ಆಧುನಿಕ ಕೃಷಿ ಪದ್ಧತಿ ಅನಿವಾರ್ಯ

ಅರಸೀಕೆರೆ, ನ. ೧೦- ರೈತರ ಕೃಷಿ ಕ್ಷೇತ್ರದಲ್ಲೂ ಬಾರಿ ಬದಲಾವಣೆಗಳಾಗುತ್ತಿದ್ದು, ಆಧುನಿಕ ಕೃಷಿ ಪದ್ಧತಿಗೆ ರೈತರು ಹೊಂದಿಕೊಳ್ಳುವುದು ಅನಿವಾರ್ಯ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಸಲಹೆ ನೀಡಿದರು.
ರೈತರು ತಾವು ಬೆಳೆದ ಬೆಳೆ ಹಸನು ಮಾಡಲು ಹಿಂದೆ ಹತ್ತಾರು ಜನ ಹಲವಾರು ದಿನ ಕೆಲಸ ಮಾಡಬೇಕಾಗಿತ್ತು. ಆದರೆ ಈಗ ಬಂದಿರುವ ಆಧುನಿಕ ಯಂತ್ರೋಪಕರಣಗಳಿಂದ ಒಂದೇ ದಿನದಲ್ಲಿ ಕೆಲಸ ಮುಗಿಸಬಹುದು. ವೈಜ್ಞಾನಿಕವಾಗಿ ಬೆಳೆದಂತೆ ಕೃಷಿ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಕ ಬದಲಾವಣೆ ಕಾಣುತ್ತಿದ್ದೇವೆ ಎಂದರು.
ರೈತರು ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಅರಿತು ಕೃಷಿ ಚಟುವಟಿಕೆ ಮಾಡಿದರೆ ಅಧಿಕ ಇಳುವರಿ ಜತೆಗೆ ಉತ್ತಮ ಲಾಭ ನೋಡಲು ಸಾಧ್ಯವಾಗಲಿದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಿಳಿಚೌಡಯ್ಯ ಮಾತನಾಡಿ, ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಜತೆಗೆ ರೈತ ಸಮುದಾಯದ ಬಲವರ್ಧನೆಗೆ ರಾಜ್ಯ, ಕೇಂದ್ರ ಸರ್ಕಾರಗಳು ಶ್ರಮಿಸುತ್ತಿವೆ. ಸಾಂಪ್ರದಾಯಿಕ ಕೃಷಿ ಪದ್ಧತಿ ಜತೆ ಜತೆಗೆ ಆಧುನಿಕ ಕೃಷಿ ಪದ್ಧತಿಗೆ ರೈತರು ಹೊಂದಿಕೊಳ್ಳುವುದು ಅನಿವಾರ್ಯ ಎಂದರು.
ಕೃಷಿ ಕ್ಷೇತ್ರಕ್ಕೆ ವಿಜ್ಞಾನ ಹಾಗೂ ತಂತ್ರಜ್ಞಾನ ಕಾಲಿಟ್ಟಿದ್ದು, ಇವುಗಳ ಬಳಕೆ ಮತ್ತು ಅಳವಡಿಕೆ ಕೂಡ ರೈತರಿಗೆ ಲಾಭ ತಂದು ಕೊಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿದ್ದರು.