22-03-2023ರ ಬುಧವಾರ ಸಂಜೆ 7 ಗಂಟೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭವ್ಯ ಬಂಗಲೆ, ಕೋಟಿಗಟ್ಟಲೆ ಹಣದಿಂದ ನೆಮ್ಮದಿ ಸಾಧ್ಯವಿಲ್ಲ. ಆಧ್ಯಾತ್ಮದೊಂದಿಗೆ ಆಂತರಿಕ ಮೌಲ್ಯ ಚೆನ್ನಾಗಿ ಇದ್ದರೆ ಮಾತ್ರ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಧರ್ಮ ಪಾಲನೆ, ದೇವರ ಪೂಜೆ, ಮನುಷ್ಯತ್ವ, ಸಾಮಾಜಿಕ ಕಳಕಳಿಯಿಂದ ಸಮಾಜದಲ್ಲಿ ಗೌರವ ಸಂಪಾದನೆಯಾಗುತ್ತದೆ ಎಂದರು.
ಮನುಷ್ಯ ಮನುಷ್ಯರ ನಡುವೆ ಇರುವ ಸಂಬಂಧಗಳು ಬಹಳಷ್ಟು ಹದಗೆಟ್ಟಿವೆ. ಸಂಬಂಧಗಳ ಮಧ್ಯೆ ಗೋಡೆ ನಿರ್ಮಾಣವಾಗುತ್ತಿದೆ. ಇಂತಹ ಗೋಡೆ ನಿರ್ಮಿಸದೆ ಮನಸ್ಸುಗಳ ನಡುವೆ ಸೇತುವೆ ನಿರ್ಮಿಸುವ ಕೆಲಸವಾಗಬೇಕಾಗಿದೆ. ಭಾವನೆಗಳನ್ನು ಧರ್ಮದಿಂದ ಮಾತ್ರ ಬೆಸೆಯಲು ಸಾಧ್ಯ. ದಾರಿ ತಪ್ಪಲು ಹಲವು ಮಾರ್ಗ. ಆದರೆ ಬದುಕಲು ಇರುವುದು ಒಂದೇ ದಾರಿ. ಅದುವೇ ಆಧ್ಯಾತ್ಮ ಎಂದು ಅಭಿಪ್ರಾಯಿಸಿದರು.
1997ರಲ್ಲಿ ತುಮಕೂರು ಜಿಲ್ಲೆಯ ಗವಿಯಲ್ಲಿ ಮೊಟ್ಟಮೊದಲ ಬಾರಿಗೆ 21 ದಿನಗಳ ಕಾಲ ಅನುಷ್ಠಾನ (ಮೌನವ್ರತ), ಧಾರವಾಡ ಜಿಲ್ಲೆಯ ಉಳವಿಯ ದಟ್ಟ ದಟ್ಟಡವಿಯಲ್ಲಿ ತಾವೇ ¸್ವÀತಃ ಕುಟೀರ ನಿರ್ಮಿಸಿಕೊಂಡು ಪ್ರತಿವರ್ಷ ಎರಡು-ಮೂರು ತಿಂಗಳು ಅನುಷ್ಠಾನ, ಭದ್ರಾವತಿ ತಾಲೂಕಿನ ಗೋಣಿಬೀಡು ಮಠದಲ್ಲಿ ಒಂದು ಸಾವಿರ ದಿನ ಅನುಷ್ಠಾನ ನಡೆಸಲಾಗಿತ್ತು. ಆಧ್ಯಾತ್ಮದ ಉನ್ನತಿಗಾಗಿ ಹಾಗೂ ಸಮಾಜದ ಒಳಿತಿಗಾಗಿ ಕಮಲಾಪುರ ತಾಲೂಕಿನ ಋಷ್ಯಶೃಂಗದ ಪ್ರದೇಶದಲ್ಲಿ 41 ದಿನಗಳ ಅನುಷಾ ್ಠನ ಕೈಗೊಳ್ಳಲು ಸಂಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸರಡಗಿ ಚಿಕ್ಕವೀರೇಶ್ವರ ಮಠದ ಡಾ|ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ ಶುದ್ಧ ಮನಸ್ಸಿನಿಂದ ಮಾಡುವ ಕೆಲಸ ಯಶಸ್ಸಿಗೆ ಕಾರಣವಾಗುತ್ತದೆ. ಬುದ್ಧಿ ಬೆಳೆದಂತೆ ಭಾವನೆಗಳು ಬೆಳೆಯಬೇಕಾಗಿದೆ. ಕೆಡುವುದಕ್ಕಿಂತ ಕಟ್ಟುವುದಕ್ಕೆ, ಮುರಿಯುವುದಕ್ಕಿಂತ ಜೋಡಿಸುವುದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗಿದೆ ಎಂದರು.
ಮುತ್ಯಾನ ಬಬಲಾದ ಗುರುಪಾದಲಿಂಗ ಶ್ರೀಗಳು, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ರೇವೂನಾಯಕ ಬೆಳಮಗಿ, ರವಿ ಬಿರಾದಾರ, ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ. ಹಿರೇಮಠ, ಕೆ.ಜಿ. ರುದ್ರ¥್ಪÀಯ್ಯ, ರಮೇಶ ಸಾಹು, ಸಂಗಣ್ಣ ಉಮೇಶ್, ಸುರೇಶ ಲೆಂಗಟಿ ಮತ್ತಿತರರು ಉಪಸ್ಥಿತರಿದ್ದರು.