ಆದೇಶ ಹಿಂಪಡೆಯುವಂತೆ ಸಹಶಿಕ್ಷಕರ ಸಂಘ ಆಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.17: ಪ್ರೌಢಶಾಲಾ ಶಿಕ್ಷಕರನ್ನು ರಜಾ ಅವಧಿಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ನಡೆಸಲು ಮಾಡಿರುವ ಆದೇಶವನ್ನು ಹಿಂಪಡೆಯಬೇಕೆಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ ಆಗ್ರಹಿಸಿದೆ.
ಈ ಕುರಿತು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಬಸವರಾಜು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಪ್ರೌಢಶಾಲಾ ಸಹಶಿಕ್ಷಕರ ಬೇಸಿಗೆ ರಜೆ ಅವಧಿಯಲ್ಲಿಯೂ ಶಿಕ್ಷಕರು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನ ಕ್ರಿಯೆ, ಚುನಾವಣಾ ಕರ್ತವ್ಯ, ಚೆಕ್ ಪೆÇೀಸ್ಟ್ ನಿರ್ವಹಣೆ, ಮಾಸ್ಟರ್ ಟ್ರೈನರ್, ಬಿ ಎಲ್ ಓ ಯೋಜನೆ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಣೆ ಮಾಡುತ್ತಿದ್ದು. ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳು ಹಾಗೂ ತಂದೆತಾಯಿ ಮತ್ತು ಪತ್ನಿ, ಮಕ್ಕಳ ಶಸ್ತ್ರಚಿಕಿತ್ಸೆ, ಆರೋಗ್ಯ ತಪಾಸಣೆ ಮುಂತಾದುವುಗಳಿಗೆ ಸಮಯವನ್ನು ಮೀಸಲಿಟ್ಟಿರುತ್ತಾರೆ. ಆದರೆ ಇಲಾಖೆ ಏಕಾಏಕಿಯಾಗಿ ಶಿಕ್ಷಕರಿಗೆ ಬೇಸಿಗೆ ರಜೆಯನ್ನು ಕಡಿತಗೊಳಿಸಿರುವ ಕ್ರಮ ಸರಿಯಾದುದಲ್ಲ. ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯ ಫಲಿತಾಂಶ ಉತ್ತಮವಾಗಿ ಬರಬೇಕೆಂಬ ಉದ್ದೇಶದಿಂಧ ಸಂಘಟಿತವಾಗಿ ಶೈಕ್ಷಣಿಕ ಅವಧಿಯಲ್ಲಿ ಪಾಠಬೋಧನೆಯ ಜೊತೆಗೆ ವಿಶೇಷ ತರಗತಿಗಳು, ಪರಿಹಾರಬೋಧನೆ, ಗುಂಪುಅಧ್ಯಯನ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗಮನ ನೀಡುವುದು, ಪಾಸಿಂಗ್ ಪ್ಯಾಕೇಜ್ ಅಭ್ಯಾಸ ಮಾಡಿಸುವುದು, ಮಕ್ಕಳ ಮನೆಗೆ ಬೇಟಿ, ಪೆÇಷಕರ ಸಭೆಗಳು, ತಾಯಂದಿರ ಸಭೆಗಳು, ವಿಷಯಾವಾರು ತಜ್ಞರಿಂದ ತರಬೇತಿಗಳು, ಕಲಿಕಾ ಸಾಮಥ್ರ್ಯಕ್ಕೆ ಅನುಗುಣವಾಗಿ ಗುಂಪು ಅಧ್ಯಯನ ಕೆಲವು ಶಾಲೆಗಳಲ್ಲಿ ರಾತ್ರಿ ವರ್ಗಗಳನ್ನು ತೆಗೆದುಕೊಳ್ಳುವಿಕೆ ಇಷ್ಟೆಲ್ಲಾ ಕಾರ್ಯಗಳನ್ನು ನಿರ್ವಹಿಸುವ ಶಿಕ್ಷಕರ ಮೇಲೆ ಗೌರವ, ಮಾನವೀಯತೆ ಇಲ್ಲ ಎಂಬುದು ಎದ್ದು ಕಾಣುತ್ತದೆ.
ಶಿಕ್ಷಕರು ಇಲಾಖಾ ಕಾರ್ಯದ ಹೊರತಾಗಿಯೂ ಸಿಕ್ಕಿರುವ ಮೇ ತಿಂಗಳ ರಜೆಯ ಅವಧಿಯಲ್ಲಿ ವೈಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಮಯವನ್ನು ಮೀಸಲಿಡಲು ಯೋಜಿಸಿರುತ್ತಾರೆ. ಆದರೆ ಇಲಾಖೆಯ ಅಧಿಕಾರಿಗಳು ದಿಢೀರ್ ಎಂದು ಆದೇಶ ಮಾಡಿದರೆ ವರ್ಷಪೂರ್ತಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಶಿಕ್ಷಕ ಸಮೂಹಕ್ಕೆ ಭಾರಿ ಹೊಡೆತ ಕೊಟ್ಟಂತಾಗುತ್ತದೆ. ಕೂಡಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘ ಆಗ್ರಹಿಸಿದೆ.
ಇದೇ ಸಂದರ್ಭದಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ವಿಜಿನಾರಾಯಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಕುಮಾರ್, ರಾಜ್ಯಪರಿಷತ್ ಸದಸ್ಯ ಧನಂಜಯ, ಉಪಾದ್ಯಕ್ಷ ಸತೀಶ್, ನಾಗೇಶ್, ಎಂ.ಎಸ್.ಸುರೇಶ್ ಸೇರಿದಂತೆ ಹಲವರಿದ್ದರು.