ಆದಿಕವಿ ವಾಲ್ಮೀಕಿ ಜೀವನಕ್ಕೆ ದಾರಿದೀಪ

ಬ್ಯಾಡಗಿ, ನ 1- ಗುರುವಿನ ಅನುಗ್ರಹದಿಂದ ಪ್ರಾಣಿ ಹಿಂಸೆಯನ್ನು ಬಿಟ್ಟು “ರಾಮತಾರಕ” ಮಂತ್ರದಿಂದ ತಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸುವ ಮೂಲಕ ಮಾನವ ಕುಲದ ಜಗತ್ತಿಗೆ ಆದರ್ಶರಾಗಿ ಹೊರ ಹೊಮ್ಮಿದ ಆದಿಕವಿ ವಾಲ್ಮೀಕಿ ಅವರು ಇಂದಿಗೂ ನಮ್ಮ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದು ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಭರಮಪ್ಪ ಓಲೇಕಾರ ಸ್ಮರಿಸಿದರು.
ತಾಲೂಕಿನ ಛತ್ರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯೊಂದಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಸಾರಿದ, ತತ್ವಾದರ್ಶಗಳನ್ನು ಬೋಧಿಸಿದ ದಾರ್ಶನಿಕರಾದ ಮಹರ್ಷಿ ವಾಲ್ಮೀಕಿಯವರ ಜೀವನವೇ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವಕ ಸಂಘದ ಕಾರ್ಯದರ್ಶಿ ಎಸ್.ಎಂ. ಓಲೇಕಾರ, ಪದಾಧಿಕಾರಿಗಳಾದ ಎಂ.ವಿ. ನಿಂಬಣ್ಣನವರ, ಜಗದೀಶ ಪೆÇೀಟೆರ, ಎಸ್.ಎಸ್. ಓಲೇಕಾರ, ಕೆ.ಎಂ. ನಿಂಬಣ್ಣನವರ, ಎನ್.ಜಿ. ಓಲೇಕಾರ, ಎಸ್.ಎನ್. ಪೆÇೀಟೆರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.