ಆದೇಶ ರದ್ದುಪಡಿಸಲು ವಕೀಲರ ಸಂಘದಿಂದ ಪ್ರತಿಭಟನೆ

ಅಫಜಲಪುರ:ಆ.5:ರಾಜ್ಯ ಸರಕಾರದ ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದೆ ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಎಂ.ಎಲ್.ಪಟೇಲ್ ಬಳೂಂಡಗಿ ಮಾತನಾಡಿ,ಜನನ ಮತ್ತು ಮರಣ ನೋಂದಣಿ ವಿಳಂಬದ ಸಂಬಂಧ ವಿವಾದಗಳು ಏರ್ಪಟ್ಟಲ್ಲಿ ಅಥವಾ ತಿದ್ದುಪಡಿ ಅವಶ್ಯಕವಿದ್ದಲ್ಲಿ ವ್ಯಕ್ತಿಗಳು ಜನನ ಮತ್ತು ನೋಂದಣಿ ಕಾಯ್ದೆ ಕಲಂ-13ರ ಪ್ರಕಾರ ಸ್ಥಳೀಯ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ನೀಡಿ ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಈ ಜನನ ಮತ್ತು ಮರಣ ಪ್ರಮಾಣ ಪತ್ರ ನೀಡುತ್ತಿದ್ದರು.

ಆದರೆ ಕರ್ನಾಟಕ ಸರಕಾರ ಜೆಎಂಎಫ್‍ಸಿ ನ್ಯಾಯಾಲಯದ ಅಧಿಕಾರವನ್ನು ತೆಗೆದು ಉಪ-ವಿಭಾಗಾಧಿಕಾರಿಗಳ ನ್ಯಾಯಾಂಗಕ್ಕೆ ನೀಡಿದೆ.ಇದರಿಂದಾಗಿ ಜನ ಮತ್ತು ಮರಣ ನೊಂದಣಿಗೆ ???ಂದರೆ ಆಗುತ್ತಿದೆ.

ಕ್ರಮಬದ್ಧ ರೀತಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಪಡೆಯಲು ಕಷ್ಟ ಸಾಧ್ಯವಾಗುತ್ತದೆ.ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಈ ಅಧಿಕಾರವನ್ನು ನೀಡಿದ್ದಲ್ಲಿ ದೂರದ ಕಕ್ಷಿದಾರರು ಎಸಿ ಕಚೇರಿಗೆ ಬರಬೇಕಾಗಿದೆ.ಇದರಿಂದ ಜನಸಾಮಾನ್ಯರು ಓಡಾಡಿ ಹರಸಾಹಸ ಪಡಬೇಕಾಗುತ್ತದೆ ಎಂದರು.

ಜನನ ಮತ್ತು ಮರಣ ಪ್ರಮಾಣ ಪತ್ರವು ಅಮೂಲ್ಯ ದಾಖಲೆ.ಶಿಕ್ಷಣ, ಪಾಸ್‍ಪೆÇೀರ್ಟ್, ಉದ್ಯೋಗ, ಆಧಾರ್ ನೋಂದಣಿ,ಇತರ ದಾಖಲೆಗಳಿಗೆ ಜನನ ಪತ್ರ ಇದು ಅಗತ್ಯ. ಆಸ್ತಿ ಕಾನೂನುಬದ್ಧ ವಾರಸುದಾರಿಕೆ ಇತ್ಯಾದಿ ನಿಟ್ಟಿನಲ್ಲಿ ಮರಣ ಪತ್ರ ಅಗತ್ಯ.ಜನನ ಮತ್ತು ಮರಣ ಪತ್ರ ಪ್ರಕರಣಗಳ ಇತ್ಯರ್ಥ ಅಧಿಕಾರವನ್ನು ನೀಡಿರುವುದು ಉಪವಿಭಾಗಾಧಿಕಾರಿಗೆ ನೀಡಿರುವುದು ಕಾನೂನು ದೃಷ್ಟಿಯಿಂದ ಸರಿಯಿಲ್ಲ.

ಈ ಸಂದರ್ಭದಲ್ಲಿ ವಕೀಲರಾದ ಶರತ್ ಪೂಜಾರಿ,ಕೆ.ಜಿ.ಪೂಜಾರಿ,ವಸೀಮ್ ಜಾಗೀರದಾರ,ಅರ್ಜುನ ಕೇರೂರ,ಸಿ.ಎಸ್.ಹಿರೇಮಠ,ಎಸ್.ಎಸ್.ಪಾಟೀಲ್,ಪಿ.ಆರ್.ಪೂಜಾರಿಪ್ರಶಾಂತ್ ಪಾಟೀಲ್,ಎಸ್.ಬಿ.ತಳಕೇರಿ,ಸುರೇಶ್ ಅವಟೆ,ಮೈಹಿಬೂಬಿ ಪಟೇಲ್,ಅನೀತಾ ದೊಡ್ಮನಿ,ಅನೀಲ್ ಜಮಾದಾರ ಸೇರಿದಂತೆ ಇತರೆ ವಕೀಲರು ಪಾಲ್ಗೊಂಡಿದ್ದರು.

ಈಗ ಹೊರಡಿಸಿರುವ ಜನನ ಮತ್ತು ಮರಣ ನೋಂದಣಿ ಸಂಬಂಧ ಕರ್ನಾಟಕ ರಾಜ್ಯ ಸರಕಾರದ ಅಧಿಸೂಚನೆ ವಾಪಸು ಪಡೆದು ಈ ಹಿಂದಿನಂತೆ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಮುಂದುವರಿಸಿ.

ಎಂ.ಎಲ್.ಪಟೇಲ್ ಬಳೂಂಡಗಿ ( ಅಧ್ಯಕ್ಷರು ತಾಲೂಕು ವಕೀಲರ ಸಂಘ ಅಫಜಲಪುರ)