ಆದಿಗುರು ಶಂಕರಾಚಾರ್ಯ ಜಯಂತಿ ಆಚರಣೆ

ಕಲಬುರಗಿ ಮೇ 17: ನಗರದ ಡಾ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ಇಂದು ಆದಿಗುರು ಶಂಕರಾಚಾರ್ಯರ ಜಯಂತಿಯನ್ನು ವಿಶ್ವ ತತ್ತ್ವಜ್ಞಾನಿಗಳ ದಿನಾಚರಣೆಯಾಗಿ ಆಚರಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಮ್ಮಿಕೊಂಡ ಸರಳ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಲಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿ ಕೋಗನೂರ,ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನರಹರಿ ಪಾಟೀಲ,ಜಿಲ್ಲಾವೀರಶೈವ ಯುವ ಘಟಕದ ಅಧ್ಯಕ್ಷ ಸುರೇಶ ಪಾಟೀಲ ಜೋಗೂರ,ಕನ್ನಡ ಮತ್ತು ಸಂಸ್ಕøತಿ ಇಲಾಖೆಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಲ್ಯಾಣಕರ್ನಾಟಕ ನೇಕಾರ ಮಹಾಸಭಾದ ಸಂಚಾಲಕ ವಿನೋದಕುಮಾರ ಜೇನವೇರಿ,ಪವನ ಫಿರೋಜಾಬಾದ್,ಅರವಿಂದ,ಸಿದ್ದು,ನಾಗವೇಣಿ ,ಗುಂಡಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು