ಆಧುನಿಕ ತಂತ್ರಜ್ಞಾನ ಪಡೆದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಸಿದ್ದರಾಗಲು -ಡಾ: ಎಂ.ಚಂದ್ರಶೇಖರ್ ಕರೆ

ಕೋಲಾರ,ಮಾ.೮: ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಯಂತ್ರೋಪಕರಣಗಳು, ಆಧುನಿಕ ಪ್ರಯೋಗಾಲಯಗಳು, ಕೈಗಾರಿಕಾತರಬೇತಿ, ವಕ್ಶಾಪ್, ವಾಚನಾಲಯ, ಮುಂತಾದ ಸೌಲಭ್ಯಗಳನ್ನು ತರಭೇತಿ ಪಡೆದು ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆ ಸಿದ್ದರಾಗ ಬೇಕೆಂದು ತರಭೇತಿದಾರರುಗೆ ಚೈತನ್ಯ ಕೈಗಾರಿಕಾ ತರಬೇತಿ ಕೇಂದ್ರದ ಸಂಸ್ಥಾಪಕ ಡಾ: ಎಂ.ಚಂದ್ರಶೇಖರ್ ಕರೆ ನೀಡಿದರು,
ಬಂಗಾಪೇಟೆ ತಾಲ್ಲೂಕು ಚಿಕ್ಕ ಅಂಕಂಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಿದ್ದಾರ್ಥ ನಗರದಲ್ಲಿ ಸ್ಥಾಪನೆಗೊಂಡಿರುವ ಚೈತನ್ಯ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ೮ನೇ ವಾರ್ಷಿಕೋತ್ಸವ, ಮತ್ತು ಸಿದ್ದಾರ್ಥ ಪಾಲಿಟೆಕ್ನಿಕ್ ನ ೧೨ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಕ್ರೀಡಾ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಗ್ರಾಮೀಣ ಪ್ರದೇಶದ ಬಡವರು, ಶೋಷಿತರು ವಿದ್ಯೆಯಿಂದ ವಂಚನೆಗೊಳಗಾದ ಬಡಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ತಾಂತ್ರಿಕ ಮನೋಭಾವನೆ ಜ್ಞಾನವನ್ನು ಬೆಳೆಸಿ ಈಗಿನ ತಾಂತ್ರಿಕ ಜ್ಞಾನದ ಯುಗಕ್ಕೆ ತನ್ನನ್ನು ತಾನು ತೊಡಗಿಸಿಕೊಳ್ಳುವಂತೆ ಮಾಡುವ ಬೃಹತ್ ಕನಸಿನ ಭಾಗವಾಗಿ ಕೈಗಾರಿಕಾ ತರಬೇತಿ ಕೇಂದ್ರ ಮತ್ತು ಪಾಲಿಟೆಕ್ನಿಕ್ ಕಾಲೇಜು ನವದೆಹಲಿಯ ಎನ್‌ಸಿವಿಟಿ ಮಾನ್ಯತೆಯನ್ನು ಪಡೆದ ಜಿಲ್ಲೆಯ ಪ್ರಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿದೆ. ಎಂದರು.
ಶ್ರೀ ಸಿದ್ದಾರ್ಥ ಪಾಲಿಟೆಕ್ನಿಕ್ ಸಹ ಈ ಗ್ರಾಮೀಣ ಪ್ರಾಂತ್ಯದ ಬಡ ದೀನ-ದಲಿತರ ಪಾಲಿಗೆ ವರದಾನವಾಗಿದೆ, ಯಾವುದೇ ಹಣಗಳಿಕೆ ಉದ್ದೇಶವಿಲ್ಲದೆ ಕೇವಲ ಸರ್ಕಾರಿ ನಿಗದಿತ ಶುಲ್ಕದಲ್ಲೂ ಸಹ ರಿಯಾಯಿತಿ ನೀಡಿನ ಕಂತಿನರೂಪದಲ್ಲಿ ಅಲ್ಪ ಸ್ವಲ್ಪ ಶುಲ್ಕವನ್ನು ಪಡೆದುಕೊಂಡು ವಿದ್ಯಾರ್ಥಿಗಳ ಅಭಿವೃದ್ದಿಯನ್ನೆ ಧ್ಯೇಯವಾಗಿಸಿ ಕೊಂಡು ಈ ಸಂಸ್ಥೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಆದರೆ ಯಾವುದೇ ಸರ್ಕಾರವಾಗಲಿ, ರಾಜಕೀಯ ಧುರೀಣರಾಗಲಿ ವಿದ್ಯಾ ಕ್ಷೇತ್ರಗಳ ಬಗ್ಗೆ ಕಾಳಜಿ ನೀಡದ ಕಾರಣ ಗ್ರಾಮೀಣ ಪ್ರತಿಭೆಗಳು ತ್ರಾಂತ್ರಿಕಜ್ಞಾನ ಅಭಿವೃದ್ದಿಯಿಂದ ವಂಚಿತರಾಗಿ ಸ್ವಾತಂತ್ರ್ಯದ ಕನಸುಗಳು ಕನಸಾಗಿಯೇ ಉಳಿದಿದ್ದು, ತಾಂತ್ರಿಕ ವಿದ್ಯಾಕ್ಷೇತ್ರಕ್ಕೆ ಗಮನ ಹರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿ.ಅಮರ್‌ನಾಥ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಉಪನ್ಯಾಸಕ ನರಸಿಂಹಯ್ಯ, ಸಮಾಜ ಸೇವಕ ಕೆ.ಜಿ.ಎಫ್ ಮೋಹನ್ ಕೃಷ್ಣ, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಮಹಾದೇವಿ ಎಸ್.ಪಾಟೀಲ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿ.ವೆಂಕಟೇಶಪ್ಪ, ಪದಾಧಿಕಾರಿಗಳಾದ ಪಿ.ಎಂ.ವೆಂಕಟೇಶಪ್ಪ, ಸಿ.ಜಿ. ಶ್ರೀನಿವಾಸ್, ಎ.ಮುನಿರೆಡ್ಡಿ, ವಿ.ಚಲಪತಿ, ಎನ್.ವೆಂಕಟಪತಿ, ಸಿ.ಹೆಚ್.ನಾಗರಾಜ್, ಸದಸ್ಯರಾದ ಸೀನಪ್ಪ, ಬಿ.ವೆಂಕಟೇಶಪ್ಪ, ಹನುಮಂತಪ್ಪ ಭಾಗವಹಿಸಿದ್ದರು