ಆದಿ ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ

ಕಲಬುರಗಿ,ಜು 10: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಅಷ್ಟೋತ್ತರ ಪಾರಾಯಣ ಬಿದ್ದಾಪೂರ ಕಾಲೋನಿಯಲ್ಲಿ ಪ್ರಮೋದ ಭಟ್ಟ ಜೋಶಿ ಚಿಂಚನಸೂರಕರ ಅವರ ಮನೆಯಲ್ಲಿ ಜರುಗಿತು. ಕಲಬುರಗಿ ಬಿದ್ದಾಪೂರ ಕಾಲೋನಿಯ ಆದಿ ಶಂಕರಾಚಾರ್ಯರ ಅಷ್ಟೋತ್ತರ ಸೇವಾ ಸಮಿತಿಯವರು ಆಯೋಜಿಸಿದ ಅಷ್ಟೋತ್ತರ ಪಾರಾಯಣ ಕಾರ್ಯಕ್ರಮದಲ್ಲಿ ಚಂದ್ರಕಾಂತ ಕುಲಕರ್ಣಿ ನಾಗೂರ, ಪಿ.ಹೆಚ್.ಕುಲಕರ್ಣಿ, ಕಿಶೋರ್ ಗೂಳನೂರ,ಪಾಂಡುರಂಗ ಮೋಹರೀರ, ಆನಂದ ಆಲಮೇಲಕರ್,ರಮೇಶ ಹಲಕೋಡಾ,ರಾಮರಾವ ಹಲಕೋಡಾ,ರಾಘವೇಂದ್ರ ಕುಳಗೇರಿ,ಪ್ರಕಾಶ ಕುಲಕರ್ಣಿ, ಗೋಪಾಲಕೃಷ್ಣ ವಜ್ರಗಾಂವ,ಮುರಳೀಧರರಾವಕುಲಕರ್ಣಿ,ಛಾಯಾಚಿತ್ರ ಗ್ರಾಹಕರಾದ ನಾರಾಯಣ ಎಂ ಜೋಶಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು