
ಅಥಣಿ :ಫೆ.25: ಕರ್ನಾಟಕ ರಾಜ್ಯದಲ್ಲಿ ಸುಮಾರು 35 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಆದಿ ಬಣಜಿಗ ಸಮಾಜ ಕನ್ನಡ ನಾಡಿಗೆ ತಮ್ಮದೇಯಾದ ಕೊಡುಗೆ ನೀಡಿದೆ, ಸರಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದೆ, ಕರ್ನಾಟಕ ಸರಕಾರದವರು ಆದಿ ಬಣಜಿಗ ಸಮಾಜವನ್ನು ಗುರುತಿಸುವಂತಹ ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ, ಕೂಡಲೇ ಆದಿ ಬಣಜಿಗ ಸಮಾಜವನ್ನು ಸರಕಾರದ ಗೆಜೆಟ್ಟಿನಲ್ಲಿ ಹಾಕಬೇಕು ಇಲ್ಲದಿದ್ದರೆ ನಾವು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮುಖಂಡ ವಿಜಯ ಹುದ್ದಾರ ಅವರು ಎಚ್ಚರಿಕೆ ನೀಡಿದರು.
ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಆದಿ ಬಣಜಿಗ ಯುವ ವೇದಿಕೆ ಒಕ್ಕೂಟದ ವತಿಯಿಂದ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ
ನಮ್ಮ ಆದಿ ಬಣಜಿಗ ಸಮಾಜ ಸರಕಾರದ ಗೆಜೆಟ್ಟಿನಲ್ಲಿ ಇಲ್ಲದೆ ಇರುವುದರಿಂದ ನಮ್ಮ ಮಕ್ಕಳಿಗೆ ಶೈಕ್ಷಣಿಕ, ಸಾಮಾಜಿಕ ಸೌಲಭ್ಯ ಸಿಗ್ತಾಯಿಲ್ಲ, ಕೆಲವು ಜನ ರಾಜಕಾರಣಿಗಳು ನಮಗೆ ಸಮಜಾಯಿಸಿ ಕೊಟ್ಟು ನಮ್ಮ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ ಅವರ ಸಮಜಾಯಿಷಿ ಉತ್ತರ ಕೇಳಿ ಕೇಳಿ ಸಾಕಾಗಿದೆ, ಇದೀಗ ನಾವು ಸಮಾಜವನ್ನು ಎತ್ತಕಟ್ಟಿ ಹೋರಾಟ ಮಾಡಲು ತಯಾರಾಗಿದ್ದು, ಮುಂದಿನ ದಿನದಲ್ಲಿ ಕರ್ನಾಟಕ ಸರಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಅನಂತರ ಯುವ ವೇದಿಕೆ ಒಕ್ಕೂಟದ ಅಧ್ಯಕ್ಷ ಅಶೋಕ ಮಾರಾಪೂರ ಮಾತನಾಡುತ್ತಾ 1996 ರಿಂದ ಇಲ್ಲಿಯವರೆಗೆ ನಿರಂತರವಾಗಿ ನಮ್ಮ ಸಮಾಜದ ಹೋರಾಟವಿದೆ, ಇಲ್ಲಿಯವರೆಗೆ ಸರಕಾರಕ್ಕೆ ಸುಮಾರು 5 ವರದಿಗಳನ್ನು ಸಲ್ಲಿಸುತ್ತಾ ಬಂದರೂ ಕೂಡ ನಮ್ಮ ಆದಿಬಣಜಿಗ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ, ಆದಿಬಣಜಿಗ ಅಂತ ಬರೆದರೂ ಜಾತಿ ಪ್ರಮಾಣ ಪತ್ರ ಸಿಗ್ತಾಯಿಲ್ಲ ಕೂಡಲೇ ಸರಕಾರ ನಮ್ಮ ಸಮಸ್ಯೆ ನಿವಾರಿಸಬೇಕು, ಇಲ್ಲವಾದಲ್ಲಿ ಬರುವ ಚುನಾವಣೆಯಲ್ಲಿ ನಾವೆಲ್ಲ ಸೇರಿ ತಕ್ಕ ಉತ್ತರ ನೀಡಲಿದ್ದೆವೆ ಎಂದರು ಮತ್ತು ಮಾಜಿ ಡಿಸಿಎಮ್ ಲಕ್ಣ್ಮಣ ಸವದಿ ಅವರು ಕಡೆಗಣಿಸಲ್ಪಟ್ಟ ಸಮಾಜವನ್ನು ಎತ್ತಿಕೊಂಡು ನ್ಯಾಯ ದೊರಕಿಸಿಕೊಡಬೇಕು ಎಂದರು.
ಈ ವೇಳೆ ರಾಜು ಆಲಬಾಳ, ಬಸವರಾಜ ಮಾದಗುಡಿ, ಕುಮಾರ ಗೊಟ್ಟಿ, ಸತೀಶ ಪಾಟೀಲ, ಸ್ವಾಗತ ತೋರಿ, ಕುಮಾರ ಬಿಳ್ಳೂರ, ಅವಿನಾಶ ಹಣಮಾಪೂರ, ಸಂಜು ಹಣಮಾಪೂರ, ರಾಜು ಮರಡಿ, ಪರಮಾನಂದ ಮುನ್ನಾಪ್ಪಗೋಳ, ಕುಮಾರ ಜೋಗಾಣಿ, ದಯಾನಂದ ಸವದತ್ತಿ, ರಾಜು ಕಾಯಾಪೂರೆ, ಸಿದ್ದು ಜೋಗಾಣಿ, ಚಂದ್ರಶೇಖರ ಯಕ್ಸಂಬಿ, ಶ್ರೀಶೈಲ ಹಣಮಾಪೂರ, ಸಿ ಆರ್ ತೋರಿ, ಸುರೇಶ ಬಳ್ಳೊಳ್ಳಿ ಸೇರಿದಂತೆ ಇತರರಿದ್ದರು.