ಆದರ್ಶ ಸೈನಿಕ್ ಶಾಲೆಯಲ್ಲಿ ರಂಗೋಲಿ ಸ್ಪರ್ಧೆ

ಬೀದರ್: ಜ.25:ನಗರ ಶಿವನಗರ ಅತಿರದ ಆದರ್ಶ್ ಸೈನಿಕ್ ಶಾಲೆಯಲ್ಲಿ ವಿನೂತನವಾದ ರಂಗೋಲಿ ಸ್ಪರ್ಧೆ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆ ಮುಖ್ಯ ಗುರುಗಳಾದ ಪ್ರೀತಿ ಅಂಜಲ್ ಮಾತನಾಡಿ,ಮಕ್ಕಳು ಓದಿನ ಜೊತೆಗೆ ಇಂತಹ ಕಲಾತ್ಮಕ ಚಟುವಟೀಕೆಯಲ್ಲಿ ಭಾಗಿಯಾಗುವದರಿಂದ ಅವರ ಸವಾರ್ಂಗಿಣ ಅಭಿವೃದ್ದಿ ಸಾಧ್ಯ ಆದರಿಂದ ಮಕ್ಕಳು ಇಂತಹ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರದಲ್ಲಿ ಮಕ್ಕಳು ದೇಶಭಕ್ತಿ ಬಿಂಬಿಸುವ ರಂಗೋಲಿ ಹಾಗೂ ಶ್ರೀರಾಮನ ಭಾವಚಿತ್ರ ರಂಗೋಲಿ ಬಿಡಿಸಿ ಗಮನ ಸೆಳೆದರು..
ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಗಳಾದ ಸತ್ಯ ವೆದೀನಿ, ಶ್ವೇತಾ, ವಿಜಯಲಕ್ಷ್ಮೀ, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.