ಆದಿವಾಸಿ ಕುಟುಂಬಕ್ಕೆ ಆಹಾರ ಪದಾರ್ಥ ಕಿಟ್ ವಿತರಣೆ

ಹನೂರು: ಮೇ.31: ಕೊವೀಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ವಿವಿಧ ಹಾಡಿಯ ಆದಿವಾಸಿ ಪ್ರತಿ ಕುಟುಂಬಕ್ಕೆ 3 ಸಾವಿರ ರೂ, ಬೆಲೆ ಬಾಳುವ ಆಹಾರ ಪದಾರ್ಥಗಳ ಕಿಟ್‍ನ್ನು ವಿತರಣೆ ಮಾಡಿರುವ ತಾಣ ಚಾರಿಟೆಬಲ್ ಟ್ರಸ್ಟ್ ಸೇವಾ ಕಾರ್ಯ ಶ್ಲಾಘನೀಯ ಮತ್ತು ಅನನ್ಯವಾದದ್ದು ಎಂದು ಪಿ.ಜಿ.ಪಾಳ್ಯ ಗ್ರಾ.ಪಂ.ಅಧ್ಯಕ್ಷ ಪರಿಸರ ಪ್ರೇಮಿ ಕೃಷ್ಣಮೂರ್ತಿ ಬಣ್ಣಿಸಿದರು.
ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ 9 ಹಾಡಿಗಳ 450 ಆದಿವಾಸಿ ಕುಟುಂಬಗಳಿಗೆ ತಾಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡಲಾಗಿರುವ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಕೊವೀಡ್-19 ನಿಂದ ಜೀವ ಮತ್ತು ಜೀವನದ ಬೆಲೆ ಎಂತಹದ್ದು ಎಂದು ತಿಳಿಯುವಂತಾಗಿದೆ. ಉಳ್ಳವರೆಲ್ಲರಲ್ಲೂ ಮಾನವೀಯತೆ ಮತ್ತು ಸಹಾಯ ಹಸ್ತ ಚಾಚುವ ಗುಣ ಇರುವುದಿಲ್ಲ. ಇಂತಹವರ ಮಧ್ಯೆ ತಾಣ ಚಾರಿಟೆಬಲ್ ಟ್ರಸ್ಟ್‍ನವರು ವಿಭಿನ್ನವಾಗಿ ನಿಲ್ಲುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷ ಕೃಷ್ಣಮೂರ್ತಿ ಉಳ್ಳವರು ಮತ್ತು ಇನ್ನಿತರೆ ಸಂಘ ಸಂಸ್ಥೆಗಳಿಗೆ ತಾಣ ಚಾರಿಟೆಬಲ್ ಟ್ರಸ್ಟ್‍ನವರು ಮಾದರಿಯಾಗಿದ್ದಾರೆ. ಇವರ ಅನುಪಮ ಸೇವೆಗೆ ನಾನು ಅಭಾರಿಯಾಗಿದೇನೆ. ಗ್ರಾ.ಪಂ.ವ್ಯಾಪ್ತಿಯ ಹಾಡಿಗಳ ಜನತೆ ಪರವಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪಿ.ಜಿ.ಪಾಳ್ಯ ಗ್ರಾ.ಪಂ.ವ್ಯಾಪ್ತಿಯ ಕಡಕಲಕಿಂಡಿ 25, ಹಾವಿನಮೂಲೆ 107, ಮಾವತ್ತೂರು 80, ಯರಗಬಾಳು 40, ಉದ್ದಟ್ಟಿ 30, ಜಿರೀಗೆಗದ್ದೆ 85, ನೆಲ್ಲಿಕತ್ತರಿ 70, ಕೆರೆದಿಂಬ 60, ಗೊಂಬೆಗಲ್ಲು 35 ಒಟ್ಟು 450 ಸೋಲಿಗ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್‍ನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ನೀಲಾ, ಸದಸ್ಯರಾದ ಮಾದೇವ, ಸಿಬ್ಬಂದಿಗಳು ಸೇರಿದಂತೆ ಕೊಳ್ಳೇಗಾಲ ಆರ್‍ಎಫ್‍ಒ ಮಾದೇವಯ್ಯ, ಶಿವರಾಜು, ಮುಖಂಡರುಗಳಾದ ಶಿವರಾಜು, ಗೋವಿಂದರಾಜು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಹಾಡಿಗಳ ಗಿರಿಜನರು ಇದ್ದರು.