ಆದರ್ಶ ವಿದ್ಯಾರ್ಥಿಗಳಿಂದ ೧೦೦% ಫಲಿತಾಂಶ

ಅರಕೇರಾ,ಮೇ.೦೯- ಪಟ್ಟಣದಲ್ಲಿನ ಸರಕಾರಿ ಆದರ್ಶ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ೨೦೨೨-೨೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮವಾದ ಸಾಧನೆಮಾಡಿದ್ದು ಪರೀಕ್ಷೆಗೆ ಹಾಜರಾದ ಒಟ್ಟುವಿದ್ಯಾರ್ಥಿಗಳು೫೪ ಜನ ತೇರ್ಗಡೆಯಾದವರು ೫೪ ಜನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮಸಾಧನೆಮಾಡಿ ಸರಕಾರಿ ಆದರ್ಶವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ೧೦೦ಕ್ಕೆ ನೂರಷ್ಟು ಬಂದಿದೆ ಎಂದು ಮುಖ್ಯೋಪಾಧ್ಯಾಯರಾದ ಕುಮಾರಸ್ವಾಮಿ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉನ್ನತಶ್ರೇಣೆಯಲ್ಲಿ ಉತ್ತೀರ್ಣ ೭ಜನ ವಿದ್ಯಾರ್ಥಿಗಳು ಪ್ರಥಮಶ್ರೇಣೆಯಲ್ಲಿ ೪೨ ಜನ ದ್ವೀತಿಯ ಶ್ರೇಣೆಯಲ್ಲಿ ೫ಜನ ತೇರ್ಗೆಡೆಯಾಗಿದ್ದಾರೆ. ೫೪ ಜನ ವಿದ್ಯಾರ್ಥಿಗಳ ಪೈಕಿ೨೯ ಜನ ವಿದ್ಯಾರ್ಥಿಗಳು೨೫ ಜನವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು
ಅತಿಹೆಚ್ಚು ಅಂಕಪಡೆದವರು ಮಲ್ಲಿಕಾರ್ಜುನ ತಂದೆ ಬಸವರಾಜ ೬೨೫ ಅಂಕಗಳಿಗೆ ೫೮೭ ಪಡೆದು ಶೇ೯೩.೯೨% ಅಂಕಪಡೆದು ಶಾಲೆ ಮತ್ತು ಅರಕೇರಾ ವಲಯಕ್ಕೆ ಪ್ರಥಮಸ್ಥಾನ ಪಡೆದಿರುತ್ತಾನೆ.ಆದಿತ್ಯ ತಂದೆ ಅರ್ಜುನಬಿರಾದಾರ್ ೬೨೫ ಅಂಕಗಳಿಗೆ ೫೮೧ ಪಡೆದು ಶೇ೯೨.೯೬% ಪಡೆದುಕೊಂಡು ಶಾಲೆಗೆ ದ್ವೀತಿಯ ಸ್ಥಾನಪಡೆದಿರುತ್ತಾನೆ.ಸೃಷ್ಟಿತಂದೆ ಸೂಗೂರೇಶ ೬೨೫ ಅಂಗಳಿಗೆ ೫೭೬ ಅಂಕಪಡೆದು ಶೇ೯೨.೧೬ ಶಾಲೆಗೆ ತೃತಿಯಸ್ಥಾನ ಪಡೆದುಕೊಂಡಿದ್ದಾಳೆ.ಗುಣಾತ್ಮಕವಾದ ಫಲಿತಾಂಶವನ್ನು ತರುವುದರಲ್ಲಿ ಶಾಲೆಯ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಬಹುದಾಗಿದೆ ಒಟ್ಟಾರೆ ಫಲಿತಾಂಶನೂರಕ್ಕೆ ನೂರಷ್ಟು ಲಬಿಸಿದೆ.
ಶಾಲೆಗೆ ಕೀರ್ತಿ ತಂದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಕುಮಾರಸ್ವಾಮಿ ಹಿರೇಮಠ ಶಾಲೆಯ ಎಲ್ಲಾ ಶಿಕ್ಷಕಸಿಬ್ಬಂದಿವರ್ಗದವರು ಹಾಗೂ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷರಾದ ಸೂಗೂರೇಶ್ವರ ಎಸ್ ಗುಡಿ ಮತ್ತು ಸರ್ವಸದಸ್ಯರುಗಳು ಪಟ್ಟಣದಲ್ಲಿ ಶಿಕ್ಷಣಪ್ರೇಮಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹೆಚ್ಚು ಅಂಕಪಡೆದುಕೊಂಡವರ ಭಾವಚಿತ್ರ
೧)ಮಲ್ಲಿಕಾರ್ಜುನ ತಂದೆ ಬಸವರಾಜ.
೨)ಆದಿತ್ಯ ತಂದೆ ಅರ್ಜುನಬಿರಾದಾರ್.
೩)ಸೃಷ್ಟಿ ತಂದೆ ಸೂಗೂರೇಶ.