ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಅಗತ್ಯ

ಲಿಂಗಸುಗೂರ,ಮಾ.೨೮- ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಕಲಿಕೆಗೆ ಪೂರಕವಾಗಿರುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಅಗತ್ಯವಾಗಿದೆ. ವಿಜ್ಞಾನ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಕ್ಲಾಸ್ ಈಗಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಸಹಕಾರಿಯಾಗುತ್ತದೆ ಎಂದು ರಾಯಚೂರು ಕೊಪ್ಪಳ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಇವರು ಲಿಂಗಸುಗೂರು ಸರ್ಕಾರಿ ಆದರ್ಶ ವಿದ್ಯಾಲಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದರು.
ಅದೆ ರೀತಿ ತಾಲೂಕಿನ ಇರುವ ಸರ್ಕಾರಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿರುವ ಹಲವು ಶಾಲೆಗಳಿಗೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಬಿಡುಗಡೆಯಾದ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ತಾಲೂಕಿನ ೨೯ ಶಾಲೆಗಳಿಗೆ ಹಾಗೂ ಪಕ್ಕದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ೧೧ ಶಾಲೆಗೆ ಸ್ಮಾರ್ಟ್ ಕ್ಲಾಸ್ ಯೋಜನೆ ಜಾರಿಗೆ ತಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಸರ್ಕಾರದ ಮೇಲೆ ಒತ್ತಡ ಹಾಕಿ ಅನುದಾನ ಬಿಡುಗಡೆ ಮಾಡಿಸಿದ ಯುವ ನಾಯಕ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಇವರು ಮಕ್ಕಳ ಶಿಕ್ಷಣ ಹಕ್ಕಿನ ಅಡಿಯಲ್ಲಿ ಇತಿಹಾಸ ಬರೆದು ವಿದ್ಯಾರ್ಥಿಗಳ ಆಶಾಕಿರಣವಾಗಿ ಬೆಳಕು ಚೆಲ್ಲುವ ಮೂಲಕ ತಮಗೆ ಸಿಕ್ಕ ರಾಜಕೀಯ ಅಧಿಕಾರ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಪತದತ್ತ ಮುನ್ನುಡಿ ಬರೆದಿದ್ದಾರೆ.
ವಿಜ್ಞಾನ ಗಣಿತ ಶಾಸ್ತ್ರ ಸಾಮಾಜಿಕ ವಿಜ್ಞಾನ ತಂತ್ರಜ್ಞಾನ ಆಧುನಿಕ ಯುಗದಲ್ಲಿ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ದೇಶದ ಪ್ರಜೆಗಳು ಆಗಿ ಕೆಲಸ ನಿರ್ವಹಿಸಲು ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಮ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ವಿನಯ್ ಕುಮಾರ್ ಗಣಾಚಾರಿ ಇವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅಭಿವೃದ್ಧಿ ಆಗಬೇಕಾದರೆ ಮೋದಲು ಚುನಾಯಿತ ಪ್ರತಿನಿಧಿಗಳು ದೂರ ದೃಷ್ಟಿ ಉಳ್ಳ ನಾಯಕ ಇರಬೇಕು ಅಂದಾಗ ಮಾತ್ರ ದೇಶ ಶ್ರೇಷ್ಠತೆ ಕಂಡು ಬರುತ್ತದೆ.
ಸರ್ಕಾರದ ಅನೇಕ ಯೋಜನೆಗಳು ಸದ್ಬಳಕೆ ಯಾಗಬೇಕಾದರೆ ಇಂತಹ ದೂರ ದೃಷ್ಟಿ ಉಳ್ಳ ನಾಯಕರು ನಮ್ಮಲ್ಲಿ ಇರಬೇಕು ಎಂದು ಆದರ್ಶ ವಿದ್ಯಾಲಯ ಶಾಲೆಯ ಮುಖ್ಯೋಪಾಧ್ಯಾಯ ದೇಸಾಯಿ ಹೇಳಿದರು.
ಈ ಸಂದರ್ಭದಲ್ಲಿ ಆದರ್ಶ ವಿದ್ಯಾಲಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪಾಮಯ್ಯ ಮುರಾರಿ, ಶಶಿಧರ ಪಾಟೀಲ, ಆಶಿಹಾಳ ಗಿರೀಶ್ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.