ಆದೇಶ ಪತ್ರ ನೀಡಿಕೆ


ಹಾವೇರಿ,ಏ.3: ಸಮಾಜದ ಕೆಲಸ ಮಾಡಲು ಜಾಗೃತಿ,ಸಂಘಟನೆ ಹಾಗೂ ನಾಯಕತ್ವ ಅಗತ್ಯವಾಗಿ ಬೇಕಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ) ರಾಜಾಧ್ಯಕ್ಷರಾದ ಉಡಚಪ್ಪ ಮಾಳಗಿ ಹೇಳಿದರು.
ನಗರದಲ್ಲಿ ಕಲ್ಯಾಣ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಅವರು ಮಾತನಾಡಿದ ಅವರು ನಮ್ಮ ಕಲ್ಯಾಣ ಸಮಿತಿ ಎಲ್ಲಾ ಅಹಿಂದ ವರ್ಗದ ಜನರ ಆಶೋತ್ತರ-ಬೇಡಿಕೆಗಳನ್ನು ಈಡೇರಿಸುವ ಉದ್ದೇಶವನ್ನು ಹೊಂದಿದೆ.ಕಲ್ಯಾಣ ಸಮಿತಿಯ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ದರಾಗಿ ಸಂಘಟನೆಯನ್ನು ಗಟ್ಟಿಗೊಳಿಸಬೇಕಾಗಿದೆ.ಸಮುದಾಯದ ಜಾಗೃತಿಗಾಗಿ ಹಾಗೂ ಸಂವಿಧಾನಾತ್ಮಕ ಹಕ್ಕೋತ್ತಾಯಕ್ಕಾಗಿ ಜವಾಬ್ದಾರಿ ತೆಗೆದುಕೊಂಡವರು ಸಕ್ರಿಯರಾಗಬೇಕೆಂದು ಉಡಚಪ್ಪ ಮಾಳಗಿ ಸಂಘಟನೆಯ ಬಗ್ಗೆ ತಿಳಿಸಿದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ (ರಿ) ರಾಣೇಬೆನ್ನೂರ ತಾಲ್ಲೂಕಿನ ರಾವುತನಕಟ್ಟಿ ಗ್ರಾಮದ ಮಂಜಪ್ಪ ಹನಮಂತಪ್ಪ ಮಾದರ ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಮತ್ತು ಲಕ್ಷಣ ಪರಸಪ್ಪ ಮಾದರ ಇವರನ್ನು ಗ್ರಾಮ ಘಟಕದ ಉಪಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮತ್ತು ಜಿಲ್ಲಾ ಅಧ್ಯಕ್ಷರಾದ ಮಂಜಪ್ಪ ನಾಗಪ್ಪ ಮರೋಳ ನೇಮಕ ಮಾಡಿದ ಆದೇಶ ನೀಡಲಾಯಿತು.
ಈ ಸಂದರ್ಭದಲ್ಲಿ ಅಲೆಮಾರಿ ಸಮಾಜದ ಜಿಲ್ಲಾಧ್ಯಕ್ಷರಾದ ಶೆಟ್ಟಿ ವಿಬೂತಿ,ಹಾನಗಲ್ ತಾಲ್ಲೂಕಾಧ್ಯಕ್ಷ ಜಗದೀಶ ಹರಿಜನ ಮುಖಂಡರಾದ ನಾಗರಾಜ ಎಚ್,ಚೌಡಪ್ಪ ಎಚ್,ಮೌನೇಶ ಎನ್ ಎಚ್,ನಾಗರಾಜ ಎನ್,ರವಿಚಂದ್ರ ಬಿ ಎಚ್,ಹನಮಂತ ಎಸ್ ಎಚ್,ಅಣ್ಣಪ್ಪ ಎಚ್,ಬಸವರಾಜ ಎಸ್ ಎಚ್,ಮಂಜುನಾಥ ಎಚ್ ಸೇರಿದಂತೆ ಅನೇಕರಿದ್ದರು.