`ಆದರ್ಶ’ ಸಂಸ್ಕøತಿ ಅನನ್ಯ : ಪ್ರೊ.ಬಿಕೆಸಿ

ಕಲಬುರಗಿ,ಸೆ.12: ಮುಂದಿನ ತಲೆಮಾರಿಗೂ ಸಂಸ್ಕøತಿಗಳ ಪರಿಚಯ ಮಾಡಿಕೊಡುವಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಕೊಡುಗೆ ಅನನ್ಯವಾಗಿದೆ ಎಂದು ಮಾಜಿ ಸಭಾಪತಿ ಮತ್ತು ಮಾಜಿ ಶಿಕ್ಷಣ ಸಚಿವರಾದ ಪ್ರೊ.ಬಿ.ಕೆ.ಚಂದ್ರಶೇಖರ ಹೇಳಿದರು.
ಬೆಂಗಳೂರು ನಗರದ ಗವಿಪುರ ಏರಿಯಾದಲ್ಲಿರುವ ಉದಯಭಾನು ಕಲಾಸಂಘದ ಸಭಾಂಗಣದಲ್ಲಿ ಸಂಜೆ ನಡೆದ ಐವರು ಸಾಧಕರಿಗೆ `ಕನ್ನಡ ನಿತ್ಯೋತ್ಸವ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ 27 ವರ್ಷಗಳಿಂದ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಆದರ್ಶ ಅಕಾಡೆಮಿಯದ್ದು ನಿಸ್ವಾರ್ಥ ಸೇವೆ ಎಂದು ಶ್ಲಾಘಿಸಿದರು.

ಸಮಾರೋಪ ಭಾಷಣ ಮಾಡಿದ ಬಿ.ಎಂ.ಶ್ರೀ ಪ್ರತಿಷ್ಠಾನ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಭೈರಮಂಗಲ ರಾಮೇಗೌಡ, ನಾಡು ನುಡಿ, ಸಂಸ್ಕøತಿ ಪ್ರಸಾರದಲ್ಲಿ ಆದರ್ಶ ಅಕಾಡೆಮಿ ಮತ್ತು ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರದು ಆದರ್ಶಪ್ರಾಯ ಕೊಡುಗೆ ಎಂದರು. ಉದಯಭಾನು ಕಲಾಸಂಘದ ಸಂಸ್ಥಾಪಕ ಕಾರ್ಯದರ್ಶಿ ನರಸಿಂಹ, ಜನಪದ ಹಾಡುಗಾರ ಡಾ.ಅಪ್ಪಗೆರೆ ತಿಮ್ಮರಾಜು ಉಪಸ್ಥಿತರಿದ್ದರು. ಆದರ್ಶ ಅಕಾಡೆಮಿಯ ರೂವಾರಿ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತನಾಡಿದರು.

ಐವರಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ’ ಆದರ್ಶ ಸುಗಮ ಸಂಗೀತ ಅಕಾಡೆಮಿಯ ವತಿಯಿಂದ ಕಲ್ಯಾಣ ಕರ್ನಾಟಕದ ಕಲಬುರಗಿಯ ಕವಿ, ಲೇಖಕ ಮಹಿಪಾಲರೆಡ್ಡಿ ಸೇಡಂ, ಖ್ಯಾತ ಗಾಯಕಿ ಶಶಿಕಲಾ ಸುನೀಲ, ರಂಗಕರ್ಮಿ ಬೆಳ್ಳಿಚುಕ್ಕಿ ವೀರೇಂದ್ರ, ಕನ್ನಡ ಕಟ್ಟಾಳು ಜಾವಗಲ್ ಪ್ರಸನ್ನಕುಮಾರ ಅವರಿಗೆಕನ್ನಡ ನಿತ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರೊ.ಬಿ.ಕೆ.ಚಂದ್ರಶೇಖರ ಅವರು ಐದು ಜನ ಸಾಧಕರಿಗೆ ಶಾಲು ಹೊದಿಸಿ, ಕಾಣಿಕೆ ನೀಡಿ ಸನ್ಮಾನಿಸಿದರು. ಹಿರಿಯ ಸಾಹಿತಿ ಭೈರಮಂಗಲ ರಾಮೇಗೌಡ, ಡಾ.ಕಿಕ್ಕೇರಿ ಕೃಷ್ಣಮೂರ್ತಿ, ಪ್ರೊ.ಶೇಷಾಚಲ, ಜಯರಾಮ್, ಜಯಕುಮಾರ, ರಾಘವೇಂದ್ರ ಜೋಶಿ ಇತರರಿದ್ದರು.