`ಆದಿ ಯುಗಾದಿ’ ಲಿರಿಕಲ್ ವಿಡಿಯೋ ಬಿಡುಗಡೆ

ಹಿರಿಯ ಸಾಹಿತಿ, ನಿರ್ದೇಶಕ ಡಾ.ವಿ. ನಾಗೇಂದ್ರಪ್ರಸಾದ್  ಒಬ್ಬ ಪರಿಸರ ಪ್ರೇಮಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಕೃಷ್ಣಾವತಾರ’  ಚಿತ್ರಕ್ಕೆ ಸಿರಿ ವೈ.ಎಸ್.ಆರ್.  ನಿರ್ದೇಶನ ಮಾಡಿದ್ದಾರೆ.ಚಿತ್ರದ ಯುಗಾದಿ ಹಬ್ಬಕ್ಕಾಗಿ ವಿಶೇಷ ಹಾಡನ್ನು ಡಾ.ವಿ. ನಾಗೇಂದ್ರಪ್ರಸಾದ್ ಬರೆದಿದ್ದಾರೆ.

‘ಯಗಗಳ ಆದಿ ಯುಗಾದಿ’ ಎಂಬ ಯುಗಾದಿ ಮಹತ್ವ ಸಾರುವ ಸಾಹಿತ್ಯ ಒಳಗೊಂಡ ಈ ಲಿರಿಕಲ್ ವಿಡಿಯೋ ಹಾಡನ್ನು ಮೈಸೂರು ಮಹಾರಾಜ ಯದುವೀರ್ ಒಡೆಯರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ಧಾರೆ

ಮುಂದಿನ ದಿನಗಳಲ್ಲಿ ಇದು ಯುಗಾದಿ ಹಬ್ಬದ ಖಾಯಂ ಹಾಡಾಗುವಂಥ ಎಲ್ಲಾ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಅಷ್ಟೊಂದು ಪರಿಣಾಮಕಾರಿಯಾದ ಸಾಹಿತ್ಯ, ರಾಗಸಂಯೋಜನೆ ಈ ಹಾಡಿನಲ್ಲಿದೆ. ಮ್ಯೂಸಿಕ್ ಬಜಾರ್ ಯು ಟ್ಯೂಬ್ ಚಾನಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ.

ಗುರುಪ್ರಸಾದ್ ಕೆ. ಚಿತ್ರ ನಿರ್ಮಿಸುತ್ತಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಹಾಗೂ  ಇತರರು  ಉಳಿದ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ರಾಜ ಶಿವಶಂಕರ್ ಕ್ಯಾಮೆರಾ, ಎಬಿಎಂ ಸಂಗೀತವಿದೆ.