ಆಧುನಿಕತೆ ಬೆಳೆದಂತೆಲ್ಲ ತಂತ್ರಜ್ಞಾನ ಅಗತ್ಯವಿದೆ

ಹರಸನಹಳ್ಳಿ.ಜು.೧೨; ನಮ್ಮ ದೇಶದ ಜನಸಂಖ್ಯೆ 130 ಕೋಟಿ ಇದೆ. ಜಗತ್ತು ಸ್ಪರ್ಧಾತ್ಮಕವಾಗಿದೆ. ಆಧುನಿಕತೆ ಬೆಳೆದಂತೆಲ್ಲ ತಂತ್ರಜ್ಞಾನ ಅಗತ್ಯವಿದೆ. ವಿದ್ಯಾರ್ಥಿಗಳು ಜ್ಞಾನ, ತಂತ್ರಜ್ಞಾನ ಮೂಲಕ ಅವಿಷ್ಕಾರಕ್ಕೆ ಮುಂದಾಗಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.ತಾಲೂಕಿನ ಅನಂತನಹಳ್ಳಿ ಬಳಿ ಇರುವ ಆದರ್ಶ ವಿದ್ಯಾಲಯದಲ್ಲಿ (ಆರ್.ಎಸ್.ಎ) ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಉದ್ಯೋಗ, ಉನ್ನತ ಶಿಕ್ಷಣಕ್ಕೆ ಒಂದು ಅಂಕದಿಂದ ವಂಚಿತರಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ನಿಟ್ಟಿನಲ್ಲಿ ಮನೆ ಬಿಟ್ಟು ಶಾಲೆಯಲ್ಲಿಯೇ ಅತಿ ಹೆಚ್ಚು ಸಮಯವನ್ನು ವಿದ್ಯಾರ್ಥಿಗಳು ಕಳೆಯುವುದರಿ0ದ ಶಿಕ್ಷಕರೆ ತಂದೆ-ತಾಯಿಯಾಗಿರುತ್ತಾರೆ. ನಿಮ್ಮ ಮೇಲೆಯ ಜವಾಬ್ದಾರಿ ಹೆಚ್ಚಿರುತ್ತದೆ. ಇನ್ನಷ್ಟು ಸುಧಾರಿಸಿಕೊಂಡು ಉತ್ತಮ ಶಿಕ್ಷಣ ನೀಡಿ ಎಂದು ಹೇಳಿದರು.ಶಾಲೆಯ ಮುಖ್ಯೋಪಾಧ್ಯಾಯ ಎಚ್. ಕೆ. ಚಂದ್ರಪ್ಪ ಅವರು ಶಾಲೆಯ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೆ ನನ್ನ ಅವಧಿಯಲ್ಲಿ ರಂಗಮAದಿರ ನಿರ್ಮಾಣಕ್ಕೆ ಅನುದಾನ ನೀಡಲಾಗಿತ್ತು. ಆದರೆ ಯಾಕೆ, ಅರ್ಧಕ್ಕೆ ನಿಂತಿದೆಯೋ ಗೊತ್ತಿಲ್ಲ. ಇಲ್ಲಿಯವರೆಗೂ ಯಾಕೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಿಲ್ಲ? ಶಾಲೆಯ ಕ್ರೀಡಾಂಗಣ, ಹೈಟೆಕ್ ಅಡುಗೆ ಕೊಣೆ, ಸೈಕಲ್ ನಿಲ್ದಾಣ ನಿರ್ಮಾಣ ಮಾಡಲು ಆದಷ್ಟು ಪ್ರಯತ್ನಿಸುವುದಾಗಿ ಹೇಳಿದರು.ಕೇಂದ್ರ ಸರ್ಕಾರದ ಯೋಜನೆಯಾದ ಲ್ಯಾಬ್‌ನಲ್ಲಿದ್ದ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಶಾಲೆಯ ಮಕ್ಕಳಿ0ದ ಒ0ದು ಗ0ಟೆಗಳ ಕಾಲ ಮಾಹಿತಿ ಅಲಿಸಿದರು.ಇದೇ ವೇಳೆ ಪೋಷಕರು ಶಾಲೆಗೆ ಸಮರ್ಪಕವಾದ ಬಸ್ ವ್ಯವಸ್ಥೆ ಇಲ್ಲ. ಆದ್ದರಿಂದ ಸಾರಿಗೆ ಬಸ್ ಕಲ್ಪಿಸಲು ಮನವಿ ಮಾಡಿದರು. ಘಟಕ ವ್ಯವಸ್ಥಾಪಕರೊಂದಿಗೆ ಮಾತನಾಡುವುದಾಗಿ ಹೇಳಿದರು.ನೀಲಗುಂದ ಗ್ರಾಪಂ ಅಧ್ಯಕ್ಷ ಹನುಮವ್ವ, ಸದಸ್ಯರಾದ ಅಣ್ಣಪ್ಪ, ತಿಪ್ಪೇಸ್ವಾಮಿ, ಜಾನಕಮ್ಮ, ಕ್ಷೇತ್ರ ಶಿಕ್ಷಣಾಕಾರಿ ಯು. ಬಸವರಾಜಪ್ಪ, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಗುರುಬಸವರಾಜ, ಶಾಲಾ ಸಿಬ್ಬಂದಿವರ್ಗ, ಎಸ್‌ಡಿಎಂಸಿ ಸದಸ್ಯರು ಇತರರು ಇದ್ದರು.