ಆದರ್ಶ  ವೃದ್ಧಾಶ್ರಮದಲ್ಲಿ ಎಂ.ಜಿ.ಕನಕ ಜನ್ಮದಿನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.08: ಧ್ರುವ ಸರ್ಜಾ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ,  ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಜಿ ಕನಕ ಅವರ ಹುಟ್ಟು ಹಬ್ಬವನ್ನು ತಾಲೂಕಿನ  ಸಂಗನಕಲ್ಲು ಗ್ರಾಮದ ಆದರ್ಶ ಹಿರಿಯರ ವೃದ್ಧಾಶ್ರಮದಲ್ಲಿ ಅನ್ನದಾನ ಸೇವೆ ಮಾಡುವ ಮೂಲಕ ಧ್ರುವ ಸರ್ಜಾ ಅಭಿಮಾನಿಗಳು,  ಕನಕ ಅವರ ಸಹವರ್ತಿಗಳು ಆಚರಿಸಿದರು
ನಂತರ ಕನಕ ಅವರು ತಮ್ಮ ಸ್ನೇಹಿತರೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು  ಮರ- ಗಿಡಗಳಿಗೆ ಬುಟ್ಟಿಗಳನ್ನು ಕಟ್ಟಿ ನೀರು ಹಾಕಿದರು.
 ಯಾರೇ ಆಗಲಿ ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸಬೇಡಿ ಏಕೆಂದರೆ ನಿಮ್ಮ ಪ್ರತಿಯೊಂದು ಚಲನವಲನಗಳನ್ನು ನಿಮ್ಮ ಮಕ್ಕಳು ನೋಡುತ್ತಾ ಬೆಳೆಯುತ್ತಾರೆ.  ಇಂದು ನಿಮ್ಮ ತಂದೆ ತಾಯಿಗೆ ಆದ ಪರಿಸ್ಥಿತಿ, ನಾಳೆ ನಿಮ್ಮ ಮಕ್ಕಳು ನಿಮ್ಮನ್ನು ವೃದ್ಧಾಶ್ರಮಕ್ಕೆ ಕಳುಹಿಸಬಹುದು. ಹಾಗಾಗಿ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಆಗ ಇಂಥ ಹಿರಿಯರ ವೃದ್ಧಾಶ್ರಮನೇ ಇರುವುದಿಲ್ಲ ಎಂದರು.
ಆಶ್ರಮದ ಮುಖ್ಯಸ್ಥ  ವೆಂಕೋಬ,  ಮುಖಂಡರಾದ ವಿ.ಎನ್ ಶ್ರೀನಾಥ್, ಹುಲುಗಪ್ಪ, ಗಾದಿಲಿಂಗಪ್ಪ, ನಗರ ಅಧ್ಯಕ್ಷ ಉಮಾರ್ ಫಾರೂಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೈ.ಅರುಣ್ ಕುಮಾರ್ ಪದಾಧಿಕಾರಿಗಳಾದ ಸಿ.ತಿಪ್ಪೇರುದ್ರ, ಯೋಗೇಶ್ ಭಂಡಾರಿ, ಗಂಗಾಧರ, ಸಂಗನಕಲ್ಲು ಆಪ್ತಮಿತ್ರ ಭಾಷಾ, ಪವನ್, ಸ್ವಾಮಿ, ಮೋಕಾ ಶೇಷಾವಲಿ, ಅಂದ್ರಾಳ್ ಮಂಜು, ಸೇರಿದಂತೆ ಧ್ರುವ ಸರ್ಜಾ ಅವರು ಅಭಿಮಾನಿಗಳು ಹಾಗೂ ಎಂ.ಜಿ ಕನಕ ಅವರು ಅಭಿಮಾನಿಗಳು ಉಪಸ್ಥಿತರಿದ್ದರು.