ಆದರ್ಶ ಶಿಕ್ಷಕ ತೀರ್ಥೆ ಕೃತಿ ಲೋಕಾರ್ಪಣೆಸಾಧಕರಿಗೆ ಅಪ್ಪ ಪ್ರಶಸ್ತಿ ಪ್ರದಾನ 17ರಂದು

ಆಳಂದ: ಜ.14:ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಜ. 17ರಂದು ಸಂಜೆ 5:30ಕ್ಕೆ ಪಡಸಾವಳಿ ಗ್ರಾಮದ ಲಿಂ. ಬಸವಂತರಾಯ ತೀರ್ಥೆ ಅವರ 20ನೇ ಸ್ಮರಣೋತ್ಸವ ಹಾಗೂ ಅವರ ಕೃತಿ ಲೋಕಾರ್ಪಣೆ ಮತ್ತು ವಿವಿಧ ಕ್ಷೇತ್ರಗಳ 20 ಸಾಧಕರಿಗೆ ಅಪ್ಪಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಅಪ್ಪಾಸಾಬ ತೀರ್ಥೆ ಅವರು ತಿಳಿಸಿದ್ದಾರೆ.

ಪಟ್ಟಣದಲ್ಲಿ ಈ ಕುರಿತು ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭದ ಸಾನ್ನಿಧ್ಯವನ್ನು ಚಿಂಚನಸೂರ ಕಲ್ಮಠದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು. ಪಡಸಾವಳಿ, ಡೋಣಗಾಂವ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ನೇತೃತ್ವ ವಹಿಸುವರು. ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಅಚಲೇರಿ ಮಠದ ಶ್ರೀ ಬಸವರಾಜೇಂದ್ರ ಶ್ರೀ, ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಶ್ರೀ ಆಗಮಿಸುವರು ಎಂದು ಹೇಳಿದರು.

ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಸಮಾರಂಭವನ್ನು ಉದ್ಘಾಟನೆ ನೆರವೇರಿಸುವರು. ಕೇಂದ್ರೀಯ ವಿವಿ ಕುಲಸಚಿವ ಬಸವರಾಜ ದೊಣ್ಣೂರ ಪ್ರೊ. ಬಸವರಾಜ ಪಿ ದೋಣೂರ ಆದರ್ಶ ಶಿಕ್ಷಕ ಬಸವಂತರಾಯ ತೀರ್ಥೆ ಗುರೂಜಿ ಅವರ ಕೃತಿಯನ್ನು ಲೋಕಾರ್ಪಣೆ ಕೈಗೊಳ್ಳುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಕೃತಿ ಲೇಖಕ, ಜಿಲ್ಲಾ ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ, ಕಜಾಪ ಜಿಲ್ಲಾ ಅಧ್ಯಕ್ಷ ಸಿ.ಎಸ್. ಮಾಟೀಲ, ಸಂಜಯ ಪಾಟೀಲ, ಬಾಬುರಾವ್ ಮಡ್ಡೆ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಶಂಕರ ಹೂಗಾರ ಆಗಮಿಸುವರು. ಕಲ್ಯಾಣರಾವ್ ಪಾಟೀಲ ಸರಸಂಬ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ನಾಗಣ್ಣಾ ಬಿರಾದಾರ ಮತ್ತು ವೈಜನಾಥ ಮೂಲಗೆ ಮತ್ತಿತರು ಇದ್ದರು.