ಆಧುನಿಕ ಯುಗದ ಶ್ರೇಷ್ಠ ತಪಸ್ವಿಗಳು ಪೂಜ್ಯ ಕರುಣಾದೇವಿ ಮಾತಾ: ಸಚಿವ ಈಶ್ವರ ಖಂಡ್ರೆ

ಬೀದರ:ಸೆ.22:ಭಕ್ತರ ಉದ್ದಾರಕ್ಕಾಗಿಯೇ ಅವತರಿಸಿದ ಪೂಜ್ಯ ಕರುಣಾದೇವಿ ಮಾತಾರವರು ನಮ್ಮ ಮಧ್ಯದ ನಡೆದಾಡುವ ದೇವರಾಗಿದ್ದಾರೆಂದು ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆರವರು ಅಭಿಪ್ರಾಯ ಪಟ್ಟರು.
ಅವರು ಭಾಲ್ಕಿ ತಾಲೂಕಿನ ಧನ್ನೂರ (ಹೆಚ್) ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ತ ಕೈಗೊಂಡ ಶಿವವ್ರತ ಮಾಲಾ ಮಂಗಲ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದರು. ಶ್ರೀ ಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿಗಳಾದ ಮಹಾತಪಸ್ವಿ ಪೂಜ್ಯ ಶ್ರೀ ಕರುಣಾದೇವಿ ಮಾತಾರವರ ಪರಮ ಶಿಷ್ಯರಾದ ಧನ್ನೂರಿನ ವೀರಶೈವ ರಕ್ಷಣೆ ವೇದಿಕೆಯ ಯುವ ತರುಣರು ಪವಾಡ ಪರುಷ ಸಿದ್ಧಯ್ಯನಪ್ಪ ಮತ್ತು ನಾಗಯ್ಯಪ್ಪನವರ ಗದ್ದುಗೆ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ನಡೆಸಿ ಶಿವಮಾಲಾ ವ್ರತಾ ಚರಣೆಯು ಸಮಾಜದ ಎಲ್ಲಾ ವರ್ಗದ ಯುವಕರಿಗೆ ಮಾರ್ಗದರ್ಶನವಾಗಿದೆ.
ಜಾಗತಿಕ ಎಲ್ಲಾ ದಾರ್ಶನಿಕರು ಭೌತಿಕ ಸಂಪತ್ತಿಗಿಂತ ಸುಸಂಸ್ಕøತಕ ಸದಾಚಾರವು ಮಿಗಿಲಾದ ಬೆಲೆಕಟ್ಟುಲಾಗದ ಸಂಪತ್ತಾಗಿದೆ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನಲ್ಲಿ ಸಂಸ್ಕಾರ ಆಚಾರ ಇಲ್ಲದಿದ್ದರೆ. ಸಮಾಜದಲ್ಲಿ ಅವನಿಗೆ ಯಾವುದೇ ಬೆಲೆ ಇರುವುದಿಲ್ಲ. ಸದ್ಗುರಗಳ ಕೃಪೆ ಮತ್ತು ಮಾರ್ಗದರ್ಶನ ವಿದ್ದರೇ ಮಾತ್ರ ಈ ಶೇಷ್ಠವಾದ ಸಂಪತ್ತನ್ನು ನಾವುಗಳಿಸಬಹುದಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಯುವಕರು ಧರ್ಮ ಸಂಸ್ಕøತಿ ಸಂಸ್ಕಾರ ದತ್ತ ಹಜ್ಜೆ ಇಡುತ್ತಿರುವುದು ಸಮಾಜದ ಪುಣ್ಯವೆನ್ನಬೇಕು.
ಶ್ರೀ ಶೈಲ ಶ್ರೀಭ್ರಮರಾಂಬ ಶ್ರೀ ಮಲ್ಲಿಕಾರ್ಜುಣ ಸ್ವಾಮಿಯರ ಮತ್ತು ಪೂಜ್ಯ ಕರುಣಾದೇವಿ ಮಾತಾರವರ ಮತ್ತು ತಮ್ಮೆಲ್ಲರ ಆಶೀರ್ವಾದದಿಂದ ಇಂದು ನಾನು ರಾಜ್ಯ ಸರ್ಕಾರದಲ್ಲಿ ಸಚಿವನಾಗಿ ನಾಡಿನ ಮತ್ತು ಜಿಲ್ಲೆಯ ಜನತೆಯ ಸೇವೆ ಸಲ್ಲಿಸುವುದು. ಸಾಧ್ಯವಾಗಿದೆ. ಶ್ರೀ ಡಾ|| ರಾಜಶೇಖರ್ ಶಿವಾಚಾರ್ಯರ ನೇತೃತ್ವದಲ್ಲಿ ನೂರಾರು ಜನಗಳನ್ನು ಶ್ರೀ ಶೈಲಕ್ಕೆ ದರ್ಶನಕ್ಕೆ ಕರೆದುಕೊಂಡು ಹೋಗುವುದಾಗಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಮಾರಂಭದ ದಿವ್ಯ ನೇತೃತ್ವ ವಹಿಸಿದ ಬೇಮಳಖೇಡ ಹಿರೇಮಠದ ಶ್ರೀ ಷ.ಬ್ರ ಡಾ|| ರಾಜಶೇಖರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಹದಿನಾರು ವರ್ಷಗಳ ಹಿಂದೆ ಪೂಜ್ಯ ಶ್ರೀ ಮಾತಾರವರ ಆದೇಶದಂತೆ ವೀರಶೈವ ರಕ್ಷಣಾವೇದಿಕೆ ವೆಂಬ ನೆಟ್ಟಿರುವ ಸಸಿ ಇಂದು ಬೆಳೆದು ಹೆಮ್ಮರವಾಗಿ ಧನ್ನೂರಿಗೆ ಆಧ್ಯಾತ್ಮದ ಫಲ ಪುಷ್ಪ ಕೊಡುತ್ತಿರುವ ನಮಗೆ ಹೆಮ್ಮೆಯನ್ನು ತಂದಿದೆ. ಇಂದು ಗ್ರಾಮದಲ್ಲಿ ಆಧ್ಯಾತ್ಮಿಕ ಸುಸಂಸ್ಕøತಿಕ ದಿವ್ಯ ವಾತಾವರಣಾ ನಿರ್ಮಾಣವಾಗಿದೆ. ಇಂದು ಯುವಕರು ಸುಸಂಸ್ಕøತ-ಆಚಾರವಂತರಾಗಿ ಬೆಳೆದು ಹುಟ್ಟಿದ ಮನೆಗೆ ಗ್ರಾಮಕ್ಕೆ ಹೆಸರು ತರುತ್ತಿರುವುದು ಹೆಮ್ಮೆ ತಂದಿದೆ. ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಇಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಶಿವಮಾಲಾ ವ್ರತದಾರಿ ಶಿವ ಸ್ವಾಮಿಗಳು ಪೂಜ್ಯ ಕರುಣಾದೇವಿ ಮಾತಾರವರ ಪಾದಾರವಿಂದಗಳಿಗೆ ಪುಷ್ಪಾರ್ಚನೆಯನ್ನು ಮಾಡಿ ಗೌರವ ನಮಗಳನ್ನು ನಮರ್ಪಿಸಿ ಧನ್ಯರಾದರು ಹದಿನೈದು ವರ್ಷಗಳಿಂದ ಶಿವಮಾಲಾ ವ್ರತಧಾರಿ ಶಿವಸ್ವಾಮಿಗಳಾದ ಬಸವರಾಜ ಹಾಲಹಳ್ಳಿ, ಉಮಾಕಾಂತ ಜೇಮಶೆಟ್ಟಿ, ಅಮರ ಮೋದಿ, ಅನಂತಸ್ವಾಮಿ, ಜ್ಯೋತೀಲಿಳಂಗ ಸ್ವಾಮಿ, ಸಂತೋಷ ಖಂಡ್ರೆ, ವೀರೇಶ ಸ್ವಾಮಿ ತರನಳ್ಳಿಯಲ್ಲಿ ಹದಿನೈದಯ ವರ್ಷಗಳಿಂದ ಶಿವಮಾಲ ವ್ರತ ಆಚರಿಸಿಕೊಂಡು ಬರುತ್ತಿರುವ ಪ್ರಭು ಮೇಳಕುಂದಿ, ಪ್ರಶಾಂತ, ಮಹಾದೇವ, ರವಿ, ಗುರು, ಶಿವಾನಂದ, ಸತೀಶ, ಸಂಜು, ಶ್ರೀಕಾಂತ ಇವರೆಲ್ಲಿರಿಗೆ ಪೂಜ್ಯ ಅಮ್ಮನವರು ವಿಶೇಷ ಗೌರವಾಶೀರ್ವಾದ ಮಾಡಿದರು.
ಪರಮೇಶ ಪಾಟೀಲ, ಶಾಂತಕುಮಾರ ಖಂಡ್ರೆ, ಅವಿನಾಶ ಸ್ವಾಮಿ, ರಮೇಶ ಅರಳಿ, ಬಸು ಬಿರಾದಾರ ಮತ್ತು ಶಾಂಭವಿ ಆಧ್ಯಾತ್ಮ ವೇದಿಕೆ, ವೀರಶೈವ ರಕ್ಷಣಾ ವೇದಿಕೆಯ ಸದಸ್ಯರು ಸಾವಿರಾರು ಭಕ್ತ ಜನರು ಭಾಗವಹಿಸಿದರು.