ಆಧುನಿಕ ಬದುಕಿನಲ್ಲಿ ಆತ್ಮಾವಲೋಕನ ಅವಶ್ಯ:ಬೊಮ್ಮಾಯಿ

ಶಿಗ್ಗಾವಿ,ಜ12 ಃ ಜನ್ಮ ನೀಡಿದ ತಾಯಿಯನ್ನು ಗೌರವಿಸಿ. ಆಧುನಿಕ ಬದುಕಿನ ಓಟದಲ್ಲಿ ಸ್ವಲ್ಪ ಸಮಯ ನಿಂತು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಶಿಶುನಾಳ ಗ್ರಾಮದ ಶ್ರೀ ಗುರುಗೋವಿಂದ ಭಟ್ಟರ ಹಾಗೂ ಶ್ರೀ ಸಂತ ಶಿಶುನಾಳ ಶರೀಫ ವೇದಿಕೆಯಲ್ಲಿ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ಆಯೋಜಿಸಿದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ರಸ್ಟ್‍ನಿಂದ ಉತ್ತಮ ಕೃತಿರಚನಕಾರರಿಗೆ ಬಹುಮಾನ ನೀಡಿದ್ದಾರೆ. ಹೆಚ್.ಆರ್.ಸುಜಾತಾ, ವಿದ್ಯಾರ್ಥಿನಿ ಸನ್ನಿಧಿ.ಟಿ.ರೈ ಪೆರ್ಲ, ಡಾ.ಕೆ.ಶಶಿಕಾಂತ ಅವರಲ್ಲಿರುವ ಬಾಷಾಜ್ಞಾನ, ಪದಗಳ ಜೋಡಣೆÀ ಭಾಷಾ ಶೈಲಿ ನೋಡಿದಾಗ ಇವರು ಕನ್ನಡದ ಯಾವುದೇ ಕವಿಗಳಿಗೆ, ರಚನಾಕಾರರಿಗೆ ಕಡಿಮೆ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಗೆ ಆಗಮಿಸಿದ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಖ್ಯಾತ ರಂಗಕರ್ಮಿ ಬಿ.ಜಯಶ್ರೀ ಅವರು ನಾಡು ಕಂಡ ವಿಶಿಷ್ಟ ಕಲಾವಿದೆ. ಅವರ ಕಲೆಯ ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ಗೊತ್ತಿದೆ. ಅಂತವರಿಂತ ಬಹುಮಾನ ವಿತರಣೆ ಬಹುಮಾನಕ್ಕೆ ಮೆರಗು ತುಂಬುವಂತಹುದು ಎಂದರು.
ಕಾರ್ಯಕ್ರಮದಲ್ಲಿ ಬಿ.ಜಯಶ್ರೀ ಅವರು ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ಸೋಮಪ್ಪ ಬೊಮ್ಮಾಯಿ ಒಬ್ಬ ಮಹಾನÀ ವ್ಯಕ್ತಿಗಳು. ಅವರಿಗೆ ಪ್ರೇರಣೆ ಗಂಗಮ್ಮ ಬೊಮ್ಮಾಯಿಯವರು ಅಂತವರ ಹೆಸರಿನಲ್ಲಿ ಅದು ಶಿಶುನಾಳದಲ್ಲ ಗುರುಗೋವಿಂದ ಬಟ್ಟರು ನಡೆದಾಡಿದ ಸಂತ ಶಿಶುನಾಳ ಶರೀಫರ ಜನ್ಮ ಸ್ಥಳದಲ್ಲಿ ನಾನು ಕಾರ್ಯಕ್ರಮದಲ್ಲಿ ಭಾಗಿಯಾಗಿರುವದು ನನಗೆ ಬಯಸದೇ ಬಂದ ಭಾಗ್ಯ ಎಂದರು ಹಾಗೂ ಪ್ರತಿಯೊಬ್ಬ ತಂದೆತಾಯಿ ಹೆಣ್ಣು ಮಕ್ಕಳನ್ನು ಓದಿಸಿ ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮನು ಬಳಿಗಾರ ಮಾತನಾಡಿ. ಅವ್ವನ ಬಗೆಗೆ ಗೌರವ ಮೂಡಿಸುವ ನಾಡಿಗೆ ಮಾನವೀಯ ಮೌಲ್ಯ ತುಂಬುವ ಕಾರ್ಯಕ್ರಮವನ್ನು ಟ್ರಸ್ಟ್ ಮಾಡಿದೆ ಇದೊಂದು ಸಾರ್ತಕ ಕಾರ್ಯಕ್ರಮ ಇದರಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ ಎಂದರು.
ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಅವ್ವ ಪುಸ್ತಕದ 6ನೇ ಕೃತಿ ನಾಟಕಗಳಲ್ಲಿ ಅವ್ವ ಪುಸ್ತಕ ಬಿಡುಗಡೆ ನೆರವೇರಿತು.ಸಾಹಿತಿಗಳು ಹಾಗೂ ಖ್ಯಾತ ಸಂಶೋಧಕರಾದ ಡಾ.ವೀರಣ್ಣ ರಾಜೂರ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿಸಿದರು.
ಸಂಸದ ಶಿವಕುಮಾರ ಉದಾಸಿ, ಚನ್ನಮ್ಮ ಬೊಮ್ಮಾಯಿ. ಅವ್ವ ಪುಸ್ತಕ ಮಾಲಿಕೆಯ ಕೃತಿಗಳನ್ನು ಸಂಪಾದಿಸಿಕೊಟ್ಟ ಚಂದ್ರಶೇಖರ ವಸ್ತ್ರದ, ಮಾಜಿ ಸಂಸದ ಆಯ್.ಜಿ.ಸನದಿ, ಶಿವಾನಂದ ಮ್ಯಾಗೇರಿ, ವಿವಿದ ಕಲಾವಿದರು, ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉಪಸ್ಥಿತರಿದ್ದರು.