ಆಧಾರ ಕಾರ್ಡ್ ನವೀಕರಿಸಿಕೊಂಡುಸದುಪಯೋಗ ಪಡೆದುಕೊಳ್ಳಿ:ಜಿಲ್ಲಾಧಿಕಾರಿ

ಬೀದರ,ಮಾ.16: ಬೀದರ ಜಿಲ್ಲೆಯಲ್ಲಿ ಆಧಾರ ಕಾರ್ಡ್ ಹೊಂದಿರುವ ನಾಗರೀಕರು ಆಧಾರ್ ನೋಂದಣಿ ಸಮಯದಲ್ಲಿ ನಮೂದಿಸಿದ ವಿಳಾಸ 10 ವರ್ಷ ಮೇಲ್ಪಟ್ಟಿರುವ ಮತ್ತು ಆಧಾರ ಕಾರ್ಡ್‍ಗಳು ನಿಷ್ಕ್ರಿಯವಾಗುತ್ತಿರುವುದರಿಂದ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವಂತಹ ನಾಗರೀಕರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳನ್ನು ಸಂಬಂಧಿಸಿದ ಹತ್ತಿರದ ಅಟಲ್ ಜೀ ಜನಸ್ನೇಹಿ ಕೇಂದ್ರ, ನಾಡಕಛೇರಿ, ಜಿಲ್ಲಾಧಿಕಾರಿಗಳ ಕಛೇರಿಯ ಸ್ಪಂದನ ಕೇಂದ್ರ, ಅಂಚೆ ಕಛೇರಿ ಹಾಗೂ ಬ್ಯಾಂಕ್‍ಗಳಲ್ಲಿ ಇರುವ ಆಧಾರ ನೋಂದಣಿ ಕೇಂದ್ರ ಭೇಟಿ ನೀಡಿ UIಆಂI ಅವರು ಅಭಿವೃದ್ಧಪಡಿಸಿರುವ ಹೊಸ ವೈಶಿಷ್ಟ ದಾಖಲಾತಿ ನವೀಕರಣ (UIಆಂI hಚಿs ಆeveಟoಠಿeಜ ಚಿ ಟಿeತಿs ಜಿeಚಿಣuಡಿe ಆoಛಿumeಟಿಣ Uಠಿಜಚಿಣe) ತಂತ್ರಾಂಶವನ್ನು ಉಪಯೋಗಿಸಿಕೊಂಡು ಆಧಾರ ಕಾರ್ಡಗಳನ್ನು ನವೀಕರಣಗೊಳಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.