ಆದಿ ಕರ್ನಾಟಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮನವಿ

ಮುಳಬಾಗಿಲು.ನ೧೯-ರಾಜ್ಯದ ಎಸ್ಸಿ ಸಮುದಾಯದಲ್ಲಿ ಆದಿಕರ್ನಾಟಕ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಸಮುದಾಯದ ಏಳಿಗೆಗಾಗಿ ಆದಿ ಕರ್ನಾಟಕ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿ ಸಮುದಾಯದ ಬಡವರಿಗೆ ಅನುಕೂಲ ಕಲ್ಪಿಸಬೇಕೆಂದು ದಲಿತ ಮುಖಂಡ ಕಾರ್ ವಿ.ಶ್ರೀನಿವಾಸ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯದಲ್ಲಿ ೫೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಆದಿ ಕರ್ನಾಟಕ ಸಮುದಾಯದವರಿದ್ದು ಈ ಸಮುದಾಯಕ್ಕೆ ಪ್ರತ್ಯೇಕ ನಿಗಮ ಅವಶ್ಯಕತೆಯಿದೆ, ಎಸ್ಸಿ ಸಮುದಾಯದಲ್ಲಿ ನೂರೊಂದು ಜಾತಿಗಳು ಇದ್ದು ಈ ಎಲ್ಲಾ ಸಮುದಾಯಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸೌಲಭ್ಯಗಳು ದೊರಕಬೇಕಾಗಿದೆ ಆದ್ದರಿಂದ ಪ್ರತ್ಯೇಕ ನಿಗಮ ವ್ಯವಸ್ಥೆಯನ್ನು ಮಾಡಬೇಕು ಇದರಿಂದ ಎಸ್ಸಿ ಸಮುದಾಯದ ಸಣ್ಣ ಪುಟ್ಟ ಜಾತಿಯವರೂ ಸಹಾ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಹಾಯ ಪಡೆಯಲು ಅನುಕೂಲವಾಗುತ್ತದೆ, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.