ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಸಮ್ಮೇಳನ

ತಾಳಿಕೋಟೆ:ಮಾ.16: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶ್ರೀಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಾಲಹಳ್ಳಿಮಠದ ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಸಮ್ಮೇಳನಾ ಸಮಿತಿ ವತಿಯಿಂದ ದಿನಾಂಕ 16-03-2023 ರಿಂದ 26-03-2023 ವರೆಗೆ ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ, ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಮ್ಮೇಳನ, ಶ್ರೀ ಸಿದ್ದಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮ, ರುದ್ರಯಾಗ ಮತ್ತು ಚಂಡಿಯಾಗ, ಸಾಮೂಹಿಕ ವಿವಾಹ, ಲಕ್ಷದೀಪೋತ್ಸವ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

       ಮಾರ್ಚ 16 ರಂದು ಬೆಳಿಗ್ಗೆ 10 ಘಂಟೆಗೆ ಸಿದ್ದಾಂತ ಶಿಖಾಮಣಿ ಕರ್ತೃ ಶ್ರೀ ಶಿವಯೋಗಿ ಶಿವಾಚಾರ್ಯರ ಗದ್ದುಗೆಗೆ ಪೂಜೆ ಹಾಗೂ ಮಂಗಳಾರತಿ ನೆರವೆರುವದು, 11 ಘಂಟೆಗೆ ಸಾಲೋಟಗಿಯಿಂದ ಆಗಮಿಸುವ ಶೀವಯೋಗಿ ಶಿವಾಚಾರ್ಯರ ಭಾವಚಿತ್ರ ಹಾಗೂ ಜ್ಯೋತಿಯನ್ನು ಭವ್ಯ ಮೆರವಣಿಗೆಯೊಂದಿಗೆ ಕಲಕೇರಿ ಗ್ರಾಮಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರತಿದಿನ 11 ದಿನಗಳ ಕಾಲ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಸಮ್ಮೇಳನಾಧ್ಯಕ್ಷರಾದ ಷ ಭ್ರ 108 ಪದ್ಮಭಾಸ್ಕರ ನೀಲಕಂಠ ಶಿವಾಚಾರ್ಯ ಧಾರೇಶ್ವರ ಮಹಾರಾಜ ತಿರ್ಥಕ್ಷೇತ್ರ ಆದಿಮಠ ಸಂಸ್ಥಾನ ಧಾರೇಶ್ವರಮಠದ ಪೂಜ್ಯರ ಸಮ್ಮುಖದಲ್ಲಿ ಶ್ರೀ ಸಿದ್ದಾಂತ ಶಿಖಾಮಣಿ ಪ್ರವಚನ ನಡೆಯಲಿದೆ. ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು ಪ್ರವಚನ ನಡೆಸಿಕೊಡುವರು.
       ಮಾರ್ಚ 17 ರಂದು ಬೆಳಿಗ್ಗೆ 6 ಗಂಟೆಗೆ ಕಂಪ್ಲಿಯ ಸಾಂಗತ್ರಯ ವೈಧಿಕ ಪಾಠಶಾಲೆಯ ವೈಧಿಕ ವೃದದಿಂದ ಸಿದ್ದಾಂತ ಶಿಖಾಮಣಿ ಗ್ರಂಥ ಪಾರಾಯಣ ನಡೆಯಲಿದೆ, ಮಾ.17 ರಿಂದ ಮಾ.20 ರ ವರೆಗೆ ಸಮ್ಮೇಳನಾಧ್ಯಕ್ಷರಿಂದ ಇಷ್ಠಲಿಂಗ ವೈಭವ ಮಹಾಪೂಜೆ ನೆರವೆರುವದು.
       ಮಾ.18 ರಂದು ಬೆಳಿಗ್ಗೆ 8 ಗಂಟೆಗೆ ಯಜ್ಞ ಮಂಟಪದ ಉದ್ಘಾಟನೆ ನಡೆಯಲಿದ್ದು, ನಂತರ ಗಂಗಾಪೂಜೆ, ಯಜ್ಞಶಾಲೆಯ ಪ್ರವೇಶ ಹಾಗೂ ಮಹಾರುದ್ರಯಜ್ಞ ಮಂಟಪದ ಉದ್ಘಾಟನೆ ನಡೆಯಲಿದೆ. ಮಾ.18 ರಿಂದ 26 ವರೆಗೆ ರುದ್ರಯಾಗ ಹಾಗೂ ಚಂಡಿಯಾಗ ನಡೆಯಲಿದೆ.

ಮಾರ್ಚ 22ರಂದು ಬೆಳಿಗ್ಗೆ 8-30 ರಿಂದ 1 ಗಂಟೆಯವರೆಗೆ ರುದ್ರಹೋಮ ಜರುಗಲಿದ್ದು ಪ.ಪೂ.ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಗುಂಡಕನಾಳ ಇವರನ್ನು ಕಾಯಕ ಬ್ರಹ್ಮರನ್ನಾಗಿ ಅಹ್ವಾನಿಸಿ ಫೀಠಾಲಂಕಾರಗೊಳಿಸಿ ಅವರ ಪಾದಪೂಜೆಯೊಂದಿಗೆ ಶೇಷ ಮಹಾರುದ್ರ ಯಜ್ಞ ನಡೆಯಲಿದೆ.

       ಮಾರ್ಚ 23 ಹಾಗೂ ಮಾರ್ಚ 24 ರಂದು ಶ್ರೀಮದ್ ಕಾಶಿ ಜ್ಞಾನಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಮಹಾ ಸನ್ನಿದಿ ಅವರಿಂದ ಇಷ್ಠಲಿಂಗ ವೈಭವ ಮಹಾ ಪೂಜೆ ನೆರವೆರುವದು. ಈ ಸಮಯದಲ್ಲಿ ಬೆಂಗಳೂರ ಪ.ಪೂ.ಶ್ರೀ ಷ.ಬ್ರ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಿಭೂತಿಪುರ ಸಂಸ್ಥಾನಮಠದವರು ಉಪಸ್ಥಿತರಿರುವರು.
       ಮಾರ್ಚ.24 ರಂದು ಶ್ರೀ ಆದಿ ಜಗದ್ಗುರು ಪಂಚಾಚಾರ್ಯರ ಯುಗಮಾನೋತ್ಸವ ಮತ್ತು ಅಖೀಲ ಭಾರತ ವೀರಶೈವ ಶಿವಾಚಾರ್ಯ ಸಮ್ಮೇಳನ ನಡೆಯಲಿದ್ದು ರಾಜ್ಯದ ಅನೇಕ ಸ್ಥಳಗಳಿಂದ ಪೂಜ್ಯ ಸ್ವಾಮಿಜಿಗಳು ಸಮ್ಮೇಳನದಲ್ಲಿ ಭಾಗಿಯಾಗುವರು.
  ಮಾ.25 ರಂದು ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದ್ದು, ಅಂದು ಉತ್ತರ ಪ್ರದೇಶ ವಾರಣಾಸಿ ಕಾಶಿ ಜಂಗಮವಾಡಿ ಮಠದ ಪ.ಪೂ.ಪರಮಾಚಾರ್ಯರಾದ ಜ್ಞಾನಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾಂದಗಳವರು ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅನೇಕ ರಾಜಕೀಯ ನಾಯಕರುಗಳು ಆಗಮಿಸಲಿದ್ದಾರೆ.
  ಮಾರ್ಚ.26 ರಂದು ಯಜ್ಞದ ಪೂರ್ಣಾಹುತಿ,ಆದಿ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ಸಮ್ಮೇಳನಾಧ್ಯಕ್ಷರ ಸಾರೋಟ ಮೆರವಣಿಗೆ, ಲಕ್ಷದಿಪೋತ್ಸವ, ಶ್ರೀಸಿದ್ದಾಂತ ಶಿಖಾಮಣಿ ಪ್ರವಚನದ ಸಮಾರೋಪ ಸಮಾರಂಭ, ವಿವಿದ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ವಿಶೇಷ ಸನ್ಮಾನ ನಡೆಯಲಿದೆ ಎಂದು ಶ್ರೀ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಜಾಲಹಳ್ಳಿ ಮಠ ಪ್ರಕಟನೆ ಮೂಲಕ ತಿಳಿಸಿದೆ.