ಆದೇಶವನ್ನು ಹಿಂಪಡೆಯಲು ಮನವಿ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು.26: ಜನನ ಮತ್ತು ಮರಣ ನೋಂದಣಿ ಕಾಯಿದೆ ಪ್ರಕರಣಗಳನ್ನು ಸಿವಿಲ್ ನ್ಯಾಯಾಲಯದಿಂದ ಉಪ ವಿಭಾಗಾಧಿಕಾರಿ ಕಚೇರಿ ವ್ಯಾಪಿಗೆ ವರ್ಗಾಯಿಸಿರುವ ಆದೇಶವನ್ನು ಹಿಂಪಡೆಯುವಂತೆ ತಾಲೂಕು ವಕೀಲರ ಸಂಘ ತಾಲೂಕು ಆಡ‌ಳಿತಕ್ಕೆ ಮನವಿ ಪತ್ರ ಸಲ್ಲಿಸಿತು.
ಜನನ ಮತ್ತು ಮರಣ ನೋಂದಣಿ ಪ್ರಕರಣಗಳು ಇದುವರೆಗೂ ಸಿವಿಲ್ ಮತ್ತು ಜೆಎಂಎಪ್ ಸಿ ನ್ಯಾಯಲಯದಲ್ಲಿ ಇತ್ಯಾರ್ಥಪಡಿಸಲಾಗುತ್ತಿದ್ದವು, ಈಗ ಉಪ ವಿಭಾಗಾಧಿಕಾರಿ ಕಛೇರಿ ವ್ಯಾಪ್ತಿಗೆ ವರ್ಗಾಯಿಸಿರುವುದರಿಂದ ಕಕ್ಷಿದಾರರಿಗೆ, ಜನಸಾಮಾನ್ಯರಿಗೆ ತೊಂದರೆ ಯಾಗುತ್ತದೆ. ಅದ್ದರಿಂದ ಸರ್ಕಾರವು ಈ ಆದೇಶ ವನ್ನು ಹಿಂಪಡೆಯಬೇಕೆಂದು ತಾಲೂಕು ವಕೀಲರ ಸಂಘ  ಉಪ ತಹಶೀಲ್ದಾರ್ ಏಳು ಕೋಟಿಯವರಿಗೆ ಮನವಿ ಪತ್ರ ಸಲ್ಲಿಸಿದರು.

Attachments area