ಆದರ್ಶ ಶಾಲೆಯ ಪ್ರವೇಶ ಪರೀಕ್ಷೆ, ಪಾಲಕರ ಸಿಬ್ಬಂದಿಗಳ ನಡುವೆ ವಾಗ್ವಾದ

ಲಿಂಗಸಗೂರು.ಸ.೨೪-ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಖಾಲಿ ಇರುವ ಸ್ಥಾನಗಳಿಗೆ ಇಂದು ನಡೆದ ಪ್ರವೇಶ ಪರೀಕ್ಷೆ ಸಂದರ್ಭದಲ್ಲಿ ಪಾಲಕರನ್ನು ಒಳಬಿಡುವ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಪಾಲಕರು ಮತ್ತು ವಿದ್ಯಾಲಯದ ಸಿಬ್ಬಂದಿಗಳ ನಡುವೆ ವಾಗ್ವಾದ ನಡೆದ ಘಟನೆ ಜರುಗಿದೆ
ಪಟ್ಟಣದ ಆದರ್ಶ ವಿದ್ಯಾಲಯದ ೨೦೨೧-೨೨ನೇ ಸಾಲಿಗಾಗಿ ೭,೮,ಮತ್ತು ೯ನೇ ತರಗತಿಯ ಖಾಲಿ ಇರುವ ಸ್ಥಾನಕ್ಕೆ ಭರ್ತಿಮಾಡಲು ಪ್ರವೇಶ ಪರೀಕ್ಷೆ ಮಾಡಲಾಯಿತು.
ಇದರಲ್ಲಿ ೭ನೇ ತರಗತಿಗೆ ಪರಿಶಿಷ್ಟ ಜಾತಿ೦೧, ಸಾಮಾನ್ಯ ೧೦, ೮ನೇ ತರಗತಿಗೆ ಸಾಮಾನ್ಯ ೦೧, ಹಾಗೂ ೯ನೇ ತರಗತಿಗೆ ಸಾಮಾನ್ಯ೦೨ ಖಾಲಿ ಉಳಿದ ಸ್ಥಾನಗಳಿಗೆ ಪ್ರವೇಶ ಬಯಸಿ ಒಟ್ಟು ೧೭೯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಪರೀಕ್ಷೆಗೆ ೧೭೭ ವಿದ್ಯಾರ್ಥಿಗಳು ಹಾಜರಾಗಿದ್ದರು ೨ ವಿದ್ಯಾರ್ಥಿಗಳು ಮಾತ್ರ ಗೈರು ಆಗಿದ್ದರು.
ಸದರಿ ಪರೀಕ್ಷೆಯು ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಇಂದು ಜರುಗಿದ್ದು ಪರೀಕ್ಷೆ ಪ್ರಾರಂಭವಾಗುವುದಕ್ಕೆ ಮೊದಲು ಪಾಲಕರು ಯಾರು ಶಾಲಾ ಆವರಣದಲ್ಲಿ ಪ್ರವೇಶವಿಲ್ಲವೆಂದು ತಡೆಹಿಡಿಯಲಾಗಿತ್ತೆಂದು ಹೇಳಲಾಗುತ್ತಿದ್ದು ಆದರು ಕೆಲಪಾಲಕರಿಗೆ ಆ ಸಂದರ್ಭದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು ಇನ್ನು ಕೆಲವರಿಗೆ ನಿಷೇಧಿಸಲಾಯಿತೆಂದು ಇದರಿಂದ ಹಲವಾರು ಪಾಲಕರು ರೊಚ್ಚಿಗೆದ್ದು ಎಲ್ಲರಿಗೂ ಒಂದೇ ನಿಯಮಮಾಡಿರಿ ಇದರಲ್ಲಿಯೆ ಯಾಕೆ ತಾರತಮ್ಯ ಮಾಡುತ್ತಿದ್ದೀರೆಂದು ವಾಗ್ವಾದಕ್ಕೆ ಇಳಿದಿದ್ದಾರೆ. ಕೆಲ ಪಾಲಕರು ಶಾಲೆಯನ್ನು ಪ್ರವೇಶಿಸಿರುವ ದೃಶ್ಯಗಳನ್ನು ಮೊಬೈಲ್ ಮೂಲಕ ಸೆರೆಹಿಡಿಯಲಾಗಿದೆ ಅದು ಶಾಲೆಯ ಪ್ರಾಚಾರ್ಯರ ಗಮನಕ್ಕೆ ಬಂದ ತಕ್ಷಣವೇ ವಿಡಿಯೋ ಮಾಡಿದವರನ್ನು ಸಂಪರ್ಕಿಸಿ ಅವರ ಮೇಲೆ ಒತ್ತಡ ತಂದು ವಿಡಿಯೋ ದೃಶ್ಯಗಳನ್ನು ಮೊಬೈಲ್ ನಲ್ಲಿ ಅಳಿಸಿಹಾಕಿಸಲಾಗಿದೆ ಎನ್ನಲಾಗುತ್ತಿದೆ
ಸದರಿ ಶಾಲೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಶ್ರೀಮಂತರ ಮಕ್ಕಳಿಗೆ ಮಾತ್ರ ಸ್ಥಾನಗಳು ದೊರೆಯತ್ತಿವೆ ಬಡವರ ಮಕ್ಕಳಿಗೆ ಯಾಕೆ ದೊರೆಯುತ್ತಿಲ್ಲ ಎನ್ನುವ ಅಪವಾದಗಳು ಕೇಳಿಬಂದವು.
ಈ ಕುರಿತು ಪತ್ರಿಕೆ ಪ್ರಾಚಾರ್ಯರೊಡನೆ ಮಾತನಾಡಿದಾಗ ಹೇಳಿಕೆ. ನಾವು ಆದರ್ಶ ಶಾಲೆಯನ್ನು ಉತ್ತಮವಾಗಿ ನಡೆಸುತ್ತಿದ್ದೇವೆ ಯಾರಿಗೂ ತಾರತಮ್ಯ ಮಾಡುವುದಿಲ್ಲ ಇಂದು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿಯೊಬ್ಬರು ತಮ್ಮ ಅಣ್ಣನ ಮಗನನ್ನು ಶಾಲೆಯಲ್ಲಿ ಬಿಡಲು ಬಂದಿರುವುದು ನಿಜ ಸಿಬ್ಬಂಧಿಗಳು ಅವರನ್ನು ಒಳಬಿಟ್ಟಿದ್ದಾರೆ ಬೇರೆ ಪಾಲಕರನ್ನು ಬಿಟ್ಟಿರುವುದಿಲ್ಲ ಇದೆ ವಾಗ್ವಾದಕ್ಕೆ ಕಾರಣವಾಗಿದೆ ಎಂದು ಪ್ರಾಚಾರ್ಯ ಸಾಬಣ್ಣ ವಗ್ಗರ್ ವಿವರಿಸುತ್ತಾರೆ.