ಆದಿಪುರುಷ್ ಟ್ರೈಲರ್ ಗೆ ಎಲ್ಲೆಡೆ ಬಾರಿ ಮೆಚ್ಚುಗೆ

ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ’ಆದಿಪುರುಷ್’ ಚಿತ್ರದ ಟ್ರೇಲರ್  ಬಿಡುಗಡೆಯಾಗಿದ್ದು ಬಾರಿ ಸದ್ದು ಮಾಡಿದೆ. ಹೈದರಬಾದ್‌ನ, ನಂತರ ಮುಂಬೈದಲ್ಲಿ ದೊಡ್ಡ  ಕಾರ್ಯಕ್ರಮ ಮಾಡಿ ಟ್ರೈಲರ್ ಬಿಡುಗಡೆಯಾಗಿದ್ದು ಎಲ್ಲೆಡೆ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಏಕಕಾಲಕ್ಕೆ 70 ದೇಶಗಳಲ್ಲಿ ಆದಿ ಪುರುಷ್ ಚಿತ್ರದ ವಿಡಿಯೋ ತುಣುಕುಗಳು ಹೊರ ಬಂದಿರುವುದು ವಿಶೇಷ.

ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗ ಚಿತ್ರದಲ್ಲಿ ಬಳಸಲಾಗಿದೆ.

  ’ಇದು ನನ್ನ ಪ್ರಭು ರಾಮನ ಕಥೆ. ಮನುಷ್ಯನಾಗಿ ಹುಟ್ಟಿದವ ದೇವರಾದ ಚರಿತೆ. ಅವನ ಬದುಕೆ ಘನತೆಯ ಉತ್ಸವ. ಅದಕ್ಕೆ ಆತನ ಹೆಸರು ರಾಘವ’ ಎನ್ನುವ ಸಂಭಾಷಣೆಯೊಂದಿಗೆ ಶುರುವಾಗುವ 3.15 ನಿಮಿಷದ ಟ್ರೇಲರ್ ನೋಡುಗರನ್ನು ಹೆಚ್ಚು ಆಕರ್ಷಿಸಿದೆ.

ಅತ್ಯುನ್ನತ ದೃಶ್ಯ ವೈಭವ,ಬೃಹತ್ ಪ್ರಮಾಣದ ಹಿಡಿತದ ಕಥಾವಸ್ತು ಮತ್ತು ನಕ್ಷತ್ರದಂತೆ ಹೊಳೆಯುವ ಸಿನಿಮಾದ ಸೀನ್ಸ್‌ಗಳು ಪ್ರಪಂಚದ ಒಂದು ನೋಟವನ್ನು ನೀಡಲಿದೆ. 

ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿಸನೂನ್, ರಾವಣನಾಗಿ ಸೈಫ್‌ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತನಾಗೆ, ವತ್ಸಲ್‌ಸೇತ್, ಸೋನಾಲ್‌ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವ ಮೋತಿವಾಲೆಸಹಾಯ್-ಆಶಿಷ್‌ಮಾತ್ರ. ಅಂದಹಾಗೆ ಚಿತ್ರ ಜೂನ್ 12ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ 3ಡಿ ಮಾದರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.