ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕಾರ

ಇಂಡಿ:ಜ.31: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ನವದೆಹಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಧಾರವಾಡ ಮತ್ತು ತಾಲೂಕು ಘಟಕ ಇಂಡಿ ಇವರ ಸಹಯೋಗದಲ್ಲಿ ಅಕ್ಷರದ ಅವ್ವ ಮಾತೆ ಸಾವಿತ್ರಿಬಾಯಿ ಫುಲೆಯವರ ಜಯಂತ್ಯೋತ್ಸವ ಮತ್ತು ಶೈಕ್ಷಣಿಕ ಕಾರ್ಯಾಗಾರ ಹಾಗೂ ಶಿಕ್ಷಕರಿಗೆ ಜ್ಯೋತಿಬಾ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು ಬರಗುಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ ಆರ್ ಬನಸೋಡೆ ಇವರನ್ನು ಅವರ ಸೇವಾ ಮನೋಭಾವವನ್ನು ಗುರುತಿಸಿ ಅವರಿಗೆ ಆದಶ9 ಶಿಕ್ಷಕ ತಾಲೂಕು ಮಟ್ಟದ ಜ್ಯೋತಿಬಾ ಫುಲೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಪ್ರಶಸ್ತಿ ಲಭಿಸಿದ್ದು ಬರಗುಡಿ ಗ್ರಾಮದ ಹಿರಿಯರು ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಶಿವಾಜಿ ಪಾಟೀಲ್ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಶಾಲಾ ಅಭಿವೃದ್ಧಿ ಮಂಡಳಿ ಮತ್ತು ಸಮಸ್ತ ಗ್ರಾಮದ ಗಣ್ಯರು ಹಷ9 ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಶಿಕ್ಷಕರು ಲಚ್ಯಾಣ ಗ್ರಾಮದ ನಿವಾಸಿಗಳಾಗಿ ದ್ದರಿಂದ ಸಮಸ್ತ ಲಚ್ಯಾಣ ಗ್ರಾಮಸ್ಥರು ಶಿಕ್ಷಕರಿಗೆ ಸಂದ ಗೌರವಕ್ಕೆ ಹಷ9ವ್ಯೆಕ್ತ ಪಡಿಸಿದ್ದಾರೆ.