ಆಧಾರ ರಹಿತ ಆರೋಪ: ಆಜಾದ್ ವಿರುದ್ದ ಜೈರಾಮ್ ರಮೇಶ್ ವಾಗ್ದಾಳಿ

ನವದೆಹಲಿ,ಆ.29- ಅಧಿಕಾರ ನೀಡಿದ ಪಕ್ಷವನ್ನು ತೊರೆದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿತ್ತಿರುವ‌ ಮಾಜಿ ನಾಯಕ ಗುಲಾಂ ನಬಿ ಆಜಾದ್, ವಿರುದ್ದ ಮತ್ತೊಬ್ಬ ಹಿರಿಯ ನಾಯಕ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.

ಆಜಾದ್ ಅವರು ಇಂದು ಏನೇ ಆಗಿದ್ದರೂ ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ. ಸುದೀರ್ಘ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಲವು ಅಧಿಕಾರ ಅನುಭವಿಸಿ ಈಗ ತೆಗಳುತ್ತಿರುವುದು ಖಂಡನಾರ್ಹ ಎಂದಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೃತ್ತಿಜೀವನದ ಕೊನೆಯ ಹೊಸ್ತಿಲಲ್ಲಿರುವ ಗುಲಾಮ್‌ನಬಿ ಆಜಾದ್ ಅವರು ಸೌಜನ್ಯದಿಂದ ಪಕ್ಷ ತ್ಯಜಿಸಿದ್ದರೆ ಸುಮಗಮನೆ ಇರಬಹುದಿತ್ತು.ಆದರೆ ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ದೂರಿದ್ದಾರೆ.

ವಿವೇಚನಾರಹಿತವಾಗಿ ಸಂದರ್ಶನಗಳನ್ನು ನೀಡುವ ಮೂಲಕ, ಕಾಂಗ್ರೆಸ್ ಮತ್ತು ಮಾಜಿ ಅಧ್ಯಕ್ಷ ರಾಹುಲಗ ಗಾಂಧಿ ಅವರನ್ನು ಟೀಕಿಸುತ್ತಿರುವುದು ಖಂಡನಾರ್ಹ ಎಂದು ಅವರು ಹೇಳಿದ್ದಾರೆ.

ಆಧಾರ ರಹಿತ ಆರೋಪ ಮಾಡುವ ಮೂಲಕ ಅಜಾದ್ ಅವರು ತನ್ನನ್ನು ತಾನು ಮತ್ತಷ್ಟು ಕುಗ್ಗಿಸಿಕೊಳ್ಳುತ್ತಿದ್ದಾರೆ. ಜೊತೆಗೆ ವಿಶ್ವಾಸಘಾತುಕತನವನ್ನು ಸಮರ್ಥಿಸುತ್ತಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಬಲವಂತವಾಗಿ ತನ್ನನ್ನು ಹೊರ ಹೋಗುವಂತೆ ಮಾಡಲಾಯಿತು ಎಂದು ಬೆಳಗ್ಗೆಯಷ್ಟೇ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ.