ಆಧ್ಯಾತ್ಮದಲ್ಲಿ ನೆಮ್ಮದಿಯ ಬದುಕು ಸಿಗಲಿದೆ:ಶಾಸಕ ರಾಜುಗೌಡ

ತಾಳಿಕೋಟೆ:ಆ.28: ಪೂಜ್ಯರಾದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಲೋಕೋದ್ದಾರಕ್ಕಾಗಿ ಜನ್ನೋದ್ದಾರಕ್ಕಾಗಿ ತಿಂಗಳ ಪರ್ಯಂತ ಅನುಷ್ಠಾನ ಗೈದು ಈಗ ಸ್ವಗ್ರಾಮ ಗುಂಡಕನಾಳ ಗ್ರಾಮಕ್ಕೆ ಆಗಮಿಸಿ ಎಲ್ಲ ಭಕ್ತ ವೃಂದಕ್ಕೆ ಆಶಿರ್ವಾದ ಮಾಡುವ ಮೂಲಕ ಎಲ್ಲರನ್ನು ಉದ್ದರಿಸುವ ಕಾರ್ಯಕ್ಕೆ ಮುಂದಾಗಿರುವದು ಸಂತಸ ತಂದಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಹೇಳಿದರು.
ತಲಂಗಾಣ ರಾಜ್ಯದ ಕೊಲ್ಲಿಪಾಕಿಯಲ್ಲಿ ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ತಿಂಗಳ ಪರ್ಯಂತ ಅನುಷ್ಠಾನ ಗೈದು ರವಿವಾರರಂದು ಸ್ವ ಗ್ರಾಮ ಗುಂಡಕನಾಳ ಗ್ರಾಮಕ್ಕೆ ಆಗಮಿಸಿದಾಗ ಭಕ್ತವೃಂದದವರಿಂದ ಆಯೋಜಿಸಲಾದ ಶ್ರೀಗಳ ಪುರ ಪ್ರವೇಶ ಹಾಗೂ ಧರ್ಮ ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಲ್ಲಿ ಮಾತೃಹೃದಯ ಎಂಬುದಿದೆ ಅವರಲ್ಲಿ ತಾಯಿಯ ಸ್ವಭಾವ ಅವರ ಪ್ರೀತಿ ಪ್ರೇಮವನ್ನು ನೋಡಿದರೆ ಎಲ್ಲ ಭಕ್ತಾಧಿಗಳ ಮನ ಕರಗುವಂತೆ ಇದೆ ಎಂದರು. ಅವರ ಪ್ರೀತಿ ಆಶಿರ್ವಾದ ನನ್ನ ಮೇಲಿದೆ ನಾನು ಶಾಸಕನಾಗಲು ಇಂತಹ ಶ್ರೀಗಳ ಆಶಿರ್ವಾದದ ಫಲವೇ ಕಾರಣವಾಗಿದೆ ಎಂದು ಹೇಳಿದ ರಾಜುಗೌಡರು ರಾಜಕೀಯದಲ್ಲಿ ನೆಮ್ಮದಿ ಇಲ್ಲಾ ಆದ್ಯಾತ್ಮದಲ್ಲಿ ನೆಮ್ಮದಿ ಇದೆ ಕಾರಣ ನಾನು ಕೂಡಾ ಜನ ಸೇವೆಗಾಗಿ ಮುಂದಾಗಿದ್ದೇನೆ ಶ್ರೀಗಳವರ ಆಶಿರ್ವಾದದ ಫಲದಿಂದ ಅಲ್ಪ ಸೇವೆಯನ್ನಾದರೂ ಮಾಡಿ ಜನತೆಯ ಋಣವನ್ನು ತೀರಿಸಬೇಕೆಂಬ ಆಸೆ ನನ್ನದಾಗಿದೆ ಎಂದರು.
ಇನ್ನೋರ್ವ ಕೆಸರಟ್ಟಿಯ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು ಮಾತನಾಡಿ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅನುಷ್ಠಾನದ ಫಲ ಎಲ್ಲ ಭಕ್ತರಿಗೆ ಸಿಗುತ್ತದೆ ನಾವು ದುಡಿಯುವದು ನಮ್ಮ ಮನೆಗಾಗಿ ಆದರೆ ಶ್ರೀಗಳು ದುಡಿದಿರುವದು ಭಕ್ತರಿಗಾಗಿ ಎಂದು ಹೇಳಿದ ಅವರು ಶ್ರೀಗಳು ಮಾಡಿದ ತಪಸ್ಸಿನ ಫಲ ಎಲ್ಲರಿಗೂ ದೊರೆಯಲಿದೆ ಶ್ರೀಗಳು ತೆಲಂಗಾಣದ ಕೊಲ್ಲಿಪಾಕಿಗೆ ಹೋಗಿ ಅನುಷ್ಠಾನ ಗೈದು ಭಕ್ತೋದ್ದಾರಕ್ಕೆ ನಿಂತಿರುವದು ಶ್ರೀಗಳ ಸೇವಾ ಕಾರ್ಯ ಗುಣಗಾನಮಯವಾಗಿದೆ ಎಂದರು.
ಇನ್ನೋರ್ವ ಆಲಮೇಲ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಭಾರತೀಯ ಸಂಸ್ಕøತಿಯಲ್ಲಿ ಆದ್ಯಾತ್ಮದ ಬಧುಕನ್ನು ಮೈಗೂಡಿಸಿಕೊಂಡು ಬಧುಕುವದ್ದಾಗಿದೆ ಪರಮಾತ್ಮ ಮಾನವನನ್ನು ಸೃಷ್ಠಿ ಮಾಡಿರುವದು ಬಧುಕೆಂಬುದನ್ನು ಕಲಿಯಲು ಭೂಮಿಗೆ ಕಳುಹಿಸಿದ್ದಾನೆ 365 ದಿನ ಪರಮಾತ್ಮನನ್ನು ನೆನೆದರೆ ಏನೇಲ್ಲವೂ ಸಿಗುತ್ತದೆ ಎಂಬುದು ಅರ್ಥೈಸಿಕೊಂಡು ನಡೆಯಲು ಮಾನವನಿಗೆ ಭೂಮಿಗೆ ಕಳುಹಿಸಿದ ಪರಮಾತ್ಮನಿಗೆ ಅಷ್ಟೇಲ್ಲಾ ದಿನಗಳು ಪೂಜಿಸಲು ಆಗುವದಿಲ್ಲಾವೆಂಬ ಮಾನವನ ಉದ್ದೇಶವನ್ನು ಅರೀತುಕೊಂಡ ಭಗವಂತ ಈ 365 ದಿವಸಗಳಲ್ಲಿ ಶ್ರಾವಣ ಮಾಸ, ನವರಾತ್ರೋತ್ಸವ, ಶಿವರಾತ್ರಿ, ಎಂಬವುಗಳನ್ನು ಬಿಡಿ ಬಿಡಿಯಾಗಿ ಪರಮಾತ್ಮನನ್ನು ನೆನಿಪಿಸಿಕೊಳ್ಳಲು ತಿಳಿಸಿದಂತೆ ಮಾನವ ನಡೆದುಕೊಳ್ಳುತ್ತಿಲ್ಲಾವೆಂಬುದನ್ನು ಅರ್ಥೈಸಿ ಅಸಮಾದಾನ ವ್ಯಕ್ತಪಡಿಸಿದ ಶ್ರೀಗಳು ಸ್ವಲ್ಪಮಟ್ಟಿಗಾದರೂ ಆದ್ಯಾತ್ಮದ ವಲುವಿನ ಕಡೆಗೆ ಲಕ್ಷ ವಹಿಸಿದರೆ ಗುರು ಎಂಬ ಶಕ್ತಿಯನ್ನು ನಂಬಿಹೋದರೆ ಕಷ್ಟ ನಷ್ಟಗಳು ಪರಿಹಾರವಾಗಿ ಹೋಗುತ್ತವೆ ಎಂಬುದನ್ನು ಅರಿತುಕೊಂಡು ನಡೆಯಬೇಕಾಗಿದೆ ಎಂದರು.
ಇನ್ನೋರ್ವ ಸಾನಿದ್ಯ ವಹಿಸಿದ ಮುತ್ತಗಿ ಹಿರೇಮಠದ ಶ್ರೀ ಷ.ಬ್ರ. ವೀರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಭಕ್ತರ ಉದ್ದಾರಕ್ಕಾಗಿ ಹಾಗೂ ನೀತಿ, ಧರ್ಮವಂತಾಗಲಿ ಎಂಬ ಉದ್ದೇಶದಿಂದ ಅನುಷ್ಠಾನ ಮಾಡಿದ ಶ್ರೀ ಗುರುಲಿಂಗ ಶಿವಾಚಾರ್ಯರು ಸಮಾಜದ ಹಾಗೂ ಭಕ್ತರ ಉದ್ದಾರಕ್ಕಾಗಿ ಅನುಷ್ಠಾನ ಗೈದಿರುವದು ಇದು ಸಾಮಾನ್ಯವಲ್ಲಾ ಎಲ್ಲ ಭಕ್ತರು ಶ್ರೀಗಳ ಆಶಿರ್ವಾದ ಪಡೆದು ಪುನಿತರಾಗಬೇಕೆಂದರು.
ಇನ್ನೋರ್ವ ಸಮ್ಮುಖವಹಿಸಿದ ಕೊಡಗಾನೂರದ ಶ್ರೀ ಕುಮಾರ ದೇವರು ಮಾತನಾಡಿ ಇದು ಕಣ್ಣು ತುಂಬಿಸಿ ಮನ ತುಂಬಿಸಿಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ ಗುಂಡಕನಾಳಶ್ರೀಗಳ ತಪಸ್ಸಿನ ಶಕ್ತಿಯನ್ನು ಪಡೆದರೆ ನಮಗೆ ಅನುಷ್ಠಾನ ಎಂಬುದು ಎದಕ್ಕೆ ಎನ್ನುತ್ತಾರೆಂಬುದು ಗೊತ್ತಾಗುತ್ತದೆ ಅನುಷ್ಠಾನ ಎಂಬುದು ದೇವರ ಸ್ಮರಣೆ ಮಾಡುವದಾಗಿದೆ ದೇವರ ಸ್ಮರಣೆ ಮಾಡದಿದ್ದರೆ ನಮ್ಮ ಜನ್ಮ ಸಾರ್ಥಕವಾಗುವದಿಲ್ಲಾ ಜೀವನ ಕೊಟ್ಟಂತಹ ಭಗವಂತನ್ನು ಮರೆತಿದ್ದೇವೆ ಆತನ ಸ್ಮರಣೆ ಮಾಡುವದೇ ಅನುಷ್ಠಾನವಾಗಿದೆ ಎಂದರು.
ಇನ್ನೋರ್ವ ಯಂಕಂಚಿ ಹಿರೇಮಠದ ಶ್ರೀ ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಾಸ್ಥಾವಿಕ ಮಾತನಾಡಿ ಸಮಾಜಕ್ಕಾಗಿ ದೇವ ದಂಡನೆ ಮಾಡಬೇಕು ಭಗವಂತನಿಗಾಗಿ ಇಂತಹ ಕಾರ್ಯ ಮಾಡಿದರೆ ಭಗವಂತ ವಲಿಯುತ್ತಾನೆಂದರು. ಗುಂಡಕನಾಳಶ್ರೀಗಳು ಮಾಡಿದ ಅನುಷ್ಠಾನ ತಮಗಾಗಿ ಅಲ್ಲಾ ಎಲ್ಲರ ಉದ್ದಾರಕ್ಕಾಗಿ ಎಲ್ಲರ ಕಷ್ಟನಷ್ಠಗಳನ್ನು ದೂರಿಕರಿಸುವದಕ್ಕಾಗಿ ಅನುಷ್ಠಾನ ಗೈದಿದ್ದಾರೆಂದರು.
ಅನುಷ್ಠಾನ ಪೂರೈಸಿ ಆಗಮಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕುಂಭ ಕಳಸ ಕನ್ನಡಿ ವಿವಿಧ ವಾಧ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಸಾಗಿದ ಈ ಭವ್ಯ ಮೆರವಣಿಗೆಯು ಶ್ರೀ ಮಠಕ್ಕೆ ತಲುಪಿ ಧರ್ಮಸಭೆಯಾಗಿ ಮಾರ್ಪಟ್ಟಿತು.
ಧರ್ಮಸಭೆಯಲ್ಲಿ ಪಾಲ್ಗೊಂಡ ಎಲ್ಲ ಶ್ರೀಗಳಿಗೆ, ಅತಿಥಿ ಮಹೋದಯರಿಗೆ ಸಹಾಯ ಸಹಕಾರ ನೀಡಿದ ಸಮಸ್ತ ಗ್ರಾಮದ ಗಣ್ಯಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಇಂಗಳೇಶ್ವರ ಹಿರೇಮಠದ ಶ್ರೀ ಷ.ಬ್ರ.ಬೃಂಗಿಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಚಿಮ್ಮಲಗಿ ಹಿರೇಮಠದ ಶ್ರೀ ಷ.ಬ್ರ.ಸಿದ್ದರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ರೇವಣಸಿದ್ದ ಸ್ವಾಮಿಗಳು. ಗಣ್ಯರಾದ ಬಸನಗೌಡ ಗಬಸಾವಳಗಿ, ಸಂಗನಗೌಡ ಪಾಟೀಲ(ದೊಡಮನಿ), ನಿಂಗನಗೌಡ ಪಾಟೀಲ, ಮಲ್ಲನಗೌಡ ಲಕ್ಕುಂಡಿ, ನಾನಾಗೌಡ ಮೇಟಿ, ಸುಬ್ಬನಗೌಡ ಹಳೇಮನಿ, ಸಿದ್ದನಗೌಡ ಬಿರಾದಾರ, ರಾಜುಗೌಡ ಗುಂಡಕನಾಳ, ಮಲ್ಲನಗೌಡ ಹೊಸಮನಿ, ಬಸನಗೌಡ ಪಾಟೀಲ, ಬಸನಗೌಡ ಬಿರಾದಾರ, ಸಂತೋಷ ದೊಡಮನಿ, ಸಿದ್ದಯ್ಯ ಸ್ವಾಮಿಗಳು, ಸೋಮನಗೌಡ ಚಿಂಚೊಳ್ಳಿ, ಸೀಗು ಹಿರೇಮಠ, ಬಸನಗೌಡ ಬನ್ನೇಟ್ಟಿ, ಮೊದಲಾದವರು ಇದ್ದರು.
ಜೇರಟಿಗಿಯ ಶ್ರೀಮಡಿವಾಳಯ್ಯ ಶಾಸ್ತ್ರೀಗಳು ಸ್ವಾಗತಿಸಿದರು. ಶ್ರೀ ಬಸಯ್ಯ ಶಾಸ್ತ್ರೀಗಳು ನಿರೂಪಿಸಿದರು.
ಗವಾಯಿಗಳಾದ ವೇ.ಅಂಮ್ರಯ್ಯ ಹಿರೇಮಠ, ಸಂಜನಾ ಆಲ್ಯಾಳಮಠ ಹಾಗೂ ಈಶ್ವರ ಬಡಿಗೇರ, ಗುರುಪಾದ ಬಿರಾದಾರ, ಅಶೋಕ, ಕುಮಾರಿ ಅಕ್ಷತಾ ಬಿರಾದಾರ, ಮಡಿವಾಳಯ್ಯ ಅವರು ಸಂಗೀತ ಸೇವೆ ಸಲ್ಲಿಸಿದರು.