ರಾಯಚೂರು, ಜೂ.೨೬- ಜಿಲ್ಲಾಧಿಕಾರಿ ಮತ್ತು ಯೋಜನಾಧಿಕಾರಿ ಆದೇಶವನ್ನು ಉಲ್ಲಂಘಿಸಿದ ನಗರಸಭೆ ಆಯುಕ್ತ ಗುರುಲಿಂಗಪ್ಪ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಾಫಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ವ್ಯತ್ಯಾಸದ ಹಣವನ್ನು ಪೌರಕಾರ್ಮಿಕರಿಗೆ ಮಂಜೂರು ಮಾಡುವಂತೆ ಜುಲೈ ೭ ರ ೨೦೨೨ ರಂದು ಆದೇಶ ಹೊರಡಿಸಿದ್ದಾರೆ. ಅದರ ಪ್ರಯುಕ್ತ ಸುಮಾರು೧೦ ವರ್ಷಕ್ಕೂ ಮೇಲ್ಪಟ್ಟು ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರ ಸೇವೆಯನ್ನು ಘನ ಸರ್ವೋಚ್ಚ ನ್ಯಾಯಾಲಯ ತೀರ್ಪು ಸಕ್ರಮಗೊಂಡಿರುತ್ತಾರೆ.
ಇದುವರೆಗೆ ನಗರಸಭೆ ಪೌರಾಯುಕ್ತರು ಜಿಲ್ಲಾಧಿಕಾರಿಗಳ ಮತ್ತು ಯೋಜನಾ ನಿರ್ದೇಶಕರು, ಪೌರಾಯುಕ್ತರಿಗೆ ವ್ಯತ್ಯಾಸ ಹಣವನ್ನು ಮಂಜೂರು ಮಾಡಿ ಎಂದು ಅದೇಶಿಸಿದ್ದಾರೆ. ಅನೇಕ ಭಾರೀ ನಾವು ಕೂಡ ಪೌರಯುಕ್ತರಿಗೆ ಮನವಿ ಮಾಡಿದರು.ಇದುವರೆಗೂ ವ್ಯತ್ಯಾಸ ಹಣವನ್ನು ಮಂಜೂರು ಮಾಡದೇ ನಿರ್ಲಕ್ಷ ಮಾಡುತ್ತಿದ್ದು, ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿದರು.
ವಿನಾಕಾರಣದಿಂದ ಪೌರಾಯುಕ್ತರು ಹಲವಾರು ಬಾರಿ ಮಂಜೂರು ಮಾಡುತ್ತೇವೆ ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೊಂದರೆಯಲ್ಲಿರುವ ಕಾರಣ ನಮ್ಮ ಮಕ್ಕಳು ಮುಂದಿನ ಭವಿಷ್ಯಕ್ಕಾಗಿ ಬಾಕಿ ವೇತನ ವ್ಯತ್ಯಾಸ ಹಣವನ್ನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಆದೇಶಿಸಿಬೇಕೆಂದು ಮನವಿ ಮಾಡಿದರು.
ಒಂದುವೇಳೆ ಹಣ ಮಂಜೂರು ಮಾಡುವಲ್ಲಿ ವಿಳಂಬ ಆದರೆ ಪೌರಯುಕ್ತರ ವಿರುದ್ಧ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಾಮ ನಿರ್ದೇಶಿತ ಎಸ್ ರಾಜು, ಲಕ್ಶ್ಮಣ, ಭೀಮೇಶ, ರಾಮಪ್ಪ, ತಿಮ್ಮಪ್ಪ ಸೇರಿದಂತೆ ಉಪಸ್ಥಿತರಿದ್ದರು.