ಆಧುನಿಕ ಪ್ರಜಾಪ್ರಭುತ್ವದ ಮೂಲ ಪುರುಷ ಮಹಾತ್ಮ ಬಸವೇಶ್ವರ:ಪತ್ರಕರ್ತ ಲೇಂಗಟಿ

ಕಲಬುರಗಿ:ಎ.25:12 ನೇ ಶತಮಾನದ ಕಾಲಾವಧಿಯಲ್ಲಿ ಅಂದಿನ ಸಮಾಜದಲ್ಲಿ ಭದ್ರವಾಗಿ ಬೇರುರಿದ್ದ ಸಾಮಾಜಿಕ ಅಸಮಾನತೆ, ಜಾತೀಯತೆ, ಮೌಸ್ಯತೆ ಹಾಗೂ ಲಿಂಗ ಅಸಮಾನತೆಯ ವಿರುದ್ಧ ಕ್ರಾಂತಿಯನ್ನು ಕೈಗೊಂಡ ಮಹಾನ ಕ್ರಾತಿ ಪುರುಷರೆಂದರೆ ಮಹಾತ್ಮ ಬಸವೇಶ್ವರರು ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಾಗೂ ಪತ್ರಕರ್ತ ಸುರೇಶ ಲೇಂಗಟಿ ಹೇಳಿದರು.

ಸೋಮವಾರ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಶ್ರೀ ಬಸವೇಶ್ವರರ 890 ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅಂದಿನ ಕಾಲದಲ್ಲಿ ಅನಿಭವ ಮಂಟಪವನ್ನು ಸ್ಥಾಪಿಸಿ ಎಲ್ಲಾ ವರ್ಗದ ಪುರುಷ ಮತ್ತು ಮಹಿಳಿಯರಿಗೆ ಸ್ಥಾನಮಾನವನ್ನು ಕಲ್ಪಿಸುವ ಮೂಲಕ ಆಧುನಿಕ ಪ್ರಜಾಪ್ರಭುತ್ವವನ್ನು ನಿರ್ಮಿಸಿದ್ದರು, ಈ ಕಾರಣದಿಂದಲೇ ಅವರನ್ನು ಆಧುನಿಕ ಪ್ರಜಾಪ್ರಭುತ್ವದ ಮೂಲ ಪುರುಷರೆಂದು ಕರೆಯಲಾಗುತ್ತದೆ ಎಂದರು.

ಪ್ರಾಂಶುಪಾಲ ಡಾ.ಶರಣಪ್ಪ ಮಾಳಗಿ ಮಾತನಾಡಿ ಇಂದಿನ ಪ್ರಸ್ತುತ ಸಮಾಜಕ್ಕೆ ಬಸವಾದಿ ಶರಣರ ವಚನಗಳು ಅತ್ಯಗತ್ಯ, ಯುವಕರು ತಮ್ಮ ಜೀವನದಲ್ಲಿ ವಚನಗಳನ್ನು ಅಳವಡಿಸಿಕೊಂಡರೆ ಸಂತೃಪ್ತ ಜೀವನ ಸಾಧ್ಯ ಎಂದರು.

ಅತಿಥಿ ಉಪನ್ಯಾಸಕ ಡಾ.ವಿಠಲರಾವ ಮುಕರಂಬಿ ಮಾತನಾಡಿ ಬುದ್ದ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳು ಸರ್ವಕಾಲಿಕ ಶ್ರೇಷ್ಠವಾಗಿವೆ ಎಂದರು.

ಚಿಂಚೋಳಿ ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಡಾ.ಅಣ್ಣಾರಾವ ಪಾಟೀಲ, ಚಕ್ರವರ್ತಿ ಮಾತನಾಡಿದರು.

ಈ ಸಂದರ್ಭದಲ್ಲಿ
ಪೆÇ್ರ.ಸತ್ತೇಶ್ವರ ಚೌದ್ರಿ, ಮಹಾದೇವ , ಲಕ್ಷ್ಮೀಕಾಂತ ಶಿರೊಳ್ಳಿ, ಡಾ. ವಿಠಲರಾವ ಮುಕರಂಬಿ, ಸತೀಶ ಇತರರು ಇದ್ದರು.

ಅಂಬಿಕಾ ಪ್ರರ್ಥಿಸಿದರು, ಡಾ.ಜಗನ್ನಾಥ ಕುಕ್ಕಡಿ ನಿರೂಪಿಸಿದರು, ಶಾಂತಕುಮಾರ ಸಲಗರ ವಂದಿಸಿದರು.