ಆದಿ ಬಣಜಿಗ ಸಮಾಜದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸನ್ಮಾನ

ಆಥಣಿ :ಎ.8: ಸುಮಾರು ವರ್ಷಗಳ ಹೋರಾಟದ ಪ್ರತಿಫಲವಾಗಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ನೇತ್ರತ್ವದ ಸರ್ಕಾರ ನಮ್ಮ ಆದಿ ಬಣಜಿಗ ಸಮಾಜವನ್ನು ಜಾತಿ ಗೆಜೆಟಿಯರ್ ನಲ್ಲಿ ಮತ್ತು 2ಡಿ ಯಡಿ ಮೀಸಲಾತಿ ಪ್ರಕಟಿಸಿರುವುದು ನಮ್ಮ ಸಮಾಜಕ್ಕೆ ನ್ಯಾಯ ದೊರಕಿದ್ದು ಅದಕ್ಕಾಗಿ ಸಹಕರಿಸಿದ ಎಲ್ಲರನ್ನು ಗೌವರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಸಮಾಜದ ಮುಖಂಡರಾದ ಚಂದ್ರಶೇಖರ ನೇಮಗೌಡ ಹೇಳಿದರು.

ಅವರು ಪಟ್ಟಣದಲ್ಲಿನ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸ್ವಗೃಹದಲ್ಲಿ ಲಕ್ಷ್ಮಣ ಸವದಿ ಅವರಿಗೆ ತಾಲೂಕಾ ಆದಿ ಬಣಜಿಗ ಸಮಾಜದ ವತಿಯಿಂದ ಸನ್ಮಾನ ಮಾಡಿ ಮಾತನಾಡುತ್ತಾ ಮೀಸಲಾತಿ ಎಂಬ ಕಂಗಟ್ಟನ್ನು ಬಿಡಿಸಲು ಬಾರದ ಸವಾಲನ್ನು ಅತೀ ಸುಲಭವಾಗಿ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳ ಅತೀ ಆತ್ಮೀಯ ರಾಗಿರುವ ಸವದಿಯವರು ಚುನಾವಣೆ ಸಮಯದಲ್ಲಿ ಪಕ್ಕದ ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಅಲ್ಲಿ ಮರಾಠಿಗರ ಮೀಸಲಾತಿ ಕುರಿತು ನಡೆದ ಸಮಸ್ಯೆಯನ್ನು ಬಗೆಹರಿಸಿದ ರೀತಿಯಲ್ಲಿಯೇ ಕರ್ನಾಟಕದ ಲಿಂಗಾಯತ ಒಳಪಂಗಡಗಳಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಸಮಸ್ಯೆಗೆ ಪರಿಹಾರದ ಸಲಹೆ ನೀಡಿದ್ದು ನಮ್ಮ ಸಾಹುಕಾರರು ಅದಕ್ಕಾಗಿ ಸಾಂಕೇತಿಕವಾಗಿ ಇಂದು ಅವರನ್ನು ಗೌರವಿಸಲಾಗಿದೆ, ಮುಂದೆ ತಾಲೂಕಿನ ನಮ್ಮ ಸಮಾಜದ ಎಲ್ಲ ಮುಖಂಡರ ಸಮ್ಮುಖದಲ್ಲಿ ಅವರನ್ನು ಗೌರವಿವಿಸಲಾಗುವುದು ಎಂದು ಹೇಳಿದರು.

ಈ ವೇಳೆ ಸನ್ಮಾನ ಸ್ವೀಕರಿಸಿದ ಲಕ್ಷ್ಮಣ ಸವದಿ ಅವರು ಮಾತನಾಡಿ ಆದಿ ಬಣಜಿಗ ಸಮಾಜದ ಬಹುದಿನದ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಅನಂತರ ಸಮಾಜದ ಮುಖಂಡರಾದ ಬಸವರಾಜ ಬಿರಾದಾರ, ಅಪ್ಪು ತೆಲಸಂಗ ಅವರು ಮಾತನಾಡಿದರು. ಈ ವೇಳೆ ಆರ್ ಆರ್ ತೆಲಸಂಗ, ಮಲ್ಲಪ್ಪ ಡಂಗಿ, ಗುರಪ್ಪ ಬಿರಾದಾರ, ರಾಜು ಅಳಬಾಳ, ರವಿ ಕೋಟಿ, ಸ್ವಾಗತ ತೋರಿ, ಸುರೇಶ ಅಳಬಾಳ, ಲಕ್ಷ್ಮಣ ತೆಲಸಂಗ, ಆನಂದ ಮಾದಗುಡಿ, ಸುರೇಶ ಅಳಬಾಳ, ಕುಮಾರ ಗೊಟ್ಟಿ, ಬಸವರಾಜ ಬಿರಾದಾರ, ಬಸು ಚಮಕೇರಿ, ಅಪ್ಪು ಆಲಬಾಳ, ಸಂಜೀವ ತೋರಿ, ಬಮನಾಳ ಸರ್, ನಿವಲಗಿ ಸರ್, ಬೈರು ಬಿಜ್ಜರಗಿ, ಅಪ್ಪು ಪಾಟೀಲ, ಗುರಪ್ಪ ಬಿರಾದಾರ, ಸತೀಶ ಪಾಟೀಲ, ಜಗದೀಶ ತೆಲಸಂಗ ಸೇರಿದಂತೆ ಇತರರಿದ್ದರು.