ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಕ್ರೀಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ನೀಡಬೇಕಾಗಿದೆಃ ಡಾ.ರೋಷನ್ ಆರಾ

ವಿಜಯಪುರ, ಎ.2- ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ತಾಂತ್ರಿಕ ಶಿಕ್ಷಣ ನೀಡಬೇಕಾಗಿದೆ ಅದಕ್ಕಾಗಿ ಸರಕಾರ ಸಾಕಷ್ಟು ಅನುದಾನ ನೀಡುತ್ತಿದ್ದು,ಮ ಇದರ ಸದುಪಯೋಗವಾಗಬೇಕೆಂದು ಸಿಕ್ಯಾಬ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಚಾರ್ಯೆ ಡಾ.ರೋಷನ್ ಆರಾ ಹೇಳಿದರು.
ನಗರದ ಸಿಕ್ಯಾಬ ಶಿಕ್ಷಣ ಸಂಸ್ಥೆಯ ನವರಸ್‍ಪುರ ಪ್ರೌಡಶಾಲೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕ್ರೀಯಾಶೀಲತೆ ಅತ್ಯಂತ ಮುಖ್ಯವಾಗಿದೆ. ನಾವಿನ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ದಿನನಿತ್ಯ ಪ್ರಗತಿ ಹೊಂದುತ್ತಿರುವ ವೈಜ್ಞಾನಿಕ ವಿಚಾರಧಾರೆಗಳಿಂದ ಜಗತ್ತನ್ನು ಮುನ್ನಡೆಸಬೇಕಾಗಿದೆ. ನಿರಂತರ ಚಲನಶೀಲ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಕೇಂದ್ರ ಸರಕಾರದ ಏಮ್ಸ ಯೋಜನೆಯ ಅನುದಾನ್ಲದಲ್ಲಿ ಮಕ್ಕಳಿಗೆ ಕ್ರೀಯಾಶೀಲತೆ ಹೊಸ ಚಟುವಟಿಕೆಗಳು ನೂತನ ಅವಿಷ್ಕಾರಕ್ಕೆ ಅನುಕೂಲವಾಗಲು ಅನುದಾನ ನೀಡುತ್ತದೆ ಇದರ ಸದುಪಯೋಗವಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿಕ್ಯಾಬ ಶಾಲೆಯ ಮಕ್ಕಳು ಅಟಲ್ ಮ್ಯಾರಾಥಾನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿದ್ಧ ಪಡಿಸಿದ ಇವಿವಧ ರೀತಿಯ ವಿನೂತನ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳನ್ನು ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಎ ಎಸ್ ಪಾಟೀಲ, ನಿರ್ದೇಶಕರಾದ ಸಲಾವುದ್ದೀನ ಪುಣೇಕರ, ಮುಖ್ಯಗುರುಮಾತೆ ನಾಜೀಯಾ ಎಸ್, ಆಡಳಿತಾಧಕಾರಿ ಸಲೀಮ ಸರ್, ಪಾಲಕರು. ಉಪಸ್ಥಿತರಿದ್ದರು. ಎಟಿಎಲ್ ಮ್ಯಾರಾಥನ್‍ದಲ್ಲಿ ಕ್ರೀಯಾತ್ಮಕ ಚಟುವಟಿಕೆಗಳನ್ನು ವೀಕ್ಷಿಸಿದರು.