ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಬಳಕೆ ಅಗತ್ಯ-ಎಸ್.ಕೆ.ಬಿ.ಪ್ರಸಾದ್

ಚಿತ್ರದುರ್ಗ .ಸೆ.೨೩;  ಪ್ರಸ್ತುತ ಸಂದರ್ಭದಲ್ಲಿ ತಂತ್ರಜ್ಞಾನದ ಬಳಕೆ ಅನಿವಾರ್ಯವಾಗಿದೆ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ತಿಳಿಸಿದರು. ನಗರದ ಡಯಟ್‌ನಲ್ಲಿ  ಎನ್.ಎಂ.ಎA.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಅರ್ಜಿಯನ್ನು 2021-22ನೇ ಸಾಲಿನಲ್ಲಿ ಆನ್ ಲೈನ್‌ನಲ್ಲಿ ತುಂಬುವ ಕುರಿತು ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 6 ತಾಲೂಕಿನಿಂದ 117 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದು ಆ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳು ಎನ್.ಎಸ್.ಪಿ ಪೋರ್ಟ್ಲ್‌ನಲ್ಲಿ ಶಾಲೆಯ ನೋಂದಣಿ ಹಾಗೂ ನೋಡಲ್ ಅಧಿಕಾರಿಯ ಕೆ.ವೈ.ಸಿ ಅಪ್‌ಡೇಟ್ ಮಾಡಬೇಕು. ಹಾಗೂ ಈ ವರ್ಷದ 8ನೇ ತರಗತಿ ಇರುವ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಕೆ.ವೈ.ಸಿ ಅಪ್‌ಡೇಟ್ ಮಾಡಬೇಕು ಎಂದರು. ನಮ್ಮ ಜಿಲ್ಲೆಯಿಂದ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯುವಂತಾಗಬೇಕು ಯಾವುದೇ ಮಗು ವಿದ್ಯಾರ್ಥಿ ವೇತನ ಪಡೆಯುವಲ್ಲಿ ವಂಚಿತರಾಗದAತೆ ಕ್ರಮವಹಿಸುವಂತೆ ತಿಳಿಸಿದರು.ಡಯಟ್ ನೋಡಲ್ ಅಧಿಕಾರಿಗಳಾದ ಕೆ.ಜಿ.ಪ್ರಶಾಂತ್, ಜಿ.ಎಸ್.ನಾಗರಾಜು, ಉಪನ್ಯಾಸಕ ಎಸ್.ಬಸವರಾಜು, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್, ವಿಷಯ ನಿರ್ವಾಹಕರಾದ ಸೌಭಾಗ್ಯಮ್ಮ ತಾಲೂಕಿನ ನೋಡಲ್ ಅಧಿಕಾರಿಗಳಾದ ವೇಣುಗೋಪಾಲ್, ಈರಸ್ವಾಮಿ, ಓಂಕಾರಪ್ಪ, ಹರೀಶ್, ಚಂದ್ರಶೇಖರಪ್ಪ, ಕರಿಸಿದ್ದಪ್ಪ, ಎಲ್ಲಾ ತಾಲೂಕಿನ ಶಾಲೆಯ ಮುಖ್ಯ ಶಿಕ್ಷಕರು ಇದ್ದರು.