ಆಧುನಿಕತೆಯ ಪಂಜರದಲ್ಲಿ ಮಾನವ” ಧರ್ಮಂ ಪ್ರಧಾನಂ, ಅರ್ಥಂ ಧರ್ಮಾಘ್ರಿಪ ಫಲಂ, ಅದರ್ಕೆ ರಸಮದು ಕಾಮಂ”.

ದಾವಣಗೆರೆ ; ಪಂಪಕವಿಯು ಮಹಾಭಾರತದ ಒಂದು ಶ್ಲೋಕವನ್ನು ತನ್ನ ಕಾವ್ಯದಲ್ಲಿ ಉಲ್ಲೇಖಿಸಿರುವುದು. ಮಹಾಭಾರತಭೋಗಾಕಾಂಕ್ಷೆ ಹಾಗೂ ಅದರ ಪರಿಣಾಮಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ವಿಶ್ಲೇಷಿಸುತ್ತದೆ. ಆಧುನಿಕ ಜಗತ್ತಿನಲ್ಲಿ ಭೋಗಸಂಸ್ಕೃತಿಯೇ ಪ್ರಧಾನವಾಗಿರುವ ಕಾಲದಲ್ಲಿ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳ ಓದು ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ತಂತ್ರಜ್ಞಾನದ ಪಂಜರದಲ್ಲಿರುವ ಮಾನವ ಗತಕಾಲದ ಸಂಬAಧವನ್ನು ಕಡಿದುಕೊಂಡಿದ್ದಾನೆ. ಹಬ್ಬಗಳಿಗೂ ತಂತ್ರಜ್ಞಾನದ ಸ್ಪರ್ಶವನ್ನು ಕೊಟ್ಟು ಅರ್ಥಹೀನವನ್ನಾಗಿ ಮಾಡಿದ್ದಾನೆ. ತಂತ್ರಜ್ಞಾನದ ಪಂಜರದಲ್ಲಿ ಸಿಲುಕಿ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಂಡಿದ್ದಾನೆ. ಆಧುನಿಕತೆಯು ಮನುಷ್ಯನು ಹಿಂದೆ ಕನಸಿನಲ್ಲಿಯೂ ಕಾಣದಿದ್ದ ಇಂದ್ರೀಯ ಸುಖಗಳನ್ನು ತಂದುಕೊಟ್ಟಿದೆ. ತನ್ನ ಅತಿಯಾದ ಆಸೆಯಿಂದ ಅವುಗಳ ಬೆನ್ನು ಹತ್ತಿದ ಮನುಷ್ಯನಿಗೆ ಅತೃಪ್ತಿ ಹೆಚ್ಚುತ್ತಲೇ ಇದೆ. ವಿಚಾರಶಕ್ತಿ ಮತ್ತು ವಿಜ್ಞಾನ ಶಕ್ತಿಯನ್ನು ನಂಬಿ ಗತಕಾಲದ ವೈಭವ ಮರೆತು ಆಧುನಿಕ ಜಗತ್ತಿನಲ್ಲಿ ದುರಂತ ಅಂತ್ಯವನ್ನು ಕಾಣುವ ಅವಸರದಲ್ಲಿದ್ದಾನೆ. ವಿಜ್ಞಾನ ಶಕ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ ಮಾನವ ಸಂಬAಧಗಳನ್ನು ಕಳೆದುಕೊಂಡು ಅದನ್ನು ಅದೇ ತಂತ್ರಜ್ಞಾನದ ದಾರದಿಂದ ತೇಪೆ ಹಾಕುತ್ತಿದ್ದಾನೆ. ಬದುಕಿನ ಅರ್ಥ ಬುದ್ಧಿಶಕ್ತಿಯಿಂದ ಯಾವಾಗ ನಿರ್ಧಾರವಾಗತೊಡಗುತ್ತೋ ಆಗ ಬದುಕು ಅರ್ಥಹೀನವಾಗುತ್ತದೆ. ಸೃಷ್ಟಿಯನ್ನು ಮಣಿಸಿ ಅದರ ಶಕ್ತಿಯನ್ನು ಬದುಕಿನ ವಾಹನಕ್ಕೆ ಇಂಧನವನ್ನಾಗಿ ಮಾಡಿಕೊಂಡು ಓಡಿಸುತ್ತಿರುವ ಮಾನವನಿಗೆ ತನ್ನ ಅಂತ್ಯ ಸಮೀಪಿಸುತ್ತಿದೆ ಎನ್ನುವ ಅರಿವನ್ನು ಮರೆತಿದ್ದಾನೆ. ತಾನು ಸೃಷ್ಟಿಯ ಒಂದು ಭಾಗ ಎನ್ನುವ ಸತ್ಯವನ್ನು ಸುಳ್ಳಿನ ರಾಶಿಯಲ್ಲಿ ಮುಚ್ಚಿ ಹೂತಿದ್ದಾನೆ. ಸೃಷ್ಟಿ, ಸೃಷ್ಟಿಕರ್ತ ಎಲ್ಲವೂ ತನ್ನ ಅಧೀನ ಎಂಬ ಅಹಂ ಅವನನ್ನು ಆವರಿಸಿದೆ. ಆಧ್ಯಾತ್ಮಿಕ ತವರೂರಾದ ಭಾರತದಲ್ಲಿ ಆಧುನಿಕತೆ ನುಗ್ಗಿ ಭಾರತದ ನೆಲ, ಜಲ, ಗಾಳಿ, ಪ್ರಕೃತಿ ಎಲ್ಲವನ್ನೂ ಕಾಲಡಿಯಲ್ಲಿ ತುಳಿದು ಹಾಕಿದೆ. ವ್ಯಾಸ, ವಾಲ್ಮೀಕಿ, ಪಂಪ, ರನ್ನ, ಜನ್ನ, ಬಾಹುಬಲಿ, ವೈಶಂಪಾಯನ, ಸೂತಪುರಾಣಿಕ, ಕುವೆಂಪು-ಬೇAದ್ರೆ, ಅಡಿಗರಂತಹ ಅತಿರಥ ಮಹಾರಥರನ್ನು ಕಂಡ ಭಾರತಮಾತೆ ಆಧುನಿಕತೆಗೆ ಸಿಲುಕಿ ನರಳುತ್ತಿದ್ದಾಳೆ. ಮಾನವ ಸಹಜ ಚಿಂತನೆಗಳನ್ನು ಮಾಡದೆ ತಂತ್ರಜ್ಞಾನದ ದಾಸನಾಗಿದ್ದಾನೆ.ಮೆಸಪೋಟೋಮಿಯ ನಾಗರೀಕತೆ ಕಂಡ ಭಾರತವನ್ನು ಬರೀ ಕಸದಿಂದ ತುಂಬಿ ನಾರುವಂತೆ ಮಾಡಿರುವ ಮಾನವ ನಾಗರೀಕತೆಯನ್ನು ಆಧುನಿಕತೆಗೆ ಮಾರಿದ್ದಾನೆ. ಪಾಶ್ಚಾತ್ಯ ದೇಶಗಳ ಸಂಸ್ಕೃತಿಯಲ್ಲಿ ತನ್ನ ಸಂಸ್ಕೃತಿಯನ್ನು ವಿಲೀನಗೊಳಿಸಿ ಯಾವ ಸಂಸ್ಕೃತಿಯನ್ನು ಪಾಲಿಸಬೇಕು ಎಂಬ ತೊಳಲಾಟದಲ್ಲಿ ನರಳುತ್ತಿದ್ದಾನೆ. ಮಾನವ ಸಂಬAಧಗಳಿಗೆ ಬೆಲೆ ಕೊಡದೆ ಕೇವಲ ಶ್ರೀಮಂತಿಕೆಯ ಮರೀಚಿಕೆಯ ಹಿಂದೆ ಓಡುತ್ತಾ ಸಂಬAಧಗಳನ್ನು ಕಳೆದುಕೊಂಡು ಏಕಾಂಗಿಯಾಗಿದ್ದಾನೆ. ಧರ್ಮ, ಸಮನ್ವಯತೆ, ನಾಗರಿಕತೆ, ಸಂಬAಧಗಳನ್ನು ಉಳಿಸಿಕೊಂಡು ತನ್ನ ತನವನ್ನು ಕಾಪಾಡಿಕೊಂಡು ಆಧುನಿಕತೆಯ ನೆರಳಲ್ಲಿ ಬದುಕಬಹುದೆಂಬ ಸತ್ಯವನ್ನು ಅರಿಯಬೇಕು. ತಂತ್ರಜ್ಞಾನವನ್ನು ಬಳಸಿಕೊಂಡು ತಾನೂ ಸೃಷ್ಟಿಯ ಒಂದು ಭಾಗ ಎಂದು ಯಾವಾಗ ಅರಿತುಕೊಳ್ಳುತ್ತಾನೋ ಅಂದು ಮಾನವ ತನ್ನ ಸಹಜ ಸೌಂದರ್ಯವನ್ನು ತಿಳಿಯುತ್ತಾನೆ.ಇನ್ನು ಮಾನವ ಸಂಬAಧಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಕೀಳುಮಟ್ಟಕ್ಕೆ ತಿಳಿದಿದ್ದಾನೆ. ತನ್ನ ಕೆಲಸವನ್ನು ಸುಲಭವಾಗಿಸಿಕೊಳ್ಳಲು ಸಂಬAಧಗಳನ್ನು ಉಪಯೋಗಿಸಿಕೊಂಡು ಕೆಲಸವನ್ನು ಸಾಧಿಸಿ ಕೊಳ್ಳುತ್ತಾನೆ. ಇದು ಆಧುನಿಕತೆಯ ದುರುಪಯೋಗ ಆಧುನಿಕತೆ ಮತ್ತು ತಂತ್ರಜ್ಞಾನ ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರ್ವಕವಾಗಿರಬೇಕು. ಆದರೆ ತಂತ್ರಜ್ಞಾನ ಇಂದು ಮಾನವನ ವಿನಾಶಕ್ಕೆ ಕಾರಣವಾಗುತ್ತಿದೆ. ಈ ಇಡೀ ಜಗತ್ತು ಸೃಷ್ಟಿಯಾಗಿರುವುದು ಕೇವಲ ನನಗಾಗಿ ಮಾತ್ರ ಎಂಬ ಮನುಷ್ಯನ ಮೌಢ್ಯ ಮತ್ತು ಅಹಂಕಾರವೇ ನಮ್ಮ ಈ ದುಸ್ಥಿತಿಗೆ ಕಾರಣ. ತಾನು ಈ ಸುಂದರ ಪ್ರಪಂಚದ ಒಂದು ಭಾಗ ಮಾತ್ರ ಎಂಬುದನ್ನು ಅರಿತಾಗ ಆಧುನಿಕತೆ ಮತ್ತು ತಂತ್ರಜ್ಞಾನದ ಸಮರ್ಪಕ ಬಳಕೆ ಸಾಧ್ಯ. ತಂತ್ರಜ್ಞಾನದ ಸರಿಯಾದ ಬಳಕೆಯಿಂದ ವ್ಯಕ್ತಿಯೊಬ್ಬನನ್ನು ಆತನ ಹೆಸರಿಗಿಂತಲೂ ಹೆಚ್ಚಾಗಿ ವ್ಯಕ್ತಿತ್ವವೇ ಗುರುತಿಸುವಂತೆ ಮಾಡುತ್ತದೆ. ಭೂತಕಾಲದ ಹಿನ್ನೆಲೆಯಿಂದ ವರ್ತಮಾನದ ಇರುವಿಕೆಯಿಂದ ಭವಿಷ್ಯದ ಕಾಯುವಿಕೆಯವರೆಗೆ ವ್ಯಕ್ತಿ ನಿರಂತರವಾಗಿ ಬೆಳೆಯುತ್ತಲೇ ಇರುತ್ತಾನೆ. ಬೆಳವಣಿಗೆ ಒಂದು ಸಹಜ ಕ್ರಿಯೆ. ವ್ಯಕ್ತಿಯ ಬೆಳವಣಿಗೆಯ ಮಧ್ಯೆ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳ ಮಧ್ಯೆ ತಂತ್ರಜ್ಞಾನದ ಪೂರಕ ಉಪಯೋಗದಿಂದ ಮಹತ್ತರವಾದ ಸಾಧನೆ ಸಾಧ್ಯ, ಆದರೆ ತಂತ್ರಜ್ಞಾನದಿAದ ಮಾನವನ ಅಂತರAಗ, ಬುದ್ಧಿಮತ್ತೆ ವಿಶಾಲವಾಗುತ್ತಾ ಹೋಗಬೇಕು. ಒಂದಾನೊAದು ಕಾಲದಲ್ಲಿ ಸಣ್ಣ ವಿಷಯವನ್ನು ಹೇಳಿಕೊಂಡು ಪರಸ್ಪರ ಖುಷಿ ಪಡುತ್ತಿದ್ದೆವು. ಅಂದು ಅಲ್ಲಿ ಮಾತಿತ್ತು, ಮಾತಿನಲ್ಲಿ ಒಲವಿತ್ತು, ಸಂಬAಧಗಳಿಗೆ ಬೆಲೆಯಿತ್ತು. ಕ್ರಮೇಣ ಮನುಷ್ಯ ಆಧುನಿಕ ಜೀವನ ಶೈಲಿಗೆ ತೆರೆದುಕೊಳ್ಳುತ್ತಾ ಮುಖ ಮುಖವಾಡವಾಯಿತು, ಮಾತುಗಳು ಹೆಪ್ಪುಗಟ್ಟಿದವು, ಭಾವ ಬರಡಾಯಿತು. ಇದೆಯೆಂದು ನಂಬಿಸುತ್ತಲೇ ಇಲ್ಲವೆನ್ನುವ ಹತ್ತಾರು ಮುಖವಾಡಗಳು ಅನಾವರಣಗೊಂಡವು. ಇದೀಗ ಸಂತಸದ ವಿಷಯಗಳು ಸಾವಿರವಿದ್ದರೂ ಹಂಚಿಕೊಳ್ಳುವ ಮನಸ್ಸಿಲ್ಲ ಕೇಳಿಸಿಕೊಳ್ಳುವ ತಾಳ್ಮೆಯಿಲ್ಲ ಅಂತರAಗದಿAದ ಮಿಡಿಯುವ ಹೃದಯವಂತೂ ಮೊದಲೇ ಇಲ್ಲ.  ವ್ಯಕ್ತಿಯೊಬ್ಬನನ್ನು ಸುಖಿಯನ್ನಾಗಲಿ ದುಃಖಿಯನ್ನಾಗಲಿ ಮಾಡುವುದು ಪರಿಸರವೂ ಅಲ್ಲ ಪರಿಸ್ಥಿತಿಯಂತೂ ಅಲ್ಲವೇ ಅಲ್ಲ, ಆತನ ಮನಸ್ಸೇ. ಅಂತಹ ಮನಸ್ಸನ್ನು ಆರೋಗ್ಯವಾಗಿ ಸದೃಢವಾಗಿ ಇರಿಸಿಕೊಳ್ಳಬೇಕಾದರೆ ನಮ್ಮ ಆಲೋಚನೆಗಳು ಆರೋಗ್ಯವಂತರಾಗಿರಬೇಕು. ತಂತ್ರಜ್ಞಾನವನ್ನು ನಾವು ಒಳಿತಿಗೆ ಬಳಸಿದ್ದೇ ಆದರೆ ಆರೋಗ್ಯವಂತ ಮನಸ್ಸು ನಮ್ಮದಾಗಲಿದೆ. ಇದರಿಂದ ಆರೋಗ್ಯವಂತ ಸಮಾಜವನ್ನು ಸೃಷ್ಟಿಸಬಹುದು. ತಂತ್ರಜ್ಞಾನದ ಸದುಪಯೋಗದಿಂದ ಸದ್ಗುಣಗಳನ್ನು ಸೃಷ್ಟಿಸುವುದೂ ಇದೆ. ಕತ್ತಲಿನಿಂದ ಬೆಳಕಿನೆಡೆಗೆ ನಡೆದು ಬಂದವರಿಗೆ ಮಾತ್ರ ತಂತ್ರಜ್ಞಾನದ ಸದ್ಬಳಕೆ ಸಾಧ್ಯ. ಮನಸ್ಸು ಎಷ್ಟು ಶಕ್ತಿಯುತವಾದದ್ದು ಎಂದರೆ ಏನನ್ನು ಬೇಕಾದರೂ ಸೃಷ್ಟಿಸಬಲ್ಲದು ಮತ್ತು ಅಳಿಸಿ ಹಾಕಬಲ್ಲದು. ಬೇಕಾದದ್ದನ್ನು ಉತ್ಪಾದಿಸುವ ಶಕ್ತಿ ನಮಗೆ ತಂತ್ರಜ್ಞಾನದಿAದ ಬಂದಿದ್ದರೂ ನಾವು ಇನ್ನೇನನ್ನೋ ಸೃಷ್ಟಿಸುತ್ತೇವೆ. ಅನಗತ್ಯ ಎಂದು ಗೊತ್ತಿದ್ದರೂ ಅದನ್ನು ಮಾಡುತ್ತೇವೆ. ಆಧುನಿಕತೆಗೆ ತೆರೆದುಕೊಳ್ಳುವ ಮುನ್ನ ನಾವು ಹೃದಯ ಮನಸ್ಸುಗಳೆರಡನ್ನೂ ಸಮತೋಲನದಲ್ಲಿರಿಸಿಕೊಳ್ಳಬೇಕು.ಬುದ್ಧಿವಂತಿಕೆ ಮತ್ತು ಮನಸ್ಸಿನ ಹೊಂದಾಣಿಕೆಯು ತುಂಬಾ ಕಷ್ಟದಾಯಕ, ಏಕೆಂದರೆ ಬುದ್ಧಿವಂತಿಕೆ ಮನಸ್ಸಿನ ಮೇಲೆ ಸವಾರಿ ಮಾಡಲು ಹೊರಟಾಗ, ಬುದ್ಧಿವಂತಿಕೆಯ ಅತ್ಯುನ್ನತ ಹಂತ ತಲುಪಿದಾಗ ತಂತ್ರಜ್ಞಾನದ ಬಳಕೆ ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಗ ಸೃಷ್ಟಿ ವಿನಾಶದ ಅಂಚಿಗೆ ಬಂದು ನಿಲ್ಲುತ್ತದೆ. ಆದ್ದರಿಂದ ಇಲ್ಲಿ ತಂತ್ರಜ್ಞಾನದ ಸದ್ಬಳಕೆ ಆಗಬೇಕಾದರೆ ಹೃದಯ ಮತ್ತು ಮನಸ್ಸುಗಳ ಸಮತೋಲನ ಬಹಳ ಅಗತ್ಯ. ಇದರಿಂದ ಮಾನವ ಸಂಬAಧಗಳ ಜೊತೆ ಜೊತೆಗೆ ತಂತ್ರಜ್ಞಾನದ ಉಪಯೋಗದಿಂದ ಉನ್ನತ ಸಾಧನೆ ಸಾಧ್ಯ. ಆಧುನಿಕತೆ ಮತ್ತು ತಂತ್ರಜ್ಞಾನದ ದುರುಪಯೋಗದಿಂದ ಮಾನವ ಸಹಜೀವನ ಮತ್ತು ಸಹಬಾಳ್ವೆಯಿಂದ ದೂರವಾಗುತ್ತಿದ್ದಾನೆ.ಮತ್ತು ಮನೋರೋಗದಿಂದ ಬಳಲುತ್ತಿದ್ದಾನೆ. ಮನುಷ್ಯ ತಲೆ ಕೆಟ್ಟವರ ಹಾಗೆ ವರ್ತಿಸುತ್ತಿದ್ದಾನೆ. ಈ ಹಿಂದೆಯೇ ಅನೇಕ ವಿಜ್ಞಾನಿಗಳು ತಂತ್ರಜ್ಞಾನದ ದುರುಪಯೋಗದಿಂದ ಮಾನವನ ಅಂತ್ಯವಾಗಬಹುದು ಎಂದು ಹೇಳಿದ್ದಾರೆ. ಪ್ರಪಂಚದ ಅಳಿವು-ಉಳಿವುಗಳನ್ನು ಮನೋವಿಜ್ಞಾನ ನಿರ್ಧರಿಸುತ್ತದೆ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಮಾನವನಿಗೆ ಅನೇಕ ಸವಲತ್ತುಗಳನ್ನು ನೀಡುವುದರ ಮೂಲಕ ಬದುಕನ್ನು ಸುಂದರವಾಗಿಸಿದೆ ಆದರೆ ಆ ಸುಂದರತೆ ನೆಮ್ಮದಿ ತೃಪ್ತಿ ಕೊಡುವಲ್ಲಿ ಸೋತಿದೆ. ಇಂದಿನ ಸಮಾಜವನ್ನು ಗಮನಿಸಿದರೆ ನಮಗೆ ವಾಸ್ತವದ ಅರಿವಾಗುವುದು. ನಾವು ಒಂದು ರೋಗಿಷ್ಟ ಸಮಾಜದಲ್ಲಿ ಬದುಕುತ್ತಿದ್ದೇವೆ. ನೈತಿಕ ಅನಾಯಕ ಸ್ಥಿತಿ ಅನುಭವಿಸುತ್ತಿದ್ದೇವೆ. ಅಧಿಕಾರದ ಲಾಲಸೆ, ಹಣದ ಹುಚ್ಚು, ಸಂಬAಧಗಳ ದುರ್ಬಳಕೆ, ನಾನು ಎಂಬ ಅಹಂ, ಇವುಗಳಿಂದ ನೈತಿಕ ಅಧಃಪತನಕ್ಕೆ ಸಾಗುತ್ತಿದ್ದೇವೆ. ಅತಿಯಾಗಿ ಉತ್ಪಾದಿಸುವಿಕೆ, ತಂತ್ರಜ್ಞಾನದ ಅತೀ ಅವಲಂಬನೆ ಇವುಗಳಲ್ಲಿಯೇ ನಿರತರಾಗಿದ್ದೇವೆ. ಭೋಗ ಸಂಸ್ಕೃತಿಯಲ್ಲಿ ಮುಳುಗಿಹೋಗಿರುವ ನಾವು ಅದರಿಂದ ಹೊರ ಬರುವ ಬಗ್ಗೆ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವವಾದುದು.  ಈ ಎಲ್ಲಾ ರೋಗಗ್ರಸ್ತ ಮನಸ್ಸುಗಳಿಗೆ ದಿವ್ಯ ಔಷಧಿ ಪ್ರೀತಿ ಮಾನವನ ಮನಸ್ಸಿನ ಪರಿಶುದ್ಧತೆಗೆ ವಿಕಾಸಕ್ಕೆ ಪ್ರೀತಿಯೇ ಮೂಲಶಕ್ತಿ. ಇಂದಿನ ಮಾನವನ ಮನಸ್ಸಿನಲ್ಲಿ ಕಾಡುತ್ತಿರುವ ದ್ವೇಷ-ಅಸೂಯೆ ಭಯ-ಭೀತಿ, ಮನಸ್ಸಿನ ವಿಕಾರಕ್ಕೆ ಪ್ರೀತಿಯೇ ಸರಿಯಾದ ಮತ್ತು ನಿಜವಾದ ಔಷಧಿ. ಆದರೆ ಇಂದಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವ್ಯವಸ್ಥೆಗಳು ಮಾನವನಿಗೆ ಸಹಜೀವನದಿಂದ ಪ್ರೀತಿಸುವುದನ್ನು ಕಲಿಸುತ್ತಿಲ್ಲ. ಏನನ್ನಾದರೂ ಸಾಧಿಸುವ ಮನಸ್ಸನ್ನು ನೀಡುತ್ತಿಲ್ಲ. ಇರುವ ಆಸಕ್ತಿಯಿಲ್ಲ ಭೌತಿಕ ಸುಖವನ್ನು ಪಡೆಯುವುದರಲ್ಲಿ, ಹಾಗಾಗಿ ನಾವು ಇಂದು ಅತ್ಯಂತ ರೋಗಪೀಡಿತ ಸಮಾಜದಲ್ಲಿ ಬದುಕುತ್ತಿದ್ದೇವೆ. ನಮ್ಮ ಅಂತ್ಯವನ್ನು ನಾವೇ ಸಂತೋಷದಿAದ ಆಹ್ವಾನಿಸುತ್ತಿದ್ದೇವೆ. ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಪ್ರೀತಿಸುವ ಶಕ್ತಿಯನ್ನೇ ಕಳೆದುಕೊಂಡಿರುವ ಸಮಾಜದಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ. ಸೃಜನಶೀಲ ಮನಸ್ಸುಗಳು ಸಮಾಜದಲ್ಲಿ ಹೆಚ್ಚಾದಂತೆ ಸಮಾಜ ಆರೋಗ್ಯವಾಗಿರುತ್ತದೆ. ಭೋಗ ಸಂಸ್ಕೃತಿ ನಮ್ಮಿಂದ ದೂರವಾಗಬೇಕು, ಹಾಗಾಗಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಬೇಕು. ಈ ಆಧುನಿಕತೆಯ ಸಮಾಜನ ಮನುಷ್ಯನಲ್ಲಿ ಸಹಜವಾಗಿ ಹುದುಗಿರುವ ಇತ್ಯಾತ್ಮಕ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಮಾತ್ರ ಆರೋಗ್ಯಕರ ಸಹಬಾಳ್ವೆ ಸಾಧ್ಯ. ಕೊನೆಯದಾಗಿ ತಂತ್ರಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಾ ಆಧುನಿಕತೆಗೆ ತೆರೆದುಕೊಳ್ಳುತ್ತಾ ಮಾನವ ಸಂಬAಧಗಳನ್ನು ಪ್ರಾಮಾಣಿಕವಾಗಿ ಉಳಿಸಿಕೊಳ್ಳುತ್ತಾ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವತ್ತ ಗಮನಹರಿಸಿ ಸಾಕ್ಷಾತ್ಕಾರವನ್ನುಸಾಧಿಸೋಣ. ಆರೋಗ್ಯವಂತ ಸಮಾಜವನ್ನು ಬೆಳೆಸೋಣ, ಸೃಷ್ಟಿಯಲ್ಲಿ ಎಲ್ಲಾ ಜೀವಿಗಳೂ ಒಂದೇ ಎನ್ನುವ ಭಾವನೆ ಬೆಳೆಸಿಕೊಂಡು ಬದುಕೋಣ. ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ಮನಸ್ಥಿತಿಯಲ್ಲಿ ಇದ್ದು ಒಂದು ಉತ್ತಮ ವಾತಾವರಣವನ್ನು ಉಳಿಸೋಣ.
 ಡಾ.ಅಶ್ವಿನಿ ಎಂ.ರಾವ್ ಬಿಐಇಟಿ ಕಾಲೇಜು. ದಾವಣಗೆರೆ