ಆದಿಪುರುಷ್ ಚಿತ್ರ ಬಿಡುಗಡೆಗೆ ಕ್ಷಣಗಣನೆ

ಹೈದರಾಬಾದ್,ಜೂ.೧೫-ಪ್ರಭಾಸ್ ಮತ್ತು ಓಂ ರಾವತ್ ಕಾಂಬಿನೇಷನ್‌ನ ಆದಿಪುರುಷ್ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಶ್ರೀರಾಂ ಘೋಷಣೆಯೊಂದಿಗೆ ಹಬ್ಬದ ವಾತಾವರಣ ಸೃಷ್ಟಿಸಲಿದೆ ಎಂಬುದು ಪ್ರಭಾಸ್ ಅಭಿಮಾನಿಗಳ ಹೇಳಿಕೆ. ಈ ಚಿತ್ರವು ಈ ಶುಕ್ರವಾರ (ಜೂನ್ ೧೬) ಬಿಡುಗಡೆಯಾಗಲಿದ್ದು, ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿಪ್ರಿಯರು ಈ ಚಿತ್ರವನ್ನು ಮೊದಲ ದಿನ ತೆರೆಯ ಮೇಲೆ ನೋಡಲು ಕಾಯುತ್ತಿದ್ದಾರೆ.
ಬಾಲಿವುಡ್‌ನ ಟಾಪ್ ನಿರ್ಮಾಪಕ ಭೂಷಣ್ ಕುಮಾರ್ ಟಿ ಸಿರೀಸ್ ಬ್ಯಾನರ್‌ನಲ್ಲಿ ೫೦೦ ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಪ್ರಭಾಸ್-ಕೃತಿ ಸನೋನ್ ಅಭಿನಯದ
ಆದಿಪುರುಷ್ ೫೦ ಕೋಟಿಯ ಆರಂಭಿಕ ಗಳಿಕೆ ಮಾಡುವ ಸಾಧ್ಯತೆಯಿದೆ ಮತ್ತು ವಾರಾಂತ್ಯದ ಗಳಿಕೆಯು ೧೭೦ ಕೋಟಿವರೆಗೆ ಹೆಚ್ಚಾಗಬಹುದು ಎಂದು ವ್ಯಾಪಾರ ತಜ್ಞರು ಅಭಿಪ್ರಾಯವಾಗಿದೆ.
ಭಾರತದಲ್ಲಿ ಮುಂಗಡ ಟಿಕೆಟ್ ಮಾರಾಟದ ಮೂಲಕ ಚಿತ್ರವು ಈಗಾಗಲೇ ಸರಿಸುಮಾರು ೩.೫ ಕೋಟಿ ಗಳಿಸಿದೆ.
ಚಿತ್ರ ಬಿಡುಗಡೆಗೆ ಐದಾರು ದಿನ ಬಾಕಿ ಇರುವಾಗಲೇ ಚಿತ್ರ . ’ಆದಿಪುರುಷ್’ ಮೂಲತಃ ಹಿಂದಿ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.
ಆದಿಪುರುಷ ಚಿತ್ರದ ಕನ್ನಡ ಅವತರಣಿಕೆ ಮಾತ್ರವಲ್ಲದೆ, ಎಲ್ಲಾ ಭಾಷೆಗಳ ಸಿನಿ ಪ್ರೇಮಿಗಳಿರುವ ಕರ್ನಾಟಕದಲ್ಲಿ ಹಿಂದಿ ಮತ್ತು ತೆಲುಗು ಅವತರಣಿಕೆಗಳು ಪ್ರದರ್ಶನಗೊಳ್ಳಲಿವೆ. ಬೆಂಗಳೂರು ತೆಲುಗು ಮತ್ತು ಹಿಂದಿ ಅವತರಣಿಕೆಗಳಲ್ಲಿ ಕೂಡ ಕನ್ನಡಕ್ಕಿಂತ ಹೆಚ್ಚಾಗಿ ತೋರಿಸಲಾಗಿದೆ. ತೆಲುಗು ಮತ್ತು ಹಿಂದಿ ಆವೃತ್ತಿಗಳಿಗೆ ಮುಂಗಡ ಬುಕ್ಕಿಂಗ್ ಕೂಡ ಕನ್ನಡ ಆವೃತ್ತಿಗಳಿಗಿಂತ ಮುಂಚಿತವಾಗಿಯೇ ಆರಂಭವಾಗಿತ್ತು.ಚಿತ್ರದಲ್ಲಿ ಪ್ರಭಾಸ್, ಕೃತಿ ಸನನ್, ಸನ್ನಿ ಸಿಂಗ್, ಸೈಫ್ ಅಲಿ ಖಾನ್ ಮತ್ತು ದೇವದತ್ತ ನಾಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಆದಿಪುರುಷವನ್ನು ಟಿ-ಸೀರೀಸ್, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರೆಟ್ರೋಫಿಲ್ಸ್‌ನ ರಾಜೇಶ್ ನಾಯರ್, ಯುವಿ ಕ್ರಿಯೇಷನ್ಸ್‌ನ ಪ್ರಮೋದ್ ಮತ್ತು ವಂಶಿ ನಿರ್ಮಿಸಿದ್ದಾರೆ. ಇದನ್ನು ನಾಳೆ ಜೂನ್ ೧೬, ೨೦೨೩ ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ
ಹಿಂದೂ ಪೌರಾಣಿಕ ಮಹಾಕಾವ್ಯ ರಾಮಾಯಣದಿಂದ ಹೆಚ್ಚು ಪ್ರೇರಿತವಾದ, ಆದಿಪುರುಷನಲ್ಲಿ ಪ್ರಭಾಸ್ ರಾಘವ್ (ರಾಮನ ಇನ್ನೊಂದು ಹೆಸರು) ಮತ್ತು ಕೃತಿ ಸನೋನ್ ಜಾನಕಿ (ಸೀತೆ) ಆಗಿ ಕಾಣಿಸಿಕೊಂಡಿದ್ದಾರೆ. ಸೈಫ್ ಲಂಕಾದ ಅಧಿಪತಿ ರಾವಣ (ಲಂಕೇಶ್ )ಪಾತ್ರದಲ್ಲಿ ನಟಿಸಿದ್ದಾರೆ .ಚಿತ್ರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಯು ಪ್ರಮಾಣಪತ್ರವನ್ನು ಪಡೆದುಕೊಂಡಿದೆ.