ಆದಷ್ಟು ಬೇಗ ಪಿಒಕೆ ಬಿಟ್ಟು ತೊಲಗಿ: ಪಾಕ್‌ಗೆ ಭಾರತ ಕಠಿಣ ಸಂದೇಶ

ನ್ಯೂಯಾರ್ಕ್, ಸೆ.೨೫- ಭಯೋತ್ಪಾದಕರಿಗೆ ನೆರವು ನೀಡುವುದು ಪಾಕಿಸ್ತಾನದ ಜಾಯಮಾನವೇ ಅಗಿದೆ. ಪಿಒಕೆ (ಪಾಕಿಸ್ತಾನ್ ಆಕ್ರಮಿತ ಕಾಶ್ಮೀರ) ಪ್ರದೇಶವನ್ನು ಪಾಕ್ ಆದಷ್ಟು ಬೇಗ ಖಾಲಿಗೊಳಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಭಾರತೀಯ ಕಾರ್ಯದರ್ಶಿ ಸ್ನೇಹಾ ದುಬೆ ಖಾರವಾಗಿ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಅಧಿವೇಶನವನ್ನು ಉದ್ದೇಶಿಸಿ ಇಂದು ಮುಂಜಾನೆ (೨:೫೫) ಪಾಕ್ ಪ್ರಧಾನಿ ಭಾಷಣ ಮಾಡಿದ್ದರು. ಭಾಷಣದಲ್ಲಿ ಭಾರತೀಯ ಸೇನೆ ಕಾಶ್ಮೀರದಲ್ಲಿ ದೌರ್ಜನ್ಯ ನಡೆಸುತ್ತಿವೆ ಎಂದು ಆರೋಪಿಸಿದ್ದರು. ಅಲ್ಲದೆ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ ಉಗ್ರರಿಗೆ ಹಣಕಾಸಿನ ನೆರವನ್ನು ಕೂಡ ವಿಶ್ವ ನೀಡಬೇಕಿದೆ ಎಂದು ಮನವಿ ಮಾಡಿದ್ದರು. ಸದ್ಯ ಖಾನ್ ಭಾಷಣದ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿರುವ ಭಾರತದ (ರೈಟ್ ಟು ರಿಪ್ಲೈ) ಸ್ನೇಹಾ ದುಬೆ, ಭಯೋತ್ಪಾದಕರಿಗೆ ಪಾಕ್ ನೆರವು ನೀಡುತ್ತಲೇ ಬಂದಿದೆ. ಭಾರತದ ವಿರುದ್ಧ ಸುಳ್ಳು ಹಾಗೂ ಕಪೋಲಕಲ್ಪಿತ ಹೇಳಿಕೆ ನೀಡುವುದಕ್ಕೆ ವಿಶ್ವಸಂಸ್ಥೆ ವೇದಿಕೆಯನ್ನು ಪಾಕ್ ಹಲವಾರು ದುರುಪಯೋಗಪಡಿಸಿಕೊಳ್ಳುತ್ತಿ ದುರದೃಷ್ಟದ ಸಂಗತಿ. ಪಾಕ್‌ನಲ್ಲಿ ಭಯೋತ್ಪಾದಕರು ಕೂಡ ಸಾಮಾನ್ಯ ನಾಗರಿಕರಂತೆ ಜೀವಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪಾಕ್‌ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ಭಯೋತ್ಪಾದಕರಿಗೆ ಪಾಕ್ ನೆರವು ನೀಡುತ್ತಿದ್ದು, ಈ ಬಗ್ಗೆ ವಿಶ್ವ ನಾಯಕರು ಎಚ್ಚರಿಕೆಯಿಂದ ಇರಬೇಕು. ಆದಷ್ಟು ಬೇಗ ಪಿಒಕೆ ಪ್ರದೇಶವನ್ನು ಪಾಕ್ ತೆರವುಗೊಳಿಸಬೇಕಿದೆ ಎಂದು ಸ್ನೇಹಾ ತಿಳಿಸಿದ್ದಾರೆ.