ಆದೇಶಪತ್ರ ವಿತರಣೆ

ಲಕ್ಷ್ಮೇಶ್ವರ,ಆ6: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ಮತ್ತು ಶಿಗ್ಲಿ ಗ್ರಾಮ ಪಂಚಾಯಿತಿಯ 58 ಜನ ಫಲಾನುಭವಿಗಳಿಗೆ ಶುಕ್ರವಾರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಹಾಗೂ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಸರ್ಕಾರದ ವಿವಿಧ ಯೋಜನೆಗಳ ಮಾಶಾಸನ ಮಂಜೂರಾತಿ ಆದೇಶ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು ಸರ್ಕಾರ ಸಾಧ್ಯವಾದ ಮಟ್ಟಿಗೆ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ 72 ತಾಸಿನಲ್ಲಿ ತಲುಪಿಸಲು ಯೋಜನೆ ರೂಪಿಸಿದ್ದು ಅದರ ಅನ್ವಯ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಸಿಬ್ಬಂದಿಯೊಂದಿಗೆ 58 ಜನ ಫಲಾನುಭವಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಆದೇಶ ನೀಡಿರುವದು ಸರ್ಕಾರದ ಕಂದಾಯ ಇಲಾಖೆಯ ಪಾರದರ್ಶಕತೆಗೆ ಕನ್ನಡಿ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಕಂದಾಯ ನಿರೀಕ್ಷಕ ಬಿ ಎಂ ಕಾತ್ರಳ ಗ್ರಾಮ ಲೆಕ್ಕಾಧಿಕಾರಿಗಳಾದ ಬಿ ವೈ ಮಲ್ಲಿಗವಾಡ ಮತ್ತು ಆರ್ ಎನ್ ನೆಗಳೂರು ಇದ್ದರು.