
ಶಿವಮೊಗ್ಗ.ಡಿ.೨೬; ನಗರದ ಸಂಸ್ಕೃತ ಭಾರತೀ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ವತಿಯಿಂದ ಸಂಸ್ಕೃತ ವಿದ್ಯಾರ್ಥಿಗಳಿಗೆ ಕುವೆಂಪುರವರ ಸಾಹಿತ್ಯದಲ್ಲಿ ಅಧ್ಯಾತ್ಮ ಎಂಬ ವಿಷಯದ ಬಗ್ಗೆ ಕರ್ನಾಟಕ ರಾಜ್ಯ ಮಟ್ಟದ “30 ನೇ ಸಂಸ್ಕೃತ ಭಾಷಣ ಸ್ಪರ್ಧೆ” ಯನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಆದಿಚುಂಚನಗಿರಿ ಕ್ಷೇತ್ರದ ತಪೋವನದಲ್ಲಿ ಏರ್ಪಡಿಸಲಾಗಿದೆ.: ಸಂಸ್ಕೃತ ಭಾಷೆಯಲ್ಲೇ ಭಾಷಣ ಮಾಡಬೇಕು, 18 ವರ್ಷದಿಂದ 25 ವರ್ಷದ ಒಳಗಿನವರೆಲ್ಲರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಭಾಷಣದ ಅವಧಿ 6 ನಿಮಿಷಗಳು ಮಾತ್ರ, ಸ್ಪರ್ಧೆಗೆ ಹೆಸರು ನೋಂದಾಯಿಸಲು ಕಡೆಯ ದಿನಾಂಕ, 10-01-2021, ಹೊರ ಊರಿನಿಂದ ಬಂದ ಸ್ಪರ್ಧಿಗಳಿಗೆ ಒಂದು ಮಾರ್ಗದ ಬಸ್ ಪ್ರಯಾಣದ ಕನಿಷ್ಠ ವೆಚ್ಚದ ದರವನ್ನು ಕೊಡಲಾಗುವುದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನದ ಜೊತೆಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿದೇವಾಲಯ ಮಾರ್ಗ: (ಬಿ.ಬಿ.ರಸ್ತೆ), ಶಿವಮೊಗ್ಗ, ದೂರವಾಣಿ: 9448790127, ಇಲ್ಲಿಗೆ ಕಳುಹಿಸಿಕೊಡುವಂತೆ ಸಂಸ್ಕೃತ ಭಾರತೀ ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸಬೇಕೆಂದು ಜಿಲ್ಲಾ ಸಂಯೋಜಕ ಟಿ.ವಿ.ನರಸಿಂಹಮೂರ್ತಿ ತಿಳಿಸಿದ್ದಾರೆ.