ಆದ್ಯ ವಚನಕಾರರ ಮಾರ್ಗದಲ್ಲಿ ನಡೆಯೋಣ – ನಾಗೇಶ್ ಶ್ಯಾವಿ

ಸಿರವಾರ.ಏ.೧೩- ಸನ್ಮಾರ್ಗ ಮತ್ತು ಸನ್ನಡತೆಯ ತಿರುಳುಗಳನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ ಆದ್ಯ ವಚನಕಾರ ದೇವರ ದಾಸಿಮಯ್ಯ ರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದು ಡಾ.ನಾಗೇಶ್ ಶ್ಯಾವಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು ಬದುಕಿನ ಎಲ್ಲ ವಿಚಾರಗಳನ್ನು ತಮ್ಮ ವಚನಗಳಲ್ಲಿ ಪ್ರಚುರಪಡಿಸಿ ಶತ ಶತಮಾನಗಳಿಗೂ ಇವರ ಸನ್ಮಾರ್ಗದ ನುಡಿಗಳನ್ನು ನಾವುಗಳು ಮುಂದಿನ ಪೀಳಿಗೆಯು ಸಹ ಅನುಸರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿರಸ್ತೆದಾರ ಫಕ್ರುದ್ದೀನ್, ಎಪ್‌ಡಿಎ ಈರೇಶ, ತಾಲೂಕು ನೇಕಾರ ಸಮುದಾಯದ ಷಣ್ಮುಖಪ್ಪ ಮಸ್ಕಿ, ನಾಗರಾಜ ಗುಡ್ಡದಮನಿ, ಉಮಾಶಂಕರ್ ಜೇಗರಕಲ್, ಬೂದೆಪ್ಪ ಮಳ್ಳಿ, ಮಹೇಶ ಕೊಳ್ಳಿ, ರಾಚಪ್ಪ ಬೋನಗಿರಿ, ಅಮರೇಶ ಹಂದ್ರಾಳ, ಉಮೇಶ ಜೇಗರಕಲ್, ಸತೀಶ್ ಗುಡ್ಡದಮನಿ, ಪಿ.ಕೃಷ್ಣ, ಗಿರೀಶ್ ಬಂಡರಗಲ್, ಮಿಥುನ್ ಚ್ಯಾಗಿ ಸೇರಿದಂತೆ ಹಲವರು ಭಾಗಿಯಾಗಿದ್ದರು.