ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ

ಕಲಬುರಗಿ,ಅ.31-ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಕಚೇರಿಯಲ್ಲಿ ಇಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಯವರ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ನೆರೆವೇರಿಸುವ ಮೂಲಕ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಂಘದ ಪದಾಧಿಕಾರಿಗಳಾದ ಹಣಮಂತರಾಯ ಗೋಳಸಾರ, ಸಿದ್ದಲಿಂಗಯ್ಯ ಮಠಪತಿ, ಎಸ್.ಆರ್.ಪಲ್ಲೇದ್ ಮಲ್ಲಿನಾಥ್ ಗುಡೇದ್, ಅಣ್ಣಾರಾವ ಹಾಬಾಳಕರ, ಅಶೋಕ ಶಾಬಾದಿ ಜಮೀಲ ಅಹ್ಮದ್ ಹಾಗೂ ಅನುದಾನಿತ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತರಾಯ ಮರಡಿ ಸೇರಿದಂತೆ ಇತರರು ಇದ್ದರು..